Karna Serial: ರಮೇಶ್‌ನ ಕುತಂತ್ರವನ್ನು ಆತನ ಹೆಂಡತಿ ಮಾಲತಿಯೇ ಕರ್ಣನ ಮುಂದೆ ಬಯಲು ಮಾಡುತ್ತಾಳೆ. ಕಾಣೆಯಾಗಿದ್ದ ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿದು, ಕರ್ಣ ಮತ್ತು ನಿತ್ಯಾ ಆತನನ್ನು ಹುಡುಕಲು ಹನಿಮೂನ್ ನೆಪದಲ್ಲಿ ಹೊರಡುತ್ತಾರೆ.
ಇಂದು ಕರ್ಣ ಸೀರಿಯಲ್ ಒಂದು ಗಂಟೆಯ ಮಹಾಸಂಚಿಕೆ ಪ್ರಸಾರವಾಗಲಿದೆ. ಮದುವೆಯಾದ ಗಳಿಗೆಯಿಂದ ನಿತ್ಯಾ ಕಣ್ಣೀರಿನಲ್ಲಿಯೇ ಕೈ ತೊಳೆಯುತ್ತಿದ್ದಾಳೆ. ತೇಜಸ್ ಎಲ್ಲಿ ಹೋದ? ತನ್ನ ಭವಿಷ್ಯ ಏನು ಎಂದು ನಿತ್ಯಾ ಚಿಂತೆಯಲ್ಲಿದ್ದಾಳೆ. ಇದೀಗ ಕರ್ಣ ಹೇಳಿದ ವಿಷಯ ಕೇಳಿ ನಿತ್ಯಾ ಖುಷಿಯಾಗಿದ್ದಾಳೆ. ನಿತ್ಯಾ ಮತ್ತು ಕರ್ಣನ ಮುಖದಲ್ಲಿನ ಸಂತೋಷ ಕಂಡು ರಮೇಶ್ ಮಾತ್ರ ಇಂಗು ತಿಂದು ಮಂಗನಂತೆ ಮುಖ ಮಾಡಿದ್ದಾನೆ.
25
ಚಿಕ್ಕಮಗಳೂರಿನಲ್ಲಿ ತೇಜಸ್
ಕರ್ಣನ ನಗು ಕಿತ್ತುಕೊಳ್ಳಲು ರಮೇಶ್ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದು, ನಿಧಿ ಮತ್ತು ನಿತ್ಯಾ ಜೀವನದಲ್ಲಿಯೂ ಆಟವಾಡುತ್ತಿದ್ದಾನೆ. ನಿಧಿ ಪ್ರೀತಿಯನ್ನು ಕಿತ್ತುಕೊಂಡು ನಿತ್ಯಾಳಿಗೆ ಬಲವಂತವಾಗಿ ನೀಡಿದ್ದಾನೆ. ಇತ್ತ ನಿತ್ಯಾ ಮದುವೆಯಾಗಬೇಕಿದ್ದ ತೇಜಸ್‌ನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿಟ್ಟಿದ್ದಾನೆ. ರಮೇಶ್‌ನ ಈ ಕುತಂತ್ರಕ್ಕೆ ತೇಜಸ್ ಪೋಷಕರು ಸಾಥ್ ನೀಡಿದ್ದಾರೆ.
35
ಮಾಲತಿಗೆ ಗೊತ್ತಾಯ್ತು ವಿಷಯ
ರಮೇಶ್ ಫೋನ್‌ನಲ್ಲಿ ತೇಜಸ್ ಪೋಷಕರ ಜೊತೆ ಮಾತನಾಡಿ, ಇನ್ನಷ್ಟು ದಿನ ಈ ನಾಟಕ ಮುಂದುವರಿಬೇಕು ಎಂದು ಹೇಳುತ್ತಾನೆ. ಈ ಎಲ್ಲಾ ಮಾತುಗಳನ್ನು ರಮೇಶ್‌ನ ಹೆಂಡತಿ ಮಾಲತಿ ಕೇಳಿಸಿಕೊಂಡಿದ್ದಾಳೆ. ಈ ವಿಷಯವನ್ನು ಮಾಲತಿ ನೇರವಾಗಿ ಕರ್ಣನಿಗೆ ತಿಳಿಸಿದ್ದಾಳೆ. ಕರ್ಣ ತಡಮಾಡದೇ ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಷಯವನ್ನು ನಿತ್ಯಾಗೆ ಹೇಳಿದ್ದಾನೆ.
ತೇಜಸ್‌ನನ್ನು ಹುಡುಕಿಕೊಂಡು ನಿತ್ಯಾ ಮತ್ತು ಕರ್ಣ ಚಿಕ್ಕಮಗಳೂರಿಗೆ ಹೋಗಲು ರೆಡಿಯಾಗಿದ್ದಾರೆ. ಇವರಿಬ್ಬರ ತಯಾರಿ ನೋಡಿದ ರಮೇಶ್, ಹನಿಮೂನ್‌ಗೆ ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾನೆ. ತಂದೆ ರಮೇಶ್‌ಗೆ ಯಾವುದೇ ಕಾರಣಕ್ಕೂ ವಿಷಯ ಹೇಳಬೇಡ ಅಂತ ಮಾಲತಿ ಮಾತು ತೆಗೆದುಕೊಂಡಿದ್ದಾಳೆ. ಹಾಗಾಗಿ ಹನಿಮೂನ್ ನೆಪದಲ್ಲಿ ತೇಜಸ್‌ನನ್ನು ಹುಡುಕಲು ನಿತ್ಯಾ-ಕರ್ಣ ಹೋಗಲಿದ್ದಾರೆ.
ತೇಜಸ್ ಸಿಕ್ಕರೆ ನಿಧಿ ಪ್ರೀತಿಯನ್ನು ಉಳಿಸಿಕೊಳ್ಳಬಹುದು ಎಂಬ ಖುಷಿಯಲ್ಲಿ ಕರ್ಣನಿದ್ದಾನೆ. ಪ್ರೀತಿಯನ್ನು ಕಳೆದುಕೊಂಡೆ ಎಂಬ ದುಃಖದಲ್ಲಿರುವ ನಿಧಿ ಮುಂದೇನು ಮಾಡಬೇಕೆಂದು ತಿಳಿಯದೇ ಚಿಂತೆಯಲ್ಲಿದ್ದಾಳೆ. ಆದಷ್ಟು ಬೇಗ ಕರ್ಣನ ಮನೆಯಿಂದ ದೂರವಾಗುವ ಕುರಿತು ಯೋಚಿಸುತ್ತಿದ್ದಾಳೆ.