ಮಾಳವಿಕಾ ಕಳುಹಿಸಿದ ಮಹಿಷಾಸುರನಿಂದ ಹಿತಾಳ ಪ್ರಾಣಕ್ಕೆ ಕುತ್ತು ಬರುತ್ತದೆ. ಸಂಜೀವಿನಿ ತರಲು ಹೋದ ದುರ್ಗಾಳ ಪ್ರಯತ್ನ ವಿಫಲವಾದಾಗ, ಸ್ವತಃ ದೇವಿಯೇ ಪ್ರತ್ಯಕ್ಷಳಾಗಿ ಮಹಿಷಾಸುರನನ್ನು ಸಂಹರಿಸಿ ಹಿತಾಳನ್ನು ಕಾಪಾಡುತ್ತಾಳೆ.
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ ವಾಸ್ತವಕ್ಕಿಂತ ಬಹುದೂರದ ಸ್ಟೋರಿ ಹೊಂದಿದ್ದರೂ, ವೀಕ್ಷಕರು ಮಾತ್ರ ಸಕತ್ ಇಂಟರೆಸ್ಟಿಂಗ್ ಆಗಿ ನೋಡುವುದು ಇದೆ. ಇದೇ ಕಾರಣಕ್ಕೆ ಈ ಸೀರಿಯಲ್ ಟಿಆರ್ಪಿಯಲ್ಲಿಯೂ ಮುಂದಿದೆ.
27
ಮಹಿಷಾಸುರನ ಆಗಮನ
ಇದೀಗ ಹಿತಾಳ ಪ್ರಾಣವನ್ನು ಕಸಿಯಲು ಮಾಳವಿಕಾ ಜಾದೂ ಶಕ್ತಿಯಿಂದ ಮಹಿಷಾಸುರನನ್ನು ಕಳುಹಿಸಿದ್ದಾಳೆ. ಆತ ಬಂದು ಹಿತಾಳ ಪ್ರಾಣ ತೆಗೆಯಲು ಮುಂದಾಗಿದ್ದಾನೆ.
37
ದುರ್ಗಾ- ಶರತ್ಗೆ ಅಪಘಾತ
ಇತ್ತ ಸಂಜೀವಿನಿ ತರಲು ಹೊರಟ ದುರ್ಗಾ ಮತ್ತು ಶರತ್ಗೆ ಅಪಘಾತ ಮಾಡಿಸಲಾಗಿದೆ. ಶರತ್ ಪ್ರಜ್ಞೆ ಕಳೆದುಕೊಂಡಿದ್ದಾನೆ. ದುರ್ಗಾಳಿಗೆ ಸಿಕ್ಕಾಪಟ್ಟೆ ಪೆಟ್ಟಾಗಿದೆ.
ಅದೇ ಇನ್ನೊಂದೆಡೆ, ಮೃತ್ಯುಂಜಯ ಹೋಮ ನಡೆಯುತ್ತಿದೆ. ಅಲ್ಲಿ ಅಂಬಿಕಾ ತಂಗಿ ಮತ್ತು ಹಿತಾಳ ಪ್ರಾಣಕ್ಕಾಗಿ ಪ್ರಾರ್ಥಿಸುತ್ತಿದ್ದಾಳೆ. ಆದರೆ ಆಕಾಶ ಕೆಂಪಾಗುತ್ತಿದ್ದಂತೆಯೇ ಅಲ್ಲಿ ಅನಾಹುತ ಸಂಭವಿಸುತ್ತಿರುವುದು ತಿಳಿಯುತ್ತದೆ.
57
ದುಷ್ಟಶಕ್ತಿಗೆ ದುರ್ಗಾ ಕಂಗಾಲು
ಇನ್ನೇನು ದುರ್ಗಾ ಓಡಿ ಬಂದು ಸಂಜೀವಿನಿಯನ್ನು ಹಿತಾಳಿಗೆ ತಿನ್ನಿಸಬೇಕು ಎನ್ನುವಷ್ಟರಲ್ಲಿಯೇ ದುಷ್ಟಶಕ್ತಿ ಬಂದು ಆಕೆಯನ್ನು ಎಳೆದೊಯ್ಯುತ್ತದೆ. ಮಹಿಷಾಸುರ ಸಂಹರಿಸಲು ಬರುತ್ತಾನೆ.
67
ಮಾಳವಿಕಾ ಖುಷಿ
ಮಾಳವಿಕಾ ಖುಷಿಯಾಗಿದ್ದಾಳೆ. ಆದರೆ ದುರ್ಗಾಳ ಅಪ್ಪ ಶಂಭು ಮತ್ತು ಅಂಬಿಕಾ ದೇವಿಯನ್ನು ಪ್ರಾರ್ಥಿಸುತ್ತಾ ಹಿತಾಳ ಪ್ರಾಣಭಿಕ್ಷೆ ಬೇಡುತ್ತಿದ್ದಾರೆ.
77
ಮಹಿಷಾಸುರನ ವಧೆ
ಆಗ ದೇವಿಯೇ ಬಂದು ಮಹಿಷಾಸುರನ ವಧೆ ಮಾಡುತ್ತಾಳೆ. ಮಹಿಷಾಸುರ ಸಂಹಾರ ಆಗಿದ್ದು ನೋಡಿ ಮಾಳವಿಕಾಗೆ ಗಾಬರಿಯಾಗುತ್ತದೆ. ಅಲ್ಲಿ ಏನಾಗುತ್ತಿದೆ ಎಂದು ಆಕೆಗೆ ತಿಳಿಯುವುದಿಲ್ಲ. ಒಟ್ಟಿನಲ್ಲಿ ಹಿತಾಳ ಪ್ರಾಣ ಉಳಿಯುತ್ತದೆ