Kannada Serial TRP: ಅಂಥ ಟ್ವಿಸ್ಟ್‌ ಕೊಟ್ರು, ಸೀರಿಯಲ್‌ ಮತ್ತೆ No 1 ಸ್ಥಾನಕ್ಕೆ ಬಂತು! ಯಾವುದು?

Published : Oct 30, 2025, 01:57 PM IST

Kannada Serial TRP 2025: ವಾರದಿಂದ ವಾರಕ್ಕೆ ಟಿಆರ್‌ಪಿ ಏರಿಳಿತ ಆಗುವುದು. ಈ ಬಾರಿ ಕೂಡ ಸೀರಿಯಲ್‌ನಲ್ಲಿ ಬಹಳ ವ್ಯತ್ಯಾಸ ಕಂಡು ಬಂದಿದೆ. ಟ್ವಿಸ್ಟ್‌ಗಳಿಂದಲೇ ಈ ಬಾರಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಆ ಸೀರಿಯಲ್‌ ಯಾವುದು?

PREV
110
ಟಾಪ್‌ 10 ಧಾರಾವಾಹಿಗಳು ಯಾವುವು?

ಈ ವಾರ ನಂಬರ್‌ 1 ಸ್ಥಾನ ಪಡೆದ ಸೀರಿಯಲ್‌ ಯಾವುದು? ಯಾವ ಸೀರಿಯಲ್‌ಗಳು ಟಾಪ್‌ 10 ಸ್ಥಾನದಲ್ಲಿವೆ? 

210
ಪ್ರೇಮಕಾವ್ಯ ಧಾರಾವಾಹಿ

4.3 TVR

ಈ ಧಾರಾವಾಹಿಯಲ್ಲಿ ರಾಮ್‌ಗೆ ಪ್ರೇಮಾ ಮೇಲೆ ಕರುಣೆ ಬಂದಿದೆ. ಮದುವೆಯಾಗಿದೆ, ಸ್ನೇಹಾಳಿಂದ ದೂರ ಇರಬೇಕು ಎನ್ನೋದು ಅವನಿಗೆ ಅರಿವಾಗಿದೆ. ಗೊತ್ತೋ ಗೊತ್ತಿಲ್ಲದೆ ಕಾವ್ಯ ತನ್ನ ಗಂಡನಿಗೆ ಹತ್ತಿರ ಆಗುತ್ತಿದ್ದಾಳೆ.

310
ನಂದಗೋಕುಲ ಧಾರಾವಾಹಿ

5.7 TVR

ವಲ್ಲಭ ಹಾಗೂ ಅಮೂಲ್ಯ ಮದುವೆ ಆಗಿದೆ. ಮೂರನೇ ಮಗನು ಕೂಡ ಹೀಗೆ ಮಾಡಿದ್ನಲ್ಲ ಅಂತ ನಂದಕುಮಾರ್‌ಗೆ ಬೇಸರ ಆಗಿದೆ. ಇನ್ನೊಂದು ಕಡೆ ಗಿರಿಜಾಳೇ ಈ ಮದುವೆಗೆ ಕಾರಣ ಎಂದು ಯಾರಿಗೂ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಏನಾಗಲಿದೆಯೋ ಏನೋ!

410
ಭಾಗ್ಯಲಕ್ಷ್ಮೀ ಧಾರಾವಾಹಿ

4.6 TVR

ಭಾಗ್ಯಳ ಗಂಡನೇ ತಾಂಡವ್‌ ಎನ್ನೋದು ಆದೀಶ್ವರ್‌ಗೆ ಗೊತ್ತಾಗಿಲ್ಲ. ಆದೀಶ್ವರ್‌ ಹಾಗೂ ಭಾಗ್ಯ ಮಧ್ಯೆ ಲವ್‌ ಇದೆ, ಅಕ್ರಮ ಸಂಬಂಧ ಇದೆ ಎಂದು ಶ್ರೇಷ್ಠ ಗಾಸಿಪ್‌ ಮಾಡಿದ್ದಾಳೆ, ಇದೀಗ ಭಾಗ್ಯ ಕಿವಿ ಮುಟ್ಟಿದೆ.

510
ಅಣ್ಣಯ್ಯ ಧಾರಾವಾಹಿ

8.2 TVR

ವೀರಭದ್ರನ ನಾಟಕ ಏನು ಎನ್ನೋದು ಪಾರುಗೆ ಗೊತ್ತಾಗಿದೆ. ರಾಣಿಗೆ ಅವಳ ಗಂಡನ ಮನೆಯಲ್ಲಿ ಏನೆಲ್ಲ ಕಷ್ಟ ಕೊಡುತ್ತಿದ್ದಾರೆ ಎನ್ನೋದು ರಿವೀಲ್‌ ಆಗಬೇಕಿದೆ. ಇನ್ನು ಶಿವುಗೂ ಕೂಡ ಒಂದು ಇತಿಹಾಸ ಇದ್ದು, ಅದೇನು ಎಂದು ಪಾರುಗೆ ಗೊತ್ತಾಗಬೇಕು.

610
ಅಮೃತಧಾರೆ ಧಾರಾವಾಹಿ

8.3 TVR

ಈ ಧಾರಾವಾಹಿಯಲ್ಲಿ ಒಂದೇ ವಠಾರದಲ್ಲಿ ಭೂಮಿಕಾ, ಗೌತಮ್‌ ವಾಸ ಮಾಡುತ್ತಿದ್ದಾರೆ. ಇವರಿಬ್ಬರ ಮಕ್ಕಳಿಂದ ಈ ಜೋಡಿ ಒಂದಾಗಲಿದೆಯಾ ಎಂದು ಕಾದು ನೋಡಬೇಕಿದೆ. ಇನ್ನೊಂದು ಕಡೆ ಜಯದೇವ್‌ ಇವರಿಬ್ಬರ ಹುಡುಕಾಟದಲ್ಲಿದ್ದಾನೆ.

710
ಕರ್ಣ ಧಾರಾವಾಹಿ

9.1 TVR

ಈ ಬಾರಿಯ ನಂ 1 ಸೀರಿಯಲ್‌ ಇದಾಗಿದೆ. ಈ ಸೀರಿಯಲ್‌ನಲ್ಲಿ ಕರ್ಣ ಯಾರನ್ನು ಮದುವೆ ಆಗ್ತಾನೆ ಎನ್ನೋದು ದೊಡ್ಡ ವಿಷಯವಾಗಿತ್ತು. ಕರ್ಣ ಹಾಗೂ ನಿತ್ಯಾ ಮದುವೆ ನಾಟಕ ಮಾಡಿದ್ದಾರೆ. ತೇಜಸ್‌ ಕಿಡ್ನ್ಯಾಪ್‌ ಆಗಿರೋದು ವೀಕ್ಷಕರಿಗೆ ಗೊತ್ತಾಗಿದೆ.

810
ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ

4.5 TVR

ಜೆಪಿ ಮನೆಯ ಸೊಸೆ ಆಗಿರುವ ಭಾರ್ಗವಿ ಈಗ ಅರ್ಜುನ್‌ ಮಡದಿಯಾಗಿದ್ದುಕೊಂಡೇ ಸಂಧ್ಯಾ ಕೊಲೆ ಮಾಡಿದೋರು ಯಾರು ಎಂದು ಕಂಡುಹಿಡಿಯುತ್ತಿದ್ದಾಳೆ. ಇನ್ನೊಂದು ಕಡೆ ಭಾರ್ಗವಿ ತನ್ನ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿರೋದು ಜೆಪಿ ಖುಷಿ ತಂದಿದೆ.

910
ಮುದ್ದು ಸೊಸೆ ಧಾರಾವಾಹಿ

4.7 TVR

ಬಾಲ್ಯವಿವಾಹ ಮಾಡುತ್ತಿರೋದಿಕ್ಕೆ ತಂದೆ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು ಎಂದು ಭದ್ರನಿಗೆ ವಿದ್ಯಾ ಮೇಲೆ ಸಿಟ್ಟಿದೆ. ವಿದ್ಯಾ ಹೊಟ್ಟೆಯಲ್ಲಿ ಭದ್ರನ ಮಗು ಕೂಡ ಇದೆ. ಈಗ ವಿದ್ಯಾ ಮನೆಯಿಂದ ಹೊರಬಿದ್ದಿದ್ದಳು.

1010
ಲಕ್ಷ್ಮೀ ನಿವಾಸ ಧಾರಾವಾಹಿ

7.8 TVR

ಜಾಹ್ನವಿ ಹಾಗೂ ವಿಶ್ವ ಒಂದೇ ಕಡೆ ಇದ್ದಾರೆ, ಇವರಿಬ್ಬರು ಸದ್ಯ ಕಾಂಟ್ಯಾಕ್ಟ್‌ನಲ್ಲಿದ್ದಾರೆ ಎಂದು ಜಯಂತ್‌ಗೆ ಗೊತ್ತಾಗಿದೆ. ಇನ್ನೊಂದು ಕಡೆ ಸಂತೋಷ್‌ಗೆ ಮಾಡಿದ ಕರ್ಮ ಬೆನ್ನ ಹೆಗಲೇರಿದೆ. ಅತ್ತ ಭಾವನಾ ತನ್ನ ಅತ್ತೆ, ಅಕ್ಕನಿಗೆ ಬುದ್ಧಿ ಕಲಿಸುತ್ತಿದ್ದಾಳೆ.

Bigg Boss Kannada Season 12

6.8 TRP ಸಿಕ್ಕಿದೆ. 

Read more Photos on
click me!

Recommended Stories