BBK 12: ಸೂರಜ್​ ಜೊತೆಗೆ ನನ್ನದು 'ಪವಿತ್ರ ಬಂಧನ' ಎನ್ನುತ್ತಲೇ ಬಗ್ಗೆ ರಾಶಿಕಾ ಶೆಟ್ಟಿ ಓಪನ್ನಾಗಿ ಹೇಳಿದ್ದೇನು?

Published : Jan 13, 2026, 06:34 PM IST

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ರಾಶಿಕಾ ಶೆಟ್ಟಿ, ಸಹ ಸ್ಪರ್ಧಿ ಸೂರಜ್ ಸಿಂಗ್ ಜೊತೆಗಿನ ತಮ್ಮ ಆತ್ಮೀಯ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಮನೆಯಲ್ಲಿ ಸೂರಜ್ ತಮಗೆ ಹೇಗೆ ಆಪ್ತರಾಗಿದ್ದರು ಮತ್ತು ಅವರೊಂದಿಗಿನ ತಮ್ಮ ಸ್ನೇಹವನ್ನು 'ಪವಿತ್ರ ಬಂಧನ' ಎಂದು ರಾಶಿಕಾ ಬಣ್ಣಿಸಿದ್ದಾರೆ.

PREV
16
ರಾಶಿಕಾ ಶೆಟ್ಟಿ ಎಲಿಮಿನೇಟ್​

ಬಿಗ್​ಬಾಸ್​ನಿಂದ ರಾಶಿಕಾ ಶೆಟ್ಟಿ ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದಾರೆ. ರಾಶಿಕಾ ಶೆಟ್ಟಿ ಅವರು, ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದೇ ಸೂರಜ್​ ಸಿಂಗ್​ ಅವರ ಜೊತೆಗಿನ ಆತ್ಮೀಯ ಒಡನಾಟದಿಂದ. ಸೂರಜ್​ ಅವರು ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಾಗ ಈ ಮನೆಯ ಸುಂದರಿಗೆ ಗುಲಾಬಿ ಕೊಡಬೇಕು ಎಂದಾಗ ಅವರು ಅದನ್ನು ಕೊಟ್ಟಿದ್ದು ರಾಶಿಕಾ ಅವರಿಗೆ.

26
ಸೂರಜ್​ ಸಿಂಗ್​ ವಿಷ್ಯ

ಅಲ್ಲಿಂದಲೇ ಅವರ ಸ್ನೇಹ ಶುರುವಾಗಿತ್ತು. ಒಂದು ಹಂತದಲ್ಲಿ ಬಿಗ್​ಬಾಸ್​ ವೀಕ್ಷಕರಿಗೆ ರಾಶಿಕಾ ಶೆಟ್ಟಿ ಅವರೇ ಸೂರಜ್​ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಎನ್ನಿಸಿದ್ದು ಉಂಟು. ಅವರ ಜೊತೆಯಲ್ಲಿಯೇ ಇರುವುದು, ಅವರ ಬಳಿ ಮಾತ್ರ ಮಾತನಾಡುವುದು... ಇಂಥ ಘಟನೆಗಳು ಹಲವಾರು ನಡೆದಿದ್ದವು.

36
ಬಿಕ್ಕಿ ಬಿಕ್ಕಿ ಅತ್ತಿದ್ದರು

ಆ ಬಳಿಕ ಸೂರಜ್​ ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಾಗ, ರಾಶಿಕಾ ಶೆಟ್ಟಿ ಬಿಕ್ಕಿಬಿಕ್ಕಿ ಅತ್ತಿದ್ದರಿಂದಲೂ ಇವರಿಬ್ಬರ ನಡುವೆ ಸಮ್​ಥಿಂಗ್​ ಇದೆ ಎಂದೇ ಹೇಳಲಾಗುತ್ತಿತ್ತು. ಇದೀಗ ಅವರು ಹೊರ ಬಂದ ಮೇಲೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

46
ಅವರ ಬಗ್ಗೆ ಗೊತ್ತು

ಸೂರಜ್​ ಅವರು ಎಷ್ಟು ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅದಕ್ಕಾಗಿಯೇ ಅವರ ಮೇಲೆ ಸ್ನೇಹ ಇರೋದು ನಿಜ. ಅವರ ಪವಿತ್ರ ಬಂಧನ ಸಿನಿಮಾ ಪ್ರಮೋಷನ್​ಗೂ ನಾನು ನನ್ನೆಲ್ಲಾ ಕಮಿಟ್​ಮೆಂಟ್​ ಬಿಟ್ಟು ಹೋಗಿದ್ದು ಕೂಡ ಇದೇ ಕಾರಣಕ್ಕೆ ಎಂದಿದ್ದಾರೆ.

56
ಪವಿತ್ರ ಬಂಧನ

ಬಿಗ್​ಬಾಸ್​ ಮನೆಯಲ್ಲಿ ನನ್ನ ಪವಿತ್ರ ಬಂಧನ ಯಾರ ಜೊತೆ ಎಂದು ಹೇಳುವುದಾದರೆ, ಅದು ಸೂರಜ್​ ಜೊತೆಗೆನೇ. ಅವರು ಬಿಗ್​ಬಾಸ್​ ಮನೆಗೆ ಬಂದಿರಲಿಲ್ಲವೆಂದರೆ, ನನಗೆ ಯಾರ ಜೊತೆನೂ ಫ್ರೆಂಡ್​ಷಿಪ್​ ಆಗ್ತಾ ಇರಲಿಲ್ಲ. ಯಾರ ಜೊತೆನೂ ಕಂಫರ್ಟ್​ ಎನ್ನಿಸುತ್ತಾ ಇರಲಿಲ್ಲ ಎಂದಿದ್ದಾರೆ ರಾಶಿಕಾ ಶೆಟ್ಟಿ (Bigg Boss Rashika Shetty)

66
ಎಲ್ಲಾ ವಿಷಯ...

ಅವರು ನನ್ನ ಎಲ್ಲಾ ವಿಷಯಗಳನ್ನೂ ಹಂಚಿಕೊಳ್ಳುತ್ತಿದ್ದರು. ಕೆಲವೊಮ್ಮೆ ಏನಾದರೂ ಸಮಸ್ಯೆ ಬಂದಾಗ ಮನಸ್ಸಿನಲ್ಲಿ ಇದ್ದುದನ್ನು ಹೇಳಿಕೊಳ್ಳಲು ಒಬ್ಬರು ಬೇಕಾಗುತ್ತದೆ. ಆಗ ನೆರವಾಗಿದ್ದೇ ಅವರು. ನಾನು ಏನೇ ಕನ್​ಫ್ಯೂಸ್​ನಲ್ಲಿ ಇದ್ದರೂ ಅದನ್ನು ಅವರು ಬಗೆರಿಸುತ್ತಿದ್ದರು ಎಂದಿದ್ದಾರೆ ರಾಶಿಕಾ. ಅವರೊಬ್ಬರೇ ಕೊನೆಯವರೆಗೂ ಎಲ್ಲೂ ನನ್ನನ್ನು ಬಿಟ್ಟು ಕೊಟ್ಟಿರಲಿಲ್ಲ. ನನ್ನ ಮನಸ್ಸಿನ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಲು ನನಗೆ ಖುಷಿಯಾಗುತ್ತಿತ್ತು. ಆದ್ದರಿಂದ ಅವರ ಜೊತೆ ಚೆನ್ನಾಗಿ ಒಡನಾಟ ಬೆಳೆಸಿದ್ದೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories