ತನ್ನ ಮಗುವಿನ ತಂದೆ ಕರ್ಣ ಅಲ್ಲ ಎಂಬ ಸತ್ಯವನ್ನು ನಿತ್ಯಾ ಹೇಳಲು ಮುಂದಾಗುತ್ತಾಳೆ. ಆದರೆ ಸರಿಯಾದ ಸಮಯಕ್ಕೆ ಅಲ್ಲಿಗೆ ಬಂದ ತೇಜಸ್, ಆ ಮಗುವಿನ ಅಪ್ಪ ಕರ್ಣನೇ ಎಂದು ಹೇಳಿ ಎಲ್ಲರಿಗೂ ಆಘಾತ ನೀಡುತ್ತಾನೆ, ಇದರಿಂದ ಕರ್ಣನ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗುತ್ತವೆ.
ಜೀ ಕನ್ನಡ ವಾಹಿನಿಯ ಕರ್ಣ ಸೀರಿಯಲ್ ಇಂದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಇಂದಿನ ಪ್ರೋಮೋ ಬಿಟ್ಟು ಕೊಟ್ಟಿದೆ. ನಿತ್ಯಾಳಿಗೆ ತಾಳಿ ಕಟ್ಟದೇ ತೇಜಸ್ ಓಡಿ ಹೋಗಿದ್ದನು. ಇದರಿಂದ ನೊಂದ ನಿತ್ಯಾ-ಕರ್ಣ ಮನೆಯಲ್ಲಿ ಸುಳ್ಳು ಮದುವೆ ವಿಷಯ ತಿಳಿಸಲು ಮುಂದಾಗಿದ್ದರು.
25
ನಿತ್ಯಾ
ನಿತ್ಯಾ ಸಹ ತಾನು ಗರ್ಭಿಣಿಯಾಗಿದ್ದು, ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ಕರ್ಣ ಅಲ್ಲ ಎಂಬ ಸತ್ಯ ಎಲ್ಲರ ಮುಂದೆ ಹೇಳಲು ಸಿದ್ಧವಾಗಿದ್ದಳು. ಒಂದು ವೇಳೆ ಈ ಸತ್ಯ ಹೇಳಿದ್ರೆ ಕರ್ಣನ ಸಮಸ್ಯೆಗಳೆಲ್ಲಾ ದೂರವಾಗಿ ಆತ ಸಂತೋಷವಾಗಿ ಜೀವನ ನಡೆಸುತ್ತಾನೆ ಎಂದು ರಮೇಶ್ ಕೈ ಕೈ ಹಿಸುಕಿಕೊಳ್ಳುತ್ತಿದ್ದನು. ಸತ್ಯ ಹೇಳಿದ್ರೆ ನಮ್ಮ ಎಲ್ಲಾ ಪ್ಲಾನ್ ಫೇಲ್ ಆಗುತ್ತೆ ಸಂಜಯ್, ಅತ್ತೆ ತಾರಾ ಆತಂಕಗೊಂಡಿದ್ದರು.
35
ಆತಂಕ ದೂರ ಮಾಡಿದ ತೇಜಸ್
ಈ ಮೂವರ ಆತಂಕವನ್ನು ತೇಜಸ್ ದೂರ ಮಾಡಿದ್ದಾನೆ. ತೇಜಸ್-ನಿತ್ಯಾ ಮದುವೆ ಆಗುತ್ತೆ ಮತ್ತು ನಿಧಿ ಜೊತೆಗಿನ ಪ್ರೀತಿ ವಿಷಯವನ್ನು ಹಂಚಿಕೊಳ್ಳಲು ಕರ್ಣ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದನು. ಆದ್ರೆ ಇದೀಗ ಈ ಪಾರ್ಟಿಯಲ್ಲಿ ಸುಳ್ಳು ಮದುವೆ, ನಿತ್ಯಾಳ ಒಡಲಾಳದ ಸತ್ಯ ಹೇಳಿಕೊಳ್ಳಲು ಇಬ್ಬರು ಮುಂದಾಗಿದ್ದರು.
ನಿತ್ಯಾ ಸತ್ಯ ಹೇಳುವುದನ್ನು ಹೇಗೆ ತಡೆಯಬೇಕು ಎಂದು ಯೋಚಿಸುತ್ತಿರುವ ಸಂದರ್ಭದಲ್ಲಿಯೇ ಅಲ್ಲಿಗೆ ತೇಜಸ್ ಬಂದಿದ್ದಾನೆ. ನಾನು ಗರ್ಭಿಣಿ, ಈ ಮಗುವಿನ ತಂದೆ ಯಾರು ಎಂದು ನಿತ್ಯಾ ಹೇಳುತ್ತಿರುವ ಸಂದರ್ಭದಲ್ಲಿಯೇ ಬಂದ ತೇಜಸ್, ಮಗುವಿನ ಅಪ್ಪ ಕರ್ಣ ಎಂದು ಜೋರಾಗಿ ಕೂಗಿ ಹೇಳಿದ್ದಾನೆ. ಮದುವೆ ಆಗಲ್ಲ ಅಂತೇಳಿದ್ದ ತೇಜಸ್ ಎಂಬ ಪೆಡಂಭೂತ ನಿತ್ಯಾ-ಕರ್ಣನನ್ನು ಹಿಂಬಾಲಿಸುತ್ತಿದೆ.
ಈ ಪ್ರೋಮೋ ನೋಡಿದ ವೀಕ್ಷಕರು, ನಿತ್ಯಾ ಅಲ್ಲಿಗೆ ತನ್ನ ಮಾತುಗಳನ್ನ ನಿಲ್ಲಿಸುತ್ತಾಳೆ. ಆನಂತರ ರಮೇಶ್, ಸಂಜಯ್, ತಾರಾ ಮಧ್ಯೆ ಪ್ರವೇಶ ಮಾಡಿ ಏನಾದ್ರು ಸನ್ನಿವೇಶವನ್ನು ಬದಲಿಸುತ್ತಾರೆ. ಕರ್ಣನಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.