Bigg Boss ಗೆದ್ದ ಗಿಲ್ಲಿ ನಟನ ಫಸ್ಟ್‌ ರಿಯಾಕ್ಷನ್:‌ ಆ ಮಾತು ಹೇಳಿ ಮತ್ತೊಮ್ಮೆ ಹೃದಯ ಕದ್ದ Gilli Nata

Published : Jan 18, 2026, 11:48 PM IST

Bigg Boss Kannada Season 12 Winner Gilli Nata: ಈ ಹಿಂದೆ ಆರು ಶೋಗಳಲ್ಲಿ ಭಾಗವಹಿಸಿದ್ದ ಗಿಲ್ಲಿ ನಟ ಅವರು ಗೆಲುವಿನ ರುಚಿ ಕಂಡಿರಲಿಲ್ಲ. ಪ್ರತಿ ಸಲವು ಅವರು ರನ್ನರ್‌ ಅಪ್‌ ಆಗುತ್ತಿದ್ದರು, ಅಥವಾ ಇನ್ಯಾವುದಾದರೂ ಸ್ಥಾನ ಪಡೆಯುತ್ತಿದ್ದರು. ಈಗ ಅವರು ವಿನ್‌ ಆಗಿದ್ದಾರೆ. 

PREV
15
ಟಾಪ್‌ 6 ಸ್ಥಾನದಲ್ಲಿದ್ದವರು ಯಾರು?

ಅಶ್ವಿನಿ ಗೌಡ, ಧನುಷ್‌ ಗೌಡ, ರಕ್ಷಿತಾ ಶೆಟ್ಟಿ, ರಘು, ಕಾವ್ಯ ಶೈವ, ಗಿಲ್ಲಿ ನಟ ಅವರು ಟಾಪ್‌ 6 ಸ್ಥಾನದಲ್ಲಿದ್ದರು. ಇವರಲ್ಲಿ ವಿಜೇತರು, ರನ್ನರ್‌ ಅಪ್‌ ಆಗಿದ್ದಾರೆ.

25
ಅಶ್ವಿನಿ ಗೌಡ ಅವರಿಗೆ ಮೆಚ್ಚುಗೆ

ಅಂದಹಾಗೆ ಅಶ್ವಿನಿ ಗೌಡ ಅವರು ಮೂರನೇ ಸ್ಥಾನವನ್ನು ಪಡೆದಿದ್ದರು. ಅದ್ಭುತವಾಗಿ ಆಟ ಆಡಿದ್ದೀರಾ ಎಂದು ಕಿಚ್ಚ ಸುದೀಪ್‌ ಅವರು ಅಶ್ವಿನಿ ಗೌಡಗೆ ಭೇಷ್‌ ಎಂದಿದ್ದಾರೆ.

35
ಏನೇನು ಸಿಕ್ಕಿತು?

ಅಂದಹಾಗೆ ಗಿಲ್ಲಿ ನಟ ಅವರಿಗೆ 50 ಲಕ್ಷ ರೂಪಾಯಿ ಕ್ಯಾಶ್‌ ಬಹುಮಾನ, ಮಾರುತಿ ಸುಜುಕಿ ಕಾರ್‌ ಕೂಡ ಸಿಕ್ಕಿದೆ. ಈಗ ಗಿಲ್ಲಿ ನಟ ಅವರು ಗೆದ್ದ ಬಳಿಕ ಖುಷಿಯಾಗಿ ಮಾತನಾಡಿದ್ದಾರೆ.

45
ಗಿಲ್ಲಿ ನಟನ ಫಸ್ಟ್‌ ರಿಯಾಕ್ಷನ್

“ನಾನು ಇಲ್ಲಿಯವರೆಗೆ ಬರುತ್ತೀನಿ ಎಂದು ಅಂದುಕೊಂಡಿರಲಿಲ್ಲ. ನಿಮ್ಮ ಪ್ರೀತಿ, ಸಹಕಾರದಿಂದಲೇ ನಾನು ಗೆದ್ದಿರೋದು. ನಾನು ಗೆದ್ದರೂ ಕೂಡ ಹೀಗೆ ಇರ್ತೀನಿ, ಬದಲಾಗಲ್ಲ” ಎಂದು ಗಿಲ್ಲಿ ನಟ ಹೇಳಿದ್ದಾರೆ. ಈ ಮಾತು ಎಲ್ಲರಿಗೂ ಇಷ್ಟವಾಗಿದೆ.

55
ಥ್ಯಾಂಕ್ಯೂ ಹೇಳೋದು ಮರಿಲಿಲ್ಲ

ಗಿಲ್ಲಿ ನಟ ಅವರು ವೇದಿಕೆಯಲ್ಲಿ, “ರಘು, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಅವರು ಸಪೋರ್ಟ್‌ ಮಾಡಿದ್ದಾರೆ, ಅವರಿಗೆ ನನ್ನ ಧನ್ಯವಾದಗಳು” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories