ಕಿಚ್ಚ ಸುದೀಪ್‌ ಷರತ್ತಿಗೆ ತಲೆ ಬಾಗಿದ ವಾಹಿನಿ; ಕನ್ನಡಿಗರ ಮನ ಗೆದ್ದಿದ್ದು Bigg Boss ಮನೆ ಅಲ್ಲ, ಅರಮನೆ

Published : Sep 27, 2025, 01:03 PM IST

ಬಿಗ್‌ ಬಾಸ್‌ ಕನ್ನಡ 12 ಶೋ ಶುರುವಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿಯ ಮನೆ ಹೇಗಿರಲಿದೆ ಎಂಬ ಕುತೂಹಲ ಅನೇಕರಿಗೆ ಇರಬೇಕಲ್ಲ… “ಕನ್ನಡಕ್ಕೆ ಆದ್ಯತೆ ಕೊಟ್ಟರೆ ಮಾತ್ರ ನಾನು ಬಿಗ್‌ ಬಾಸ್‌ ಶೋ ನಡೆಸುತ್ತೇನೆ” ಎಂದು ಕಿಚ್ಚ ಸುದೀಪ್‌ ಕಂಡೀಶನ್‌ ಹಾಕಿದ್ದರು. ಈಗ ವಾಹಿನಿ ತಲೆಬಾಗಿದೆ.  

PREV
19
ಮನೆಯಲ್ಲ, ಅರಮನೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಲೋಗೋ ರೂಪುಗೊಳ್ಳುವಾಗ ಅಲ್ಲಿಯೂ ಕೂಡ ಕನ್ನಡದಲ್ಲಿ 12 ನಂಬರ್‌ನ್ನು ಬರೆಯಲಾಗಿತ್ತು. ಈಗ ಮನೆಯಲ್ಲಿ ಮೈಸೂರಿನ ಅರಮನೆಯ ಪ್ರತಿಬಿಂಬ ಕಾಣ್ತಿದೆ. ಅಂದಹಾಗೆ ದಸರಾ ಕೂಡ ಶುರುವಾಗಿದೆ, ಮೈಸೂರು ಅರಮನೆ ರೀತಿಯಲ್ಲಿ ಬಿಗ್‌ ಬಾಸ್‌ ಮನೆ ರೂಪುಗೊಂಡಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಕನ್ನಡದ ಸೊಗಡು, ಸಂಸ್ಕೃತಿ, ಛಾಯೆ ಎದ್ದು ಕಾಣುತ್ತಿದೆ.

29
ಇಲ್ಲಿ ಯುದ್ಧ ಆಗುತ್ತದೆ ಎಂದ ಕಿಚ್ಚ ಸುದೀಪ್

ಕಿಚ್ಚ ಸುದೀಪ್‌ ಅವರು ಮನೆಯೊಳಗಡೆ ಎಂಟ್ರಿ ಕೊಟ್ಟಿದ್ದಾರೆ. “ನಮ್ಮ ರಿಚ್‌ ಆಗಿರೋ ಕರ್ನಾಟಕವನ್ನು ಒಂದೇ ಕಡೆ ನೋಡಿದ್ರೆ ಹೇಗಿರುತ್ತದೆ ಅಂತ ನೀವು ನೋಡಬೇಕು ಅಂದರೆ ಈ ಬಾರಿ ಬಿಗ್‌ ಬಾಸ್‌ ಕನ್ನಡ 12 ನೋಡಿ. ಒಂದು ಅರಮನೆ ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ಆಗಿವೆ. ಈ ಮನೆಯನ್ನು ತಮ್ಮನ್ನು ತಾವು ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ನಡೆಯೋದಿದೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಹಬ್ಬ ಈಗ ಶುರು” ಎಂದು ಅವರು ಹೇಳಿದ್ದಾರೆ.

39
ಮೈಸೂರು ದಸರಾ ಕಳೆ

ಮನೆ ಎಂಟ್ರಿಯಲ್ಲಿ ಮೈಸೂರು ಅರಮನೆ ರೀತಿ ಡಿಸೈನ್‌ ಇದೆ. ಒಳಗಡೆ ಯಕ್ಷಗಾನದ ಫೋಟೋ ಹಾಕಲಾಗಿದೆ. ಇನ್ನೊಂದು ಕಡೆ ಟಿಪ್ಪು ಸುಲ್ತಾನ್‌ ಹುಲಿಯ ಜೊತೆಗೆ ಹೋರಾಡುವ ಫೋಟೋ ಇದೆ. ಅಷ್ಟೇ ಅಲ್ಲದೆ ಆನೆಯ ಫೋಟೋ ಕೂಡ ಇದೆ.

49
ಕನ್ನಡಿಗರ ಮನ ಗೆದ್ದ ಅರಮನೆ

ಈ ಮನೆಯನ್ನು ನೋಡಿ ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

  • ಕನ್ನಡ, ಕನ್ನಡತನಕ್ಕೆ ಆದ್ಯತೆ, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಒತ್ತು, ಕನ್ನಡದ ಬೇರುಗಳಿಗೆ ಪ್ರಾಮುಖ್ಯತೆ, ಮನೆ ಮಾತ್ರ ಸೈಕ್ ಆಗಿ ಇದೆ
  • ಇಷ್ಟೊಂದು ಇನೋವೇಟಿವ್ ಆಗಿ ಇದೆ ಈ ಬಾರಿ ಮನೆಯಿದೆ. ಆದರೆ ನೋಡ್ಬೇಕು ಮನೆಗೆ ತಕ್ಕಂತಹ ಸ್ಪರ್ಧಿಗಳು ಬರ್ತಾರಾ ಎಂದು ಕಾದು ನೋಡಬೇಕಿದೆ.
59
ಹಾರೈಸಿದ ವೀಕ್ಷಕರು
  • ಬಿಗ್ ಬಾಸ್ ಸೀಸನ್ ಹನ್ನೆರಡು, ಬಿಗ್ ಬಾಸ್ ಅರಮನೇನ ನೋಡೋಕೆ ಸಾಲದು ಕಣ್ಣೆರಡು
  • ಮಹಿಳೆಯರು ಸೀರೆ ತೊಟ್ಟು ಕೊಂಕುಮ ಬೊಟ್ಟು ಇಟ್ಕೊಂಡು, ಅರಮನೆಯೊಳಗಡೆ ಬರಬೇಕು, ನಮ್ಮ ಸಂಸ್ಕೃತಿಯ ಹಬ್ಬವನ್ನು ಬಿಗ್‌ ಬಾಸ್‌ ಮನೆಗೂ ಚೆಲ್ಲಿ ಶುಭ ಕಾರ್ಯ ಆರಂಭವಾಗಲಿ
69
ದಸರಾ ಕಥೆ

ಈ ಮನೆಯಲ್ಲಿ ಅಂಬಾರಿ ಫೋಟೋ ಇದೆ, ಆನೆಯ ಫೋಟೋ ಇದೆ. ಒಟ್ಟಿನಲ್ಲಿ ನಮ್ಮ ನಾಡಿನ ಕಥೆಯನ್ನು ಹೇಳುವ ಫೋಟೋಗಳು ಇಲ್ಲಿವೆ. ಇನ್ನು ಟಿಪ್ಪು ಹಾಗೂ ಹುಲಿ ನಡುವೆ ಫೈಟ್‌ ಆಗುವ ಫೋಟೋ ಕೂಡ ಇದೆ. ಹುಲಿಯ ಚಿತ್ರದ ನಡುವೆ ಒಂದಿಷ್ಟು ಅಕ್ಷರಗಳನ್ನು ಬರೆಯಲಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಯಾವೆಲ್ಲ ಶಬ್ದಗಳನ್ನು ಜಾಸ್ತಿ ಬರೆಯಲಾಗುವುದೋ ಆ ಶಬ್ದಗಳು ಇಲ್ಲಿವೆ.

79
ಎಂಥ ಚೆಂದದ ಮನೆ

ಅರಮನೆಯಂಥ ಮನೆ, ಅದ್ಭುತ ಸೆಟ್‌, ಮನೆ ತುಂಬ ಬೆಳಕು, ಗಾರ್ಡನ್‌ ಏರಿಯಾ, ಬೆಡ್‌ರೂಮ್‌ ಏರಿಯಾ, ಲಿವಿಂಗ್‌ ಏರಿಯಾ, ಕಿಚನ್‌, ಸ್ವಿಮ್ಮಿಂಗ್‌ ಪೂಲ್‌, ಬಾಲ್ಕನಿ, ವಾಶ್‌ರೂಮ್‌ ಏರಿಯಾ ಎಂದು ಇಲ್ಲಿ ಭವ್ಯವಾದ ಅರಮನೆ ರೆಡಿಯಾಗಿದೆ. ಬಿಗ್‌ ಬಾಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಮನೆ ರೆಡಿ ಆಗಿದೆ. 

89
ಗ್ರ್ಯಾಂಡ್‌ ಆರಂಭ

ಸೆಪ್ಟೆಂಬರ್‌ 28ರಂದು ಸಂಜೆ 6 ಗಂಟೆಗೆ ಈ ಶೋನ ಆರಂಭ ಆಗಿದೆ. ಒಟ್ಟಿನಲ್ಲಿ ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಬರ್ತಾರೆ? ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.

99
ಕಿಚ್ಚ ಸುದೀಪ್‌ ಆಸೆ

ಕನ್ನಡಿಗರಿಗೆ, ಕನ್ನಡಕ್ಕೆ ಬೆಲೆ ಕೊಡಬೇಕು ಎನ್ನೋದು ಕಿಚ್ಚ ಸುದೀಪ್‌ ಆಶಯವಾಗಿತ್ತು. ನನಗೆ ಬೆಂಗಳೂರಿನಲ್ಲಿರುವ ಆಫೀಸ್‌ನಿಂದ ಯಾವುದೇ ಸಮಸ್ಯೆ ಇರಲಿಲ್ಲ, ಮೇಲಿನವರು ನಡೆದುಕೊಳ್ಳೋದು ನೋಡಿ ನನಗೆ ಬೇಸರ ಆಗಿತ್ತು. ಹೀಗಾಗಿ ಬಿಗ್‌ ಬಾಸ್‌ ಶೋ ನಡೆಸಿಕೊಡೋದು ಬೇಡ ಎಂದು ಹಿಂದೆ ಸರಿದಿದ್ದೆ ಎಂದು ಅವರು ಹೇಳಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories