ಮದುವೆಯಾಗಿ ವರ್ಷ ಕಳೆಯುವ ಮುನ್ನವೇ… ಮಗನಿಗೆ ವಧು ಹುಡುಕುತ್ತಿದ್ದಾರೆ ಲಕ್ಷ್ಮೀ ನಿವಾಸ ನಟಿ!

Published : Aug 04, 2025, 03:32 PM ISTUpdated : Aug 04, 2025, 03:38 PM IST

ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಮಾನಸ ಮನೋಹರ್ ತಮ್ಮ ಮಗನಿಗೆ ಹುಡುಗಿ ಹುಡುಕುತ್ತಿದ್ದಾರೆ. ಅಯ್ಯೋ ಮಾನಸ ಅವರಿಗೆ ಮದುವೆಯಾಗಿ ವರ್ಷ ಕಳೆದಿಲ್ಲ, ಅವರಿಗೆ ಮಗ ಇದ್ದಾನ? ಎಂದು ಯೋಚನೆ ಮಾಡುವ ಮುನ್ನ ಈ ಲೇಖನ ಓದಿ. 

PREV
17

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡರ ಅತ್ತಿಗೆ ನೀಲಾಂಬರಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮಾನಸ ಮನೋಹರ್ (Manasa Manohar) ಗೊತ್ತಿದೆ ಅಲ್ವಾ? ಈ ನಟಿ ಇದೀಗ ತಮ್ಮ ಮಗನಿಗೆ ಹುಡುಗಿ ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಂಚಿಕೊಂಡು ಮಗನ ಫೋಟೊ ಜೊತೆಗೆ ಬಯೋಡೇಟಾ ಕೂಡ ಶೇರ್ ಮಾಡಿದ್ದಾರೆ.

27

ಅಯ್ಯೋ ಇದು ಹೇಗೆ ಸಾಧ್ಯಾ? ಮಾನಸ ಮನೋಹರ್ ಗೆ ಇನ್ನೂ ಸಣ್ಣ ವಯಸ್ಸು, ಅವರಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಒಂದು ವರ್ಷ ಕೂಡ ಆಗಿಲ್ಲ. ಈವಾಗ ಮಗ ಎಲ್ಲಿಂದ ಬಂದ. ಅದು ಕೂಡ ಮದುವೆ ವಯಸ್ಸಿನ ಮಗ ಇದ್ದಾನ? ಎನ್ನುವ ಪ್ರಶ್ನೆ ನಿಮ್ಮನ್ನು ಕಾಡದೇ ಇರದು. ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

37

ಅಂದಹಾಗೇ ನಟಿ ಮಾನಸ ತಮ್ಮ ಮುದ್ದಿನ ನಾಯಿಗಾಗಿ ಈ ಪೋಸ್ಟ್ ಮಾಡಿದ್ದಾರೆ. ತಮ್ಮ ನಾಯಿಯನ್ನು ಮಗುವಿನಂತೆ ನೋಡಿಕೊಳ್ಳುವ ಮಾನಸ, ಹೆಚ್ಚಾಗಿ ನಾಯಿ ಜೊತೆಗಿನ ಫೋಟೊ ಶೇರ್ ಮಾಡುತ್ತಿರುತ್ತಾರೆ. ಇದೀಗ ಆ ಮುದ್ದಾದ ಹಸ್ಕಿಗೆ  (Husky)ಪೇಟ, ಮಾಲೆ ಹಾಕಿ ವರನಂತೆ ರೆಡಿ ಮಾಡಿ, ಸೊಸೆ ಬೇಕಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ನಟಿಯ ಪೋಸ್ಟ್ ವಿವರ ಹೀಗಿದೆ.

47

ದಯವಿಟ್ಟು ನಮಗೆ ಸೊಸೆಯನ್ನು ಹುಡುಕಲು ಸಹಾಯ ಮಾಡಿ. ಇದರಿಂದ ನಾವು ಬೇಬಿ ಸ್ನೋಫ್ಲೇಕ್ ಅನ್ನು ಶೀಘ್ರದಲ್ಲೇ ನೋಡಬಹುದು. ನಮ್ಮ ಮಗನ ಬಯೋಡೇಟಾ ಕೆಳಗೆ ಇದೆ ಎಂದು ಹೇಳುತ್ತಾ ನಾಯಿ ಬಗ್ಗೆ ಸಂಪೂರ್ಣ ಮಾಹಿತಿ ಬರೆದುಕೊಂಡಿದ್ದಾರೆ.

ಹೆಸರು : ಸ್ನೋ ( ಸ್ನೋ ದ ವೈಟ್ ಫ್ಲಫ್ ) (snow_the_whitefluff)

ಜಾತಿ : ಹಸ್ಕಿ

ವಯಸ್ಸು : 3.5 ವರ್ಷಗಳು

ಸ್ಥಳ : ಬೆಂಗಳೂರು

ಅರ್ಹತೆ : ಫ್ರೊಫೇಶನಲ್ ಬಿಹೇವಿಯರ್ (ವಿಶೇಷವಾಗಿ ಅವನ ತಾಯಿಗೆ )

57

ಹವ್ಯಾಸಗಳು : ಜನ ಸ್ನೇಹಿ , ಮೆಟ್ರೋ ಬೇಬಿ, ಟ್ರೀಟ್ ಗಾಗಿ ಏನು ಬೇಕಾದರೂ ಮಾಡುತ್ತಾನೆ, ನಡೆಯಲು ಇಷ್ಟಪಡುತ್ತಾನೆ , ಓಡಲು ಇಷ್ಟಪಡುತ್ತಾನೆ, ತುಂಬಾ ಫಿಟ್ ಆಗಿದ್ದಾನೆ , ಹೈಪರ್ ಆಕ್ಟಿವ್ ಆಗಿದ್ದಾನೆ. ನಮ್ಮ ಮಗನಿಗೆ ಸಂಗಾತಿಯನ್ನು ಹುಡುಕುತ್ತಿದ್ದೇನೆ. ದಯವಿಟ್ಟು ಹೆಚ್ಚಿನ ವಿವರಗಳಿಗಾಗಿ ನಮಗೆ ತಿಳಿ. ವಿವಾಹವು ಒಂದು ಭವ್ಯ ಸಮಾರಂಭವಾಗಿರುತ್ತದೆ. ಇದನ್ನು ಆತನ ತಾಯಿಯೇ ಆಯೋಜಿಸಲಿದ್ದಾರೆ ಎಂದು ಮಾನಸ ಮನೋಹರ್ ಬರೆದುಕೊಂಡಿದ್ದಾರೆ..

67

ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸ್ನೋವನ್ನು ನೋಡಿ, ಜನರು ಹ್ಯಾಂಡ್ಸಮ್ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಸ್ವಯಂವರ ಅಲ್ಲ, ಸ್ವಯಂ ವಧು ಏರ್ಪಡಿಸಿ ಎನ್ನುತ್ತಿದ್ದಾರೆ. ಮತ್ತೆ ಕೆಲವರು ನಮ್ಮ ಊರಿನಲ್ಲೂ ಒಬ್ಬಳು ಸುಂದರಿ ಇದ್ದಾಳೆ. ಆದರೆ ಏನು ಮಾಡೋದು ಆಕೆಯ ಜಾತಿ ಬೇರೆ, ನಿಮಗೆ ಓಕೆನಾ ಎಂದು ಸಹ ಕೇಳಿದ್ದಾರೆ.

77

ಇನ್ನು ಮಾನಸ ಮನೋಹರ್ ಅವರ ಕರಿಯರ್ ಬಗ್ಗೆ ಹೇಳೊದಾದರೆ, ಇವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪಿಎ ಮೀರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನಂತರ ಝೀ ಕನ್ನಡದ ಲಕ್ಷ್ಮೀ ನಿವಾಸದಲ್ಲಿ ನಿಲಾಂಬರಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲೂ (Shambhavi serial) ಇವರು ನಟಿಸುತ್ತಿದ್ದಾರೆ.

Read more Photos on
click me!

Recommended Stories