Bigg Boss ನಡೆಸಿ ಕೊಡೋನೇ ಹುಚ್ಚ, ಇನ್ನೇನ್​ ನೀವ್​ ಹೇಳೋದು? ಸುದೀಪ್​ ಮಾತಿಗೆ ಫ್ಯಾನ್ಸ್​ ಶಾಕ್​- ಆಗಿದ್ದೇನು ನೋಡಿ

Published : Sep 27, 2025, 11:49 AM IST

ಬಿಗ್​ಬಾಸ್​ ಸೀಸನ್​ 12 ಆರಂಭದ ಹೊಸ್ತಿಲಲ್ಲೇ, ಈ ಷೋ ಸ್ಕ್ರಿಪ್ಟೆಡ್ ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 'ಹುಚ್ಚರ ಸಂತೆ' ಎಂಬ ಟೀಕೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದು, ಸ್ಪರ್ಧಿಗಳ ಜಗಳವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತದೆಯೇ ಎಂಬ ಸತ್ಯಾಸತ್ಯತೆಯನ್ನು ವಿವರಿಸಲಾಗಿದೆ.

PREV
18
ಹವಾ ಸೃಷ್ಟಿಸಿರೋ ಬಿಗ್​ಬಾಸ್​

ಬಿಗ್​ಬಾಸ್​ ಸೀಸನ್​ 12 (Bigg Boss Kannada) ನಾಳೆನೇ ಶುರುವಾಗಲಿದೆ. ಇದಕ್ಕೆ ಸಕತ್​ ಜೋರಾಗಿ ತಯಾರಿ ನಡೆಯುತ್ತಿದೆ. ಬಿಗ್​ಬಾಸ್​ಗೆ ಪ್ರೇಮಿಗಳು ಎಷ್ಟರ ಮಟ್ಟಿಗೆ ಇದ್ದಾರೋ, ಇದನ್ನು ದ್ವೇಷಿಸುವವರ ಸಂಖ್ಯೆ ಕೂಡ ಅಷ್ಟೇ ಇದೆ. ಬಿಗ್​ಬಾಸ್​ನಲ್ಲಿ ನಡೆಯುವ ಅಶ್ಲೀಲ, ಅಸಭ್ಯ ನಡವಳಿಕೆ, ಉದ್ದೇಶಪೂರ್ವಕವಾಗಿ ಜಗಳವಾಡುವುದು ಇವೆಲ್ಲವುಗಳನ್ನು ಎಂಜಾಯ್​ ಮಾಡುವ ದೊಡ್ಡ ವರ್ಗ ಇರುವುದು ಒಂದೆಡೆಯಾದರೆ, ಇವುಗಳನ್ನು ಟ್ರೋಲ್​ ಮಾಡುತ್ತಲೇ ಮಜಾ ತೆಗೆದುಕೊಳ್ಳುವವರು ಇನ್ನೊಂದೆಡೆಯಾದರೆ, ಬಿಗ್​ಬಾಸ್​ ಅತ್ಯಂತ ಕೆಟ್ಟ ಷೋ ಎಂದು ಇದನ್ನು ನೋಡದೇ ಇರುವವರು ಮತ್ತೊಂದೆಡೆ.

28
ಬಿಗ್​ಬಾಸ್​​ ಅನ್ನೋದು ಹುಚ್ಚರ ಸಂತೆ

ಬಿಗ್​ಬಾಸ್​ ಎಂದರೆ ಅದೊಂದು ಹುಚ್ಚರ ಸಂತೆ ಎನ್ನುವವರು ಹಲವರು ಇದ್ದಾರೆ. ಆದರೆ, ಇದಕ್ಕೆ ಬರುವ ಟಿಆರ್​ಪಿ ರೇಟ್​ ನೋಡಿದಾಗ ಮಾತ್ರ, ಹಾಗೆ ಬೈದುಕೊಳ್ಳುವವರು ಕೂಡ ಬಿಗ್​ಬಾಸ್​ ನೋಡುತ್ತಾರೆಯೇ ಎನ್ನುವ ಸಂಶಯ ಬರುವುದು ಸುಳ್ಳಲ್ಲ. ಅದೇ ಇನ್ನೊಂದೆಡೆ, ಮೊದಲೇ ಹೇಳಿದ ಹಾಗೆ ಒಂದಷ್ಟು ಮಂದಿಗೆ ಈ ಷೋ ಆಗಿ ಬರುವುದೇ ಇಲ್ಲ. ಅಂಥವರು ಇದರ ಉಸಾಬರಿಗೂ ಹೋಗುವುದಿಲ್ಲ.

38
ತನುಶ್ರಿ ದತ್ತಾ ಮಾತು

ಒಟ್ಟಿನಲ್ಲಿ ಬಿಗ್​ಬಾಸ್​ ಬಗ್ಗೆ ಸದಾ ಪರ-ವಿರೋಧ ಚರ್ಚೆ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಅಶ್ಲೀಲತೆಯ ಪರಮಾವಧಿ ಮೀರಿರುವುದು ಕೆಲವು ಭಾಷೆಗಳ ಬಿಗ್​ಬಾಸ್​ನಲ್ಲಿ ನಡೆದದ್ದೂ ಆಗಿದೆ. ಇದೇ ಕಾರಣಕ್ಕೆ ಒಳ್ಳೆಯ ಹೆಸರು ಮಾಡಿದ ಕೆಲವರು ತಾವು ಬಿಗ್​ಬಾಸ್​ ಆಫರ್​ ಎಕ್ಸೆಪ್ಟ್​ ಮಾಡಿಲ್ಲ ಎನ್ನುವುದು ಉಂಟು. ಈಚೆಗಷ್ಟೇ ನಟಿ ತನುಶ್ರೀ ದತ್ತಾ ಅವರು ಪರಪುರುಷನ ಜೊತೆ ಹಾಸಿಗೆ ಹಂಚಿಕೊಳ್ಳಲು ನಾನು ರೆಡಿ ಇಲ್ಲ. ಅದಕ್ಕಾಗಿಯೇ ಕೋಟಿ ಕೋಟಿ ಆಫರ್​ ಬಂದರೂ, ಬಿಗ್​ಬಾಸ್​ಗೆ ಹೋಗಿಲ್ಲ ಎನ್ನುವ ಮೂಲಕ ಹಲ್​ಚಲ್​ ಕೂಡ ಸೃಷ್ಟಿಸಿದ್ದಾರೆ.

48
ಹುಚ್ಚರ ಸಂತೆ ಅಂದೋರಿಗೆ ಸುದೀಪ್ ಉತ್ತರ​

ಅದೇನೇ ಇರಲಿ. ಒಟ್ಟಿನಲ್ಲಿ, ಬಿಗ್​ಬಾಸ್​ ಅನ್ನೋದು ಹುಚ್ಚರ ಸಂತೆ ಎನ್ನೋರಿಗೆ ಬಿಗ್​ಬಾಸ್​​ ನಡೆಸಿಕೊಂಡುವ ಕಿಚ್ಚ ಸುದೀಪ್​ (Kichcha Sudeep) ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ಬಿಗ್​ಬಾಸ್​​ ಅನ್ನು ಹುಚ್ಚರ ಸಂತೆ ಅಂತೀರಿ. ಇದನ್ನು ನಡೆಸಿಕೊಡುವ ನಾನೇ ಹುಚ್ಚ. ಇನ್ನೇನು ಹೇಳುವುದು ಎನ್ನುವ ಮೂಲಕ ಮತ್ತೆ ಈ ಬಗ್ಗೆ ಮರುಪ್ರಶ್ನೆ ಕೇಳದಂತೆ ಬಾಯಿ ಮುಚ್ಚಿಸಿದ್ದಾರೆ.

58
ಸ್ಕ್ರಿಪ್ಟೆಡ್‌ ಬಿಗ್​ಬಾಸ್​?

ಅಷ್ಟಕ್ಕೂ ಬಿಗ್​ಬಾಸ್​ ಭಾಷೆ ಯಾವುದೇ ಇರಲಿ, ಬಿಗ್‌ಬಾಸ್‌ನಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್‌. ಇಲ್ಲಿರುವ ಸ್ಪರ್ಧಿಗಳು ಬಿಗ್​ಬಾಸ್​ ಕೈಗೊಂಬೆಗಳು ಅಷ್ಟೇ... ಆದರೆ ನೋಡುಗರಿಗೆ ಎಲ್ಲವೂ ಅಚಾನಕ್​ ಆಗಿ ಆಗಿದ್ದು ಎನ್ನಿಸುತ್ತದೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಇದಾಗಲೇ ಬೇರೆ ಬೇರೆ ಭಾಷೆಗಳ ಬಿಗ್​ಬಾಸ್​ಗೆ ಹೋಗಿ ಬಂದವರೂ ಇಲ್ಲಿರುವುದೆಲ್ಲವೂ ಸ್ಕ್ರಿಪ್ಟೆಡ್​, ಜನರನ್ನು ಮರಳು ಮಾಡುವ ತಂತ್ರವಷ್ಟೇ. ಇದನ್ನು ಅರಿಯದ ಪ್ರೇಕ್ಷಕರು ತಮ್ಮ-ತಮ್ಮ ನಡುವೆ ಸುಖಾ ಸುಮ್ಮನೆ ಕಿತ್ತಾಡಿಕೊಳ್ತಾರೆ ಅಷ್ಟೇ ಎಂದು ಹೇಳಿದ್ದು ಇದೆ.

68
ಗುಟ್ಟು ರಟ್ಟಾಗದಂತೆ ಷರತ್ತು?

ಆದರೆ ಈ ಗುಟ್ಟನ್ನು ಎಲ್ಲಿಯೂ ರಟ್ಟು ಮಾಡಬಾರದು ಎಂದು ಸ್ಪರ್ಧಿಗಳಿಗೆ ಮೊದಲೇ ಷರತ್ತು ಹಾಕಿರಲಾಗುತ್ತದೆ ಎನ್ನುವ ಮಾತೂ ಇದೆ. ಬಿಗ್‌ಬಾಸ್‌ ಮಾತ್ರವಲ್ಲದೇ ಡಾನ್ಸ್‌ ಷೋ ಸೇರಿದಂತೆ ಎಲ್ಲ ರೀತಿಯ ರಿಯಾಲಿಟಿ ಷೋಗಳದ್ದೂ ಇದೇ ಕಥೆ. ವೇದಿಕೆ ಮೇಲೆ ಅಳುವುದು, ಚಿಕ್ಕ ಮಕ್ಕಳು ದೊಡ್ಡವರಂತೆ ಡೈಲಾಗ್‌ ಹೇಳುವುದು ಇದ್ಯಾವುದೂ ಅಚಾನಕ್‌ ಅಲ್ಲ ಎಂದೂ ಹೇಳಲಾಗುತ್ತದೆ.

78
ಜಗಳ ಕ್ರಿಯೇಟ್​ ಮಾಡಲಾಗುತ್ತದೆ

ಆದರೆ ಕೆಲವು ಸ್ಪರ್ಧಿಗಳು ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಕ್ರಿಯೇಟ್​ ಮಾಡುತ್ತಾರೆ ಎನ್ನುವ ಬಗ್ಗೆ ಹೇಳಿದ್ದಾರೆ. ಸ್ಕ್ರಿಪ್ಟೆಡ್​ ಎನ್ನುವುದು ಸುಳ್ಳು. ಆದರೆ ಜಗಳ ಅಂತೂ ಅವರೇ ಕ್ರಿಯೇಟ್​ ಮಾಡುತ್ತಾರೆ. ಯಾರಾದರೂ ಸ್ಪರ್ಧಿಗಳಿಗೆ ಪರಸ್ಪರ ಆಗುತ್ತಿಲ್ಲ ಎಂದಾದರೆ ಅವರೇ ಎದುರು ಬದುರು ಬರುವ ಟಾಸ್ಕ್​ ಕೊಡುತ್ತಾರೆ. ಮೊದಲೇ ಉರಿಯುತ್ತಿರುವ ಸ್ಪರ್ಧಿಗಳು ಸಹಜವಾಗಿ ಈ ಟಾಸ್ಕ್​ನಿಂದ ಗಲಾಟೆ ಮಾಡಿಕೊಳ್ಳುತ್ತಾರೆ. ಅಲ್ಲಿ ಗಲಾಟೆ ಸೃಷ್ಟಿಯಾಗುತ್ತದೆ. ಈ ಮಟ್ಟಿಗೆ ಅಷ್ಟೇ ಬಿಗ್​ಬಾಸ್​ನಲ್ಲಿ ನಡೆಯುವುದೇ ವಿನಾ ಹೇಳಿಕೊಟ್ಟು ಆಗುವಂಥದ್ದು ಏನೂ ಇಲ್ಲ. ಎಲ್ಲಾ ಸುಳ್ಳು ಎನ್ನುತ್ತಾರೆ.

88
ವರ್ತೂರು ಸಂತೋಷ್​ ಹಿಂದೆ ಹೇಳಿದ್ದು ಹೀಗೆ...

ಈ ಹಿಂದೆ ವರ್ತೂರು ಸಂತೋಷ್​ ಅವರು, ಈ ಬಾರಿಯ ಬಿಗ್‌ಬಾಸ್‌ನಲ್ಲಿ ನೋಡಿ ಈ ಸಲ ಐದು ನಿಮಿಷಕ್ಕೆ ಕಿತ್ತಾಡ್ತಾರೆ, ಮತ್ತೆ ಐದು ನಿಮಿಷಕ್ಕೆ ಒಂದಾಗ್ತಾರೆ, ಮತ್ತೆ ಇನ್ನೇನೋ ಮಾಡ್ತಾರೆ. ಇದೇ ಕಾರಣಕ್ಕೆ ಇದು ಸ್ಕ್ರಿಪ್ಟೆಡ್‌ ಆಗಿ ಮಾಡೋದು ಎವಿಡೆಂಟ್‌ ಆಗಿ ಕಾಣಿಸುತ್ತೆ ಎಂದಿದ್ದರು.

Read more Photos on
click me!

Recommended Stories