ನಂದಗೋಕುಲದಲ್ಲಿ ಮಹಾ ಬಿರುಕು: ಅತಿಯಾಗಿ ಆಡ್ತಿದ್ದ ಹಿತ್ತಾಳೆ ಕಿವಿ ನಂದನಿಗೆ ಬಿಗ್ ಶಾಕ್!

Published : Apr 20, 2026, 11:13 AM IST

ನಂದಗೋಕುಲ ಧಾರಾವಾಹಿಯಲ್ಲಿ, ಪತ್ನಿ ಮೀನಾಗೆ ಆದ ಅವಮಾನವನ್ನು ಸಹಿಸದ ಕೇಶವ, ತಂದೆ ನಂದಕುಮಾರ್ ವಿರುದ್ಧ ಮೊದಲ ಬಾರಿಗೆ ಧ್ವನಿ ಎತ್ತಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಂದ ಬೇಸತ್ತು, ಪ್ರತ್ಯೇಕ ಮನೆ ಮಾಡುವ ನಿರ್ಧಾರವನ್ನು ಮೀನಾ ಮುಂದೆ ಪ್ರಸ್ತಾಪಿಸಿದ್ದು, ಕಥೆಗೆ ಹೊಸ ತಿರುವು ಸಿಕ್ಕಿದೆ.

PREV
15
ನಂದಗೋಕುಲ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿ ನಂದಗೋಕುಲ ಧಾರಾವಾಹಿ ಕಥೆ ಮಹಾತಿರುವು ಪಡೆದುಕೊಳ್ಳುತ್ತಿದೆ. ಅಪ್ಪನೊಂದಿಗೆ ಪ್ರಾವಿಸನ್ ಸ್ಟೋರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಎರಡನೇ ಮಗ ಕೇಶವ್ ಮೊದಲ ಬಾರಿಗೆ ತಂದೆ ನಂದಕುಮಾರ್ ವಿರುದ್ಧ ಮಾತನಾಡಿದ್ದಾರೆ. ತನ್ನನ್ನು ಎಷ್ಟೇ ಅವಮಾನಿಸಿದ್ರೂ ಸುಮ್ಮನಿದ್ದ ಕೇಶವ್‌, ಇದೀಗ ಪತ್ನಿ ಮೀನಾಗಾದ ಅವಮಾನವನ್ನು ಕಟುವಾಗಿ ಖಂಡಿಸಿದ್ದಾರೆ.

25
ಪ್ರಿಯಾ ಹೇಳಿದ ಚಾಡಿ

ಅಮೂಲ್ಯಾಗೆ ಟ್ಯೂಷನ್ ಮಾಡಲು ಮೀನಾ ಸಹಾಯ ಮಾಡಿದ್ದಳು. ಹಿರಿ ಸೊಸೆ ಪ್ರಿಯಾ ಹೇಳಿದ ಚಾಡಿಯಿಂದಾಗಿ ಹಿಂದೆ ಮುಂದೆ ಯೋಚಿಸದೇ ಮೀನಾಗೆ ನಂದಕುಮಾರ್ ಬೈದಿದ್ದನು. ಮಾವನ ಮಾತುಗಳನ್ನು ಕೇಳಿ ಮೀನಾ ಬಿಕ್ಕಿ ಬಿಕ್ಕಿ ಅತ್ತಿದ್ದಳು. ನಂತರ ಗಂಡ ಕೇಶವ ಮತ್ತು ಅತ್ತೆ ಗಿರಿಜಾ ಇಬ್ಬರು ಮೀನಾಳನ್ನು ಸಂತೈಸಿದ್ದರು.

35
ಅಂಗಡಿಯಲ್ಲಿಯೂ ಮೀನಾಗೆ ಮಾವನ ಬೇಸರ

ಮನೆಯಲ್ಲಿ ನಡೆದ ವಿಷಯದ ಬಗ್ಗೆ ಅಂಗಡಿಯಲ್ಲಿ ಹನುಮಂತಣ್ಣ ಜೊತೆ ನಂದ ಚರ್ಚೆ ಮಾಡುತ್ತಿದ್ದನು. ಇತ್ತೀಚೆಗೆ ಮೀನಾ ಅತಿರೇಕವಾಗಿ ನಡೆದುಕೊಳ್ಳುತ್ತಿದ್ದಾಳೆ ಎಂದ ನಂದ ತನ್ನ ಅಸಮಾಧಾನ ಹೊರಹಾಕುತ್ತಿದ್ದನು. ಈ ವೇಲೆ ಅಲ್ಲಿಯೇ ನಿಂತಿದ್ದ ಕೇಶವನಿಗೆ ಅಪ್ಪನ ಮಾತುಗಳು ಕೋಪ ತರಿಸಿತ್ತು. ಅಪ್ಪನ ಮುಂದೆ ಜೋರು ಧ್ವನಿಯಲ್ಲಿ ನನ್ನ ಹೆಂಡತಿಯದ್ದು ಏನು ತಪ್ಪಿಲ್ಲ ಎಂದು ಕೇಶವ ಗಟ್ಟಿಯಾಗಿ ಹೇಳಿದ್ದಾನೆ.

45
ಕೇಶವನ ಮಾತು ಕೇಳಿ ಮೀನಾ ಶಾಕ್

ಮಗನ ಮಾತುಗಳನ್ನು ಕೇಳಿ ನಂದ ಮತ್ತಷ್ಟು ಕೋಪಗೊಂಡಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಂದ ನೊಂದಿರುವ ಕೇಶವ ಪತ್ನಿ ಮೀನಾ ಮುಂದೆ ತಾವಿಬ್ಬರು ಪ್ರತ್ಯೇಕ ಮನೆ ಮಾಡುವ ಕುರಿತು ಚರ್ಚೆ ನಡೆಸಿದ್ದಾನೆ. ಗಂಡನ ಮಾತುಗಳನ್ನು ಕೇಳಿ ಮೀನಾ ಶಾಕ್ ಆಗಿದ್ದಾಳೆ.

ಇದನ್ನೂ ಓದಿ: ‘ನಂದಗೋಕುಲ’ ಸೀರಿಯಲ್ ನಂದ ಪಾತ್ರದ ಬಗ್ಗೆ ವೀಕ್ಷಕರು ಕಿಡಿ… ಅಪ್ಪನಿಂದಲೇ ಮನೆ ನರಕ ಆಗುತ್ತಾ?

55
ವೀಕ್ಷಕರಿಂದ ಮೆಚ್ಚುಗೆ

ಇಂದಿನ ಪ್ರೋಮೋ ನೋಡಿದ ಸೀರಿಯಲ್ ವೀಕ್ಷಕರು, ಮೊದಲು ಹೋಗ್ರಪ್ಪ ನಿಮ್ಮಪ್ಪಂದು ಅತಿಯಾಯ್ತು ಅವನಿಗೆ ಬುದ್ದಿ ಕಲಿಸಿ. ನಿಜವಾದ ಕಥೆ ಈಗ ಆರಂಭ ಇಷ್ಟು ದಿನ ಟೈಂ ಪಾಸ್ ಆಗಿತ್ತು. ಕಥೆಗಾರ ತನ್ನ ಅಸಲಿ ಆಟ ಈಗ ಬರೆಯುತ್ತಿದ್ದಾರೆ ಅಂದು ಹೊಗಳಿ ಇಂದು ತೆಗೆಳೋ ಎಲ್ಲ ಮಾವಂದಿರಿಗೂ ತಾವು ಮಾಡಿದ ತಪ್ಪನ್ನು ಈಗ ಅರ್ಥ ಮಾಡಿಸುತ್ತಿದ್ದಾರೆ ನಿರ್ದೇಶಕರು. ಸೂಪರ್ ತಿರುವು ನೀಡುತ್ತಿದ್ದೀರಿ ಎಂದು ಸೀರಿಯಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Nandagokula: ಪ್ರಿಯಾಗೆ ಇನ್ಮುಂದೆ ಉಳಿಗಾಲ ಇಲ್ಲ; ವಲ್ಲಭ, ಅಮೂಲ್ಯ ಬಳಿಕ ಮೀನಾ ರೆಬೆಲ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories