ಕರ್ಣ ಮದುವೆ ಆಗ್ತಾನೆ, ಅಗ್ರಿಮೆಂಟ್‌ ಪೀಸ್ ಪೀಸ್; ಅಜ್ಜಿ ರಾಕ್ಸ್, ರಮೇಶ್ ಅಪ್ಪ ಶಾಕ್

Published : Aug 05, 2025, 01:33 PM IST

Zee Kannada Karna Serial: ಕರ್ಣ ಸೀರಿಯಲ್‌ನಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಕರ್ಣನ ಅಜ್ಜಿ ಮಗನ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ನಿತ್ಯಾಳ ತಂಗಿ ನಿಧಿಗೆ ಕರ್ಣನ ಮೇಲೆ ಪ್ರೀತಿಯಾಗಿದೆ.

PREV
15
ಅಗ್ರಿಮೆಂಟ್‌ ಪತ್ರ

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಸಾಕು ಮಗನಾಗಿರುವ ಕಾರಣ ಕರ್ಣನನ್ನು ರಮೇಶ್, ನಯನತಾರಾ ಕೀಳಾಗಿ ನಡೆಸಿಕೊಳ್ಳುತ್ತಾರೆ. ತಾನು ಜೀವನದಲ್ಲಿಯೇ ಮದುವೆಯೇ ಆಗಲ್ಲ ಎಂದು ಕರ್ಣ ಅಗ್ರಿಮೆಂಟ್‌ಗೆ ಸಹಿ ಹಾಕಿದ್ದನು. ಈ ಅಗ್ರಿಮೆಂಟ್‌ ಪತ್ರ ರಮೇಶ್‌ ಬಳಿಯಲ್ಲಿತ್ತು. ಈ ವಿಷಯ ಅತ್ತೆ ನಯನತಾರಾಗೂ ಗೊತ್ತಿತ್ತು.

25
ರಮೇಶ್‌ ಕೆನ್ನೆಗೆ ಏಟು

ಮನೆ ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡ್ಕೊಂಡಿದ್ದ ಕರ್ಣನಿಗೆ ಉದ್ದೇಶಪೂರ್ವಕವಾಗಿ ರಮೇಶ್ ಕಿರುಕುಳ ನೀಡುತ್ತಿರುತ್ತಾನೆ. ಕರ್ಣನ ಪ್ರೀತಿಯ ಅಜ್ಜಿ ಬಂಗಾರಿಗೆ ಮಗ ರಮೇಶ್‌ನ ಅಸಲಿ ಮುಖವಾಡ ಗೊತ್ತಾಗಿದೆ. ಕರ್ಣನಿಗೆ ಮದುವೆ ಆಗದಂತೆ ಮಾಡಿಸಿಕೊಂಡ ಅಗ್ರಿಮೆಂಟ್ ವಿಷಯ ತಿಳಿದ ಅಜ್ಜಿ, ಮಗ ರಮೇಶ್‌ ಕೆನ್ನೆಗೆ ಏಟು ನೀಡಿದ್ದಾರೆ. ಅಷ್ಟೇ ಅಲ್ಲ ಕರ್ಣ ಸಹಿ ಮಾಡಿದ್ದ ಅಗ್ರಿಮೆಂಟ್ ಪೇಪರ್ ಹರಿದು ಹಾಕಿದ್ದಾರೆ.

35
ಕರ್ಣ ಮದುವೆ ಆಗ್ತಾನೆ

ಇಷ್ಟು ಮಾತ್ರವಲ್ಲ ಮೊಮ್ಮಗ ಕರ್ಣನಿಗೆ ಸಹಿ ಮಾಡಿದ್ದು ಯಾಕೆ ಎಂದು ಅಜ್ಜಿ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಕರ್ಣ ಮದುವೆ ಆಗ್ತಾನೆ ಎಂದು ಅಜ್ಜಿ ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯ ಸೀರಿಯಲ್‌ನಲ್ಲಿ ನಿತ್ಯ ಮದುವೆ ನಡೆಯುತ್ತಿದೆ. ನಿತ್ಯ ಮದುವೆಯಾಗುತ್ತಿರೋ ಹುಡುಗ ಈವರೆಗೂ ತನ್ನ ಪೋಷಕರನ್ನು ಭೇಟಿ ಮಾಡಿಸಿಲ್ಲ. ಯಾವುದೇ ಎಪಿಸೋಡ್ ಮಿಸ್ ಮಾಡದೇ ಸೀರಿಯಲ್ ನೋಡುತ್ತಿರುವ ಅಭಿಮಾನಿಗಳಿ ನಿತ್ಯಾ ಜೊತೆಯಲ್ಲಿಯೇ ಕರ್ಣನ ಮದುವೆ ಆಗುತ್ತೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

45
ನಿಧಿಗೆ ಕರ್ಣನ ಮೇಲೆ ಲವ್

ನಿತ್ಯಾ ತಂಗಿ ನಿಧಿಗೆ ಕರ್ಣನ ಮೇಲೆ ಲವ್ ಆಗಿದೆ. ತನ್ನ ಪ್ರೀತಿಯನ್ನು ಸಹ ಕರ್ಣನಿಗೆ ಹೇಳಿಕೊಂಡಿದ್ದಾಳೆ. ಆದ್ರೆ ಕರ್ಣ ಮಾತ್ರ ಪ್ರೀತಿಯನ್ನು ಇದುವರೆಗೂ ಒಪ್ಪಿಕೊಂಡಿಲ್ಲ. ಮತ್ತೊಂದೆಡೆ ಕರ್ಣನ ಕುಟುಂಬಸ್ಥರು ಹೇಗೆ ಎಂಬ ವಿಷಯ ನಿಧಿಗೂ ಗೊತ್ತಾಗಿದ್ದು, ರಮೇಶ್‌ಗೆ ಸವಾಲು ಹಾಕಿದ್ದಾಳೆ.

55
ಕರ್ಣನ ಜನ್ಮ ರಹಸ್ಯ

ಈವರೆಗೆ ಕರ್ಣ ಅನಾಥ ಮಗು. ರಮೇಶ್‌ನ ತಂದೆ ಮಗುವನ್ನು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅಜ್ಜಿ, ತಾಯಿ, ಸೋದರಿ ಈ ಮೂವರನ್ನು ಹೊರತುಪಡಿಸಿದ್ರೆ ಉಳಿದ ಎಲ್ಲಾ ಜನರು ಕರ್ಣನನ್ನು ದ್ವೇಷಿಸುತ್ತಾರೆ. ಆದ್ರೆ ನಯನತಾರಾಗೆ ಕರ್ಣನ ಜನ್ಮ ರಹಸ್ಯ ತಿಳಿದಿದೆ. ಇದಕ್ಕಾಗಿ 30 ವರ್ಷಗಳಿಂದ ಅನಾಮಧೇಯ ವ್ಯಕ್ತಿಯೊಬ್ಬನಿಗೆ ಪ್ರತಿ ತಿಂಗಳು ಹಣ ನೀಡುತ್ತಾ ಬಂದಿರುತ್ತಾಳೆ.

Read more Photos on
click me!

Recommended Stories