ಗಿಲ್ಲಿ ನಟ ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರಿಂದ, ಪ್ರತಿಸ್ಪರ್ಧಿ ವಾಹಿನಿಯಾದ ಜೀ ಕನ್ನಡವು ಅವರ ಗೆಲುವನ್ನು ಸಂಭ್ರಮಿಸಿದೆ.
ಹಾಸ್ಯ ಕಲಾವಿದ ಗಿಲ್ಲಿ ನಟ ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ್ರೂ ಇಲ್ಲಿಯ ಸ್ಪರ್ಧಿಯ ಗೆಲುವನ್ನು ಪ್ರತಿಸ್ಪರ್ಧಿ ಚಾನೆಲ್ ಜೀ ಕನ್ನಡ ಸಂಭ್ರಮಿಸಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಜೀ ಕನ್ನಡ ಪೋಸ್ಟ್ ಮಾಡಿಕೊಂಡಿದೆ.
26
ಜೀ ಕನ್ನಡದ ರಿಯಾಲಿಟಿ ಶೋ
ಈ ಹಿಂದೆ ಗಿಲ್ಲಿ ನಟ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚೂಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಹಾಗಾಗಿ ಜೀ ಕನ್ನಡ ಸಹ ಗಿಲ್ಲಿ ಅವರನ್ನು ತಮ್ಮ ವಾಹಿನಿಯ ಪ್ರತಿಭೆ ಎಂದು ಹೇಳಿಕೊಳ್ಳುತ್ತದೆ. ಈ ಕಾರಣದಿಂದ ಗಿಲ್ಲಿ ಅವರ ಗೆಲುವಿನ ಕುರಿತು ಪೋಸ್ಟ್ ಮಾಡಿಕೊಂಡಿದೆ.
36
ಜೀ ಕನ್ನಡ ಪೋಸ್ಟ್
ತನ್ನ ಕಾಮಿಡಿ ಟೈಮಿಂಗ್, ಅಮೋಘ ಪ್ರತಿಭೆಯ ಮೂಲಕ ವಿಜೇತನಾಗಿ ಕರುನಾಡಿನ ಮನಗೆದ್ದ ನಮ್ಮ ಗಿಲ್ಲಿಗೆ Congratulations ಎಂದು ಶುಭಾಶಯಗಳನ್ನು ವಾಹಿನಿ ತಿಳಿಸಿದೆ. ಈ ಪೋಸ್ಟ್‌ಗೆ ಗಿಲ್ಲಿ ಅಭಿಮಾನಿಗಳು, ಇದ್ದಾಗ ಗೆಲ್ಲಿಸಲಿಲ್ಲ. ಗೆದ್ದಾಗ ಎಲ್ಲರೂ ಬೇಕಾಗುತ್ತಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಬಿಗ್‌ಬಾಸ್ ರಿಯಾಲಿಟಿ ಶೋನ 12ನೇ ಸೀಸನ್ ಟ್ರೋಫಿ ಗಿಲ್ಲಿ ನಟನ ಮುಡಿಗೇರಿದೆ. ರನ್ನರ್ ಅಪ್ ಆಗಿ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಅದ್ಧೂರಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಶೋನ ನಿರೂಪಕ ನಟ ಕಿಚ್ಚ ಸುದೀಪ್ ಅವರು ವಿಜೇತರ ಹೆಸರನ್ನು ಘೋಷಿಸಿದರು.
56
₹50 ಲಕ್ಷ, ಮಾರುತಿ ಸುಜುಕಿ ವಿಕ್ಟೋರೀಸ್ ಕಾರ್, ಸುದೀಪ್ ಅವರಿಂದ 10 ಲಕ್ಷ
ವಿಜೇತರಾದ ಗಿಲ್ಲಿ ನಟನಿಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ವಿಕ್ಟೋರೀಸ್ ಕಾರ್ ಬಹುಮಾನ ದೊರೆಯಿತು. ಸುದೀಪ್ ವೈಯಕ್ತಿಕವಾಗಿ ₹10 ಲಕ್ಷ ಬಹುಮಾನ ನೀಡಿ ಶುಭ ಕೋರಿದರು. ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ₹20 ಲಕ್ಷದ ಗಿಫ್ಟ್ ವೋಚರ್ ಅನ್ನು ನೀಡಲಾಯಿತು. ಗಿಲ್ಲಿ ನಟ ವಿಜೇತರೆಂದು ಘೋಷಣೆ ಆಗುತ್ತಿದ್ದಂತೆಯೇ ಬಿಗ್ ಬಾಸ್ ಶೋ ನಡೆಯುತ್ತಿದ್ದ ಬಿಡದಿಯ ಜಾಲಿವುಡ್ ಬಳಿ ಸೇರಿದ್ದ ಸಾವಿರಾರು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.
19 ಸ್ಪರ್ಧಿಗಳಿಂದ ಶುರುವಾಗಿ 111 ದಿನಗಳ ಕಾಲ ನಡೆದ ಕಲರ್ಸ್ ಕನ್ನಡ ವಾಹಿನಿಯ ಈ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ಹೊತ್ತಿಗೆ 6 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದರು. ಈ ಪೈಕಿ ಮೊದಲು ಅಶ್ವಿನಿ ಗೌಡ, ಕಾವ್ಯ, ಮ್ಯೂಟಂಟ್ ರಘು, ಧನುಷ್ ಅವರು ಸರದಿಯಂತೆ ರನ್ನರ್ ಅಪ್ ಆಗಿ ಎಲಿಮಿನೆಟ್ ಆದರು. ಅಂತಿಮ ಸುತ್ತಿನಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಕಣದಲ್ಲಿ ಉಳಿದುಕೊಂಡು, ಕೊನೆಗೆ ರಕ್ಷಿತಾ ಶೆಟ್ಟಿ ಅವರನ್ನು ಹಿಂದಿಕ್ಕಿ ಗಿಲ್ಲಿ ನಟ ಬಿಗ್‌ಬಾಸ್ 12ನೇ ಕಂತಿನ ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ವಿನ್ನರ್ ಪಟ್ಟಕ್ಕೇರಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.