ನಾನು ಬಾಲ್ಯ ನೋಡಿದ್ದೇ ಬಿಗ್​ಬಾಸ್​ನಲ್ಲಿ- ಕೊಬ್ಬು ಇವಳಿಗೆ​ ಎನ್ನೋರಿಗೆ Namratha Gowda ಹೇಳಿದ್ದೇನು?

Published : Apr 20, 2026, 12:35 PM IST

ಕರ್ಣ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ, ತಮ್ಮನ್ನು 'ಅಟಿಟ್ಯೂಡ್' ಹುಡುಗಿ ಎಂದು ತಪ್ಪಾಗಿ ತಿಳಿಯುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಬಿಗ್‌ಬಾಸ್ ನಂತರ ಬದಲಾದ ತಮ್ಮ ಜೀವನ ಹಾಗೂ ಬಾಲ್ಯದ ಬಗ್ಗೆ ಮಾತನಾಡಿದ ಅವರು, ಕಾರ್ತಿಕ್ ಮಹೇಶ್ ಜೊತೆಗಿನ ಡೇಟಿಂಗ್  ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

PREV
16
ಕರ್ಣ ಸೀರಿಯಲ್​ ನಿತ್ಯಾ

ಸದ್ಯ ನಮ್ರತಾ ಗೌಡ ಅವರ ಕರ್ಣ ಸೀರಿಯಲ್​ನಲ್ಲಿ ನಿತ್ಯಾ ಪಾತ್ರದ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದಕ್ಕೂ ಮುನ್ನ ಬಿಗ್​ಬಾಸ್​​ ಮೂಲಕ ಎಲ್ಲರನ್ನೂ ರಂಜಿಸಿದ್ದರು ನಟಿ.

26
ಅಟಿಟ್ಯೂಡ್​ ಅಂತಾರೆ, ಆದ್ರೆ...

ತಮ್ಮನ್ನು ನೋಡಿ ಇವಳಿಗೆ ಅಟಿಟ್ಯೂಡ್​ ಹೆಚ್ಚು ಎಂದುಕೊಳ್ಳುವವರೇ ಹೆಚ್ಚುಮಂದಿ. ಆದರೆ ನಾನು ಹಾಗಲ್ಲ. ನನ್ನ ಸ್ವಭಾವವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ನಟಿ, kannada.mojo360ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

36
ಬಾಲ್ಯ ಅಷ್ಟೊಂದು ಗ್ರೇಟ್​ ಇರಲಿಲ್ಲ

ನನ್ನ ಬಾಲ್ಯ ಅಷ್ಟೊಂದು ಗ್ರೇಟ್​ ಇರಲಿಲ್ಲ. ಏಕೆಂದರೆ ಬಾಲ್ಯದಲ್ಲಿ ಮಕ್ಕಳ ಹಾಗೆ ಚಿಲ್​ ಮಾಡಿರಲಿಲ್ಲ. ನಾನು ಡಾನ್ಸ್​, ಸಂಗೀತ, ಕರಾಟೆ, ಅದೂ ಇದೂ ಎಂದು ಎಲ್ಲಾ ಕ್ಲಾಸ್​​ಗಳಿಗೆ ಹೋಗುತ್ತಿದ್ದೆ. ಸಿಕ್ಕಾಪಟ್ಟೆ ಬಿಜಿ ಆಗಿಬಿಟ್ಟಿದ್ದೆ. ಇತರ ಮಕ್ಕಳ ಜೊತೆ ಆಡುವುದು, ಚಿಲ್ ಮಾಡುವುದು, ಅವರ ಜೊತೆ ಹೊರಗಡೆ ಹೋಗುವುದು ಯಾವುದೂ ನನಗೆ ಸಿಗಲೇ ಇಲ್ಲ ಎಂದಿದ್ದಾರೆ ನಟಿ.

46
ಬಿಗ್​ಬಾಸ್ ಬಳಿಕ...

ನಾನು ನನ್ನ ನಿಜವಾದ ಬಾಲ್ಯ ನೋಡಿದ್ದೇ ಬಿಗ್​ಬಾಸ್​ನಲ್ಲಿ. ಬಿಗ್​ಬಾಸ್​ನಿಂದ ಬಂದ ಬಳಿಕ ಚೇಂಜ್​ ಆದೆ. ಮೊದಲಿಗೆ ಜನರ ಜೊತೆ ಮಾತನಾಡುವುದು, ಮಿಂಗಲ್​ ಆಗುವುದು ಅಷ್ಟಾಗಿ ಬರುತ್ತಿರಲಿಲ್ಲ. ಏಕೆಂದ್ರೆ ಬಾಲ್ಯದಲ್ಲಿ ಅವ್ಯಾವುದನ್ನೂ ಮಾಡಿರಲಿಲ್ಲ. ಆದ್ದರಿಂದ ಜನರನ್ನು ಸೆಲೆಕ್ಟ್​ ಮಾಡುವಾಗಲೂ ಚ್ಯೂಸಿ ಆಗಿಬಿಡುತ್ತಿದ್ದೆ. ಇದನ್ನೇ ಅಟಿಟ್ಯೂಡ್​ ಅಂದುಕೊಳ್ಳುತ್ತಾರೆ, ಆದರೆ ಅದು ನಿಜವಲ್ಲ ಎಂದು ಹೇಳಿದ್ದಾರೆ ನಮ್ರತಾ ಗೌಡ.

56
ಡೇಟಿಂಗ್​ ಬಗ್ಗೆ ನಟಿ ಸದ್ದು

ಅದೇ ಇನ್ನೊಂದೆಡೆ ನಮ್ರತಾ ಗೌಡ ಡೇಟಿಂಗ್​ ವಿಷ್ಯದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ಭಾಗವಹಿಸಿದ್ದ ನಮ್ರತಾ ಗೌಡ ಹಾಗೂ ಕಾರ್ತಿಕ್‌ ಮಹೇಶ್‌ ಅವರು ಶೋ ಮುಗಿದಬಳಿಕ, ಇನ್ನಷ್ಟು ಸ್ನೇಹದಿಂದ ಇದ್ದರು. ನಮ್ರತಾ ಮನೆಯ ಕಾರ್ಯಕ್ರಮಗಳಿಗೆ ಕಾರ್ತಿಕ್‌ ಬಂದಿದ್ದರು, ಕಾರ್ತಿಕ್‌ ಮನೆಯ ಕಾರ್ಯಕ್ರಮಗಳಲ್ಲಿ ನಮ್ರತಾ ಇದ್ದರು. ಅಷ್ಟೇ ಅಲ್ಲದೆ ಕಾರ್ತಿಕ್‌ ಗ್ರ್ಯಾಂಡ್‌ ಬರ್ತಡೇಯಲ್ಲಿ ನಮ್ರತಾ ಭಾಗಿಯಾಗಿದ್ದರು, ಇದು ಅನೇಕರಿಗೆ ಸಂಶಯ ಮೂಡಿಸಿತ್ತು.

66
ನಟಿಯಿಂದ ಸ್ಪಷ್ಟನೆ

“ನನ್ನ ರಿಲೇಶನ್‌ಶಿಪ್‌ ಸ್ಟೇಟಸ್, ಮದುವೆಯ ಬಗ್ಗೆ ಸಾಕಷ್ಟು ವದಂತಿ ಹರಡುತ್ತಿರೋದು ನಾನು ಗಮನಿಸುತ್ತಿದ್ದೇನೆ. ನಾನೊಂದು ಮಾತು ಹೇಳ್ತೀನಿ ಕೇಳಿ, ಒಂದು ವೇಳೆ ನಾನು ಮದುವೆಯಾಗುತ್ತಿದ್ದರೆ, ಈ ವಿಷಯವನ್ನು ಗುಟ್ಟಾಗಿಡಲು ನಾನೇ ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದೆನು. ಆದರೆ ಮದುವೆ ಸೀರೆಗಾಗಿ ಹೊಸ ಬಣ್ಣವೊಂದನ್ನು ಸಂಶೋಧಿಸುತ್ತಿದ್ದಾರಂತೆ ಎಂದು ನಾನು ಕೇಳಲ್ಪಟ್ಟೆ, ಅದು ಮಾರ್ಕೆಟ್‌ಗೆ ಬರುವವರೆಗೆ ನಾನು ಇನ್ನು ಕೆಲವು ವರ್ಷ ಕಾಯಲಿದ್ದೇನೆ. ಇಷ್ಟೇ ನಾನು ಹೇಳೋಕೆ ಇರೋದು” ಎಂದು ನಟಿ ನಮ್ರತಾ ಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories