Bigg Boss ಕಾವ್ಯಾ ಜೊತೆ ಗಿಲ್ಲಿ ನಟ ಫೋನ್​ನಲ್ಲೇ ರೊಮಾನ್ಸ್​: ಅವ್ರು ಬಿಟ್ಟರೂ ಇವ್ರು ಬಿಡಲ್ಲ ನೋಡಿ!

Published : Apr 19, 2026, 08:05 PM IST

ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ನಿರೂಪಕಿಯ ಕೋರಿಕೆಯಂತೆ ಕಾವ್ಯಾ, ಗಿಲ್ಲಿಗೆ ಕರೆ ಮಾಡಿದಾಗ, ಅವರು ಹಾಸ್ಯಮಯವಾಗಿ ಹಾಡೊಂದನ್ನು ಹಾಡಿದ್ದು, ವೇದಿಕೆಯಲ್ಲಿ ನಗುವಿನ ಅಲೆ ಎಬ್ಬಿಸಿತು.

PREV
16
ಬಿಗ್​ಬಾಸ್​​ 12

ಬಿಗ್​ಬಾಸ್​​ 12 (Bigg Boss 12) ಹವಾ ತಣ್ಣಗಾಗುತ್ತಾ ಬಂದಿದ್ದರೂ, ಆಗಾಗ್ಗೆ ಸ್ಪರ್ಧಿಗಳನ್ನು ರಿಯಾಲಿಟಿ ಷೋ, ಜಾಹೀರಾತು ಎಂದೆಲ್ಲಾ ಕರೆಯುವ ಕಾರಣ ಅವರು ಸದಾ ಸುದ್ದಿಯಲ್ಲಿ ಇರುತ್ತಿದ್ದಾರೆ.

26
ಗಿಲ್ಲಿ-ಕಾವ್ಯಾ ಜೋಡಿ

ಅಂಥವರಲ್ಲಿ ಒಬ್ಬರು ಬಿಗ್​ಬಾಸ್​​ ವಿನ್ನರ್​ ಗಿಲ್ಲಿ ನಟ ಮತ್ತು ಅವರ ಜೊತೆ ಸಕತ್​ ಸೌಂಡ್​ ಮಾಡಿದ್ದ ಕಾವ್ಯಾ ಶೈವ. ಇವರಿಬ್ಬರ ಬಾಂಡಿಂಗ್​ ಸಿಕ್ಕಾಪಟ್ಟೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ಹಲವರು ಇವರಿಬ್ಬರ ಮದುವೆಯನ್ನೂ ಎಐ ಮೂಲಕ ಮಾಡಿಸಿ, ಮಗುವನ್ನೂ ಹುಟ್ಟಿಸಿಬಿಟ್ಟಿದ್ದಾರೆ.

36
ಕಾವ್ಯಾ ಶೈವ ಮತ್ತು ಸ್ಪಂದನಾ ಸೋಮಣ್ಣ

ಅದಕ್ಕೆ ತಕ್ಕಂತೆ ಗಿಲ್ಲಿ ನಟ ಕಾವ್ಯಾ ಅವರನ್ನು ಸದಾ ರೇಗಿಸುತ್ತಲೇ ಇದ್ದಾರೆ. ಇದೀಗ ಗಿಚ್ಚಿ ಗಿಲಿಗಿಲಿ ಷೋನಲ್ಲಿ ಕಾವ್ಯಾ ಶೈವ ಮತ್ತು ಸ್ಪಂದನಾ ಸೋಮಣ್ಣ ಅವರನ್ನು ಅತಿಥಿಯಾಗಿ ಕರೆಸಲಾಗಿದೆ.

46
ಗಿಲ್ಲಿ ನಟನಿಗೆ ಕಾಲ್​

ಈ ಷೋನಲ್ಲಿ ಗಿಲ್ಲಿ ನಟನಿಗೆ ಕರೆ ಮಾಡುವಂತೆ ಕಾವ್ಯಾ ಅವರಿಗೆ ನಿರೂಪಕಿ ಅನುಪಮಾ ಗೌಡ ಹೇಳಿದ್ದಾರೆ. ಗಿಲ್ಲಿ ಫೋನ್​ ರಿಸೀವ್​ ಮಾಡಿದಾಗ, ಅವರಿಗೆ ಕಾವ್ಯಾಗಾಗಿ ಏನಾದರೂ ಹಾಡು ಹೇಳಿ ಎಂದಿದ್ದಾರೆ.

56
ನೀ ಎಂದರೆ ನನಗೇನೋ ...

ಗಿಲ್ಲಿ ನಟ ಕವನವನ್ನು ಹೇಳಿದಾಗ, ಅದೆಲ್ಲಾ ಬೇಡ ಹೊಸ ಹಾಡು ಹೇಳಿ ಎಂದಾಗ, ಗಿಲ್ಲಿ ನಟ ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ನೀ ಎಂದರೆ ನನಗೇನೋ ಎನ್ನುವ ಹಾಡು ಹಾಡಿದ್ದಾರೆ.

66
ಹಾಸ್ಯದ ಹೊನಲು

ಒಟ್ಟಿನಲ್ಲಿ ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಹಾಸ್ಯದ ಹೊನಲು ನಡೆದಿದೆ. ಕಾವ್ಯಾ ಶೈವ ಇದರಿಂದ ಯಾಕೋ ಅಷ್ಟು ಖುಷಿಯಾಗಿಲ್ಲದಂತೆ ಕಂಡುಬಂದಿರುವುದು ಹೈಲೈಟ್​ ಆಗಿದೆ. ಆದರೂ ಎಲ್ಲರೂ ತಮಾಷೆ ಮಾಡುತ್ತಿದ್ದಾರೆ ಎಂದು ಅವರೂ ನಕ್ಕಿದ್ದಾರಷ್ಟೇ. ಒಟ್ಟಿನಲ್ಲಿ ಕಾವ್ಯಾ-ಗಿಲ್ಲಿ ಸುಮ್ಮನೇ ಇದ್ದರೂ ಅವರ ಫ್ಯಾನ್ಸ್​ ಮಾತ್ರ ಅವರನ್ನು ಬಿಡುವಂತೆ ಕಾಣುತ್ತಿಲ್ಲ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories