Published : Sep 27, 2025, 01:30 PM ISTUpdated : Sep 27, 2025, 03:26 PM IST
ನಟ ವಿಜಯ್ ಸೂರ್ಯ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದೇ ವೇಳೆ, ತಮ್ಮ ಡಿವೋರ್ಸ್ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ಸೋಷಿಯಲ್ ಮೀಡಿಯಾದಿಂದ ಪತ್ನಿ ಫೋಟೋ ಡಿಲೀಟ್ ಮಾಡಿದ್ಯಾಕೆ ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಾಳೆ ಅರ್ಥಾತ್ ಸೆಪ್ಟೆಂಬರ್ 28ರಿಂದ Bigg Boss Kannada Seaon 12 ಷೋ ಆರಂಭವಾಗಲಿದೆ. ಈ ಷೋಗೆ ದೃಷ್ಟಿಬೊಟ್ಟು ದತ್ತಾಭಾಯ್ ವಿಜಯ್ ಸೂರ್ಯ ಕೂಡ ಹೋಗಲಿದ್ದಾರೆ ಎನ್ನುವ ಸುದ್ದಿ ಇದೆ. ಸೀರಿಯಲ್ನ ಎಂಡಿಂಗ್ನಲ್ಲಿ ಅವರು ಕಾಣಿಸಿಕೊಳ್ಳದೇ ಇರುವುದಕ್ಕೆ ಇವರು ಹೋಗುವುದು ಕನ್ಫರ್ಮ್ ಆಗಿದೆ. ಅಂದಹಾಗೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ. ಚಾಕಲೇಟ್ ಬಾಯ್ ಎಂದೇ ಫೇಮಸ್ ಆಗಿರೋ ನಟ, ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚಿದ್ದರು.
210
ವಿಜಯ್ ಸೂರ್ಯ ಹಿನ್ನೆಲೆ...
ವಿಜಯ್‌ಸೂರ್ಯ ಅವರಿಗೆ ಸಕತ್ ಹಿಟ್ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ. ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.
310
ಇಬ್ಬರು ಮಕ್ಕಳ ಹ್ಯಾಪ್ಪಿ ಫ್ಯಾಮಿಲಿ
ಇನ್ನು ಮೊದಲೇ ಹೇಳಿದಂತೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಚೈತ್ರಾ, ಹಾಗೂ ಮಕ್ಕಳ ಹೆಸರು ಸೋಹನ್ ಸೂರ್ಯ ಮತ್ತು ಕಾರ್ತಿಕೇಯ ಸೂರ್ಯ. ಗುಳಿಕೆನ್ನೆ ಚೆಲುವ ಎನ್ನಿಸಿಕೊಂಡಿರುವ ವಿಜಯ್ ಸೂರ್ಯ, ತಮ್ಮ ನಟನೆಯಿಂದ ಎಷ್ಟು ಫೇಮಸೋ, ಅಷ್ಟೇ ಅವರೊಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ (family man) ಆಗಿಯೂ ಜನಪ್ರಿಯತೆ ಪಡೆದಿದ್ದಾರೆ. ತಮ್ಮ ತಾಯಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಿರುವ ವಿಜಯ್ ಇಬ್ಬರು ಮುದ್ದಾದ ಗಂಡು ಮಕ್ಕಳ ತಂದೆ ಕೂಡ ಹೌದು. ಒಟ್ಟಲ್ಲಿ ಇವರದ್ದು ಹ್ಯಾಪಿ ಫ್ಯಾಮಿಲಿ.
ಆದರೆ ಕೆಲ ತಿಂಗಳ ಹಿಂದೆ ವಿಜಯ್ ಸೂರ್ಯ ಅವರು ಡಿವೋರ್ಸ್ ಆಗುತ್ತಿದ್ದಾರೆ, ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಅದಕ್ಕೆ ಇದೀಗ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ವಿಜಯ್ ಸೂರ್ಯ ಅವರು, ಈ ಬಗ್ಗೆ ಮಾತನಾಡಿದ್ದಾರೆ. ಈ ಸುದ್ದಿ ಹುಟ್ಟಲು ಕಾರಣ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರು ಎಲ್ಲರ ಫೋಟೋ ತೆಗೆದುಹಾಕಿದ್ದು. ಇದಕ್ಕೆ ಕಾರಣವೂ ಇದೆ. ಎಐ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಅದರ ದುರುಪಯೋಗ ಆಗಬಾರದು ಎನ್ನುವ ಕಾರಣಕ್ಕೆ ಫ್ಯಾಮಿಲಿ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಅದರಲ್ಲಿ ಪತ್ನಿ ಫೋಟೋ ಕೂಡ ಡಿಲೀಟ್ ಆಗಿತ್ತು.
510
ವಿಜಯ್ ಸೂರ್ಯ ಬಾಳಲ್ಲಿ ಬಿರುಗಾಳಿ
ಇದೇ ಕಾರಣಕ್ಕೆ ಇವರ ಬಾಳಲ್ಲಿ ಬಿರುಗಾಳಿ ಮೂಡಿದೆ ಎಂದು ಕೆಲವು ಯುಟ್ಯೂಬರ್ಗಳು ವಿಡಿಯೋ ಹರಿಬಿಟ್ಟರು. ಅದಕ್ಕೆ ಉತ್ತರ ನೀಡಿರುವ ನಟ, ನಾನು ಎಐ ಕಾರಣದಿಂದ ಡಿಲೀಟ್ ಮಾಡಿದ್ದೆ. ಅದರಲ್ಲಿ ನನ್ನ ಮಕ್ಕಳು, ಅಪ್ಪ- ಅಮ್ಮನ ಫೋಟೋ ಕೂಡ ಡಿಲೀಟ್ ಮಾಡಿದ್ದೆ. ಆದರೆ ಇವರ ಕಣ್ಣಿಗೆ ಪತ್ನಿಯ ಫೋಟೋ ಮಾತ್ರ ಕಾಣಿಸಿರಬೇಕು. ಏನೇನೋ ವಿಡಿಯೋ ಮಾಡಿ ಹರಿಬಿಟ್ಟರು. ಮೊದಲಿಗೆ ಒಂದು ಇದ್ದ ವಿಡಿಯೋ ಕೊನೆಗೆ ಹತ್ತಾರು, ನೂರಾರು ಆಯಿತು ಎಂದಿದ್ದಾರೆ.
610
ವಿಡಿಯೋ ನೋಡಿ ನಗು ಬಂತು
ಇದನ್ನೆಲ್ಲಾ ನೋಡಿ ನಾನು ಮತ್ತು ಚೈತ್ರಾ ನಗುತ್ತಿದ್ದೆವು ಎಂದಿರೋ ನಟ, ನಿಮಗೂ ಒಂದು ಫ್ಯಾಮಿಲಿ ಇರತ್ತೆ. ಬೇರೆಯವರ ಫ್ಯಾಮಿಲಿ ಬಗ್ಗೆ ಬರೆಯುವಾಗ ನಿಮ್ಮ ಕುಟುಂಬದ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿದ್ರೆ ಚೆನ್ನಾಗಿರತ್ತೆ. ಸುಮ್ಮನೇ ಲೈಕ್ಸ್, ಶೇರ್ಗಾಗಿ ಹಾಗೆ ಮಾಡುವುದು ಸರಿಯಲ್ಲ ಎಂದೂ ನಟ ಹೇಳಿದ್ದಾರೆ.
710
ವೈಷ್ಣವಿ ಗೌಡ ಮದುವೆಯಲ್ಲಿ...
ಅದೇ ವೇಳೆ, ನಟಿ ವೈಷ್ಣವಿ ಗೌಡ (Vaishnavi Gowda) ಅವರ ಮದುವೆಯ ದಿನ ನಾನು ಮತ್ತು ಚೈತ್ರಾ ಹೋದಾಗ ಬಹುತೇಕ ಎಲ್ಲರಿಗೂ ವಿಷಯ ಗೊತ್ತಾಗಿತ್ತು. ಸುಳ್ಳು ಸುದ್ದಿ ಹರಡಿದ್ದು ತಿಳಿಯಿತೋ ಏನೊ. ಆಗ ಎಲ್ಲರೂ ಸುಮ್ಮನಾದರು ಎಂದಿರೋ ನಟ, ಸುಖಾಸುಮ್ಮನೆ ಇಂಥ ಸುದ್ದಿ ಹರಡುವ ಬಗ್ಗೆ ನೋವನ್ನೂ ತೋಡಿಕೊಂಡಿದ್ದಾರೆ.
810
Bigg Boss ಆಫರ್ ಬಗ್ಗೆ ನಟ ಹೇಳಿದ್ದೇನು?
ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ವಿಜಯ್ ಸೂರ್ಯ ಅವರು ತಮಗೆ ಬಿಗ್ಬಾಸ್ನಿಂದ ಆಫರ್ ಬಂದಾಗಲೆಲ್ಲಾ ಬೇರೆ ಕಡೆ ಬಿಜಿ ಇರ್ತಿದ್ದೆ. ಅದಕ್ಕೇ ಹೋಗಲು ಆಗ್ತಿರಲಿಲ್ಲ ಎಂದಿದ್ದರು. ಕೊನೆಗೆ, ಒಂದೊಮ್ಮೆ ಬಿಗ್ಬಾಸ್ನಿಂದ ಆಫರ್ ಬಂದು, ನಿಮಗೆ ಹತ್ತು ಕನ್ನಡದ ನಟಿಯರನ್ನು ಆಯ್ಕೆ ಮಾಡಲು ಅವಕಾಶ ಕೊಟ್ಟರೆ ಯಾರನ್ನು ಮಾಡುತ್ತೀರಿ ಎಂದು ಪ್ರಶ್ನೆ ಎದುರಾಗಿತ್ತು.
910
ಆಸೆ, ಫ್ಯಾಂಟಸಿ ಹೊರಟೋಗಿದೆ ಎಂದ ನಟ
ಅದಕ್ಕೆ ವಿಜಯ ಸೂರ್ಯ ಅವರು, ಅಂಥದ್ದೊಂದು ಆಸೆ, ಫ್ಯಾಂಟಸಿ ಎಲ್ಲಾ ತುಂಬಾ ಹಿಂದೆ ಹೊರಟು ಹೋಗಿದೆ ಎಂದರು. ಆದರೆ ಬಿಗ್ಬಾಸ್ ಟಾಸ್ಕ್ ಕೊಟ್ಟ ಮೇಲೆ ಮಾಡಲೇಬೇಕು ಎಂದಾಗ ನಗುತ್ತಲೇ, 9 ಜನ ಹೆಣ್ಣುಮಕ್ಕಳ ಮಧ್ಯೆ ನಾನೇನು ಮಾಡಲಿ ಎಂದು ಪ್ರಶ್ನಿಸಿದರು. ಕೊನೆಗೆ ಬಿಗ್ಬಾಸ್ ಅಂದ್ಮೇಲೆ ಟಾಸ್ಕ್ ಪೂರ್ತಿ ಮಾಡಲೇಬೇಕಲ್ವಾ ಎಂಬ ಪ್ರಶ್ನೆ ಬಂತು.
1010
ಜಾಣ್ಮೆಯಿಂದ ನುಣುಚಿಕೊಂಡ ನಟ
ಆಗ ವಿಜಯ ಸೂರ್ಯ ಅವರು, ಒಂದು ಕ್ಷಣ ಯೋಚಿಸಿ, ನನಗೆ ಎಲ್ಲಾ ತುಂಬಾ ಹಳೆಯ ಹೀರೋಯಿನ್ಗಳನ್ನು ಕರೆಸುವ ಆಸೆ ತುಂಬಾ ಇದೆ. ಅವರಿಂದ ನಾಲೆಜ್ಡ್ ಪಡೆದುಕೊಳ್ಳಬಹುದು ಎಂದಿದ್ದರು. ಹೀಗೆ ಹೇಳಿ ಪತ್ನಿಗೂ ಹರ್ಟ್ ಆಗದ ಹಾಗೆ, ಈಗಿನ ಹಿರೋಯಿನ್ಗಳ ಹೆಸರನ್ನೂ ಹೇಳದೇ ಜಾಣ್ಮೆಯಿಂದ ನುಣುಚಿಕೊಂಡಿದ್ದರು.