ಕರ್ಣ ಧಾರಾವಾಹಿಯಲ್ಲಿ ತೇಜಸ್ ಹಾಗೂ ನಿತ್ಯಾ ಮದುವೆ ನಡೆಯಬೇಕಿತ್ತು. ನಿತ್ಯಾ ತಂಗಿ ನಿಧಿಗೆ ಆಗತಾನೇ ಕರ್ಣ ಪ್ರೇಮ ನಿವೇದನೆ ಮಾಡಿದ್ದನು. ಅಕ್ಕನ ಮದುವೆ ಆಗುತ್ತಿದ್ದಂತೆ ಕರ್ಣನ ಜೊತೆ ಸಪ್ತಪದಿ ತುಳಿಯಬೇಕು ಎಂದು ನಿಧಿ ಕನಸು ಕಾಣುತ್ತಿರುವಾಗಲೇ ಅನಾಹುತವೊಂದು ನಡೆಯಿತು.
ಕರ್ಣನ ತಂದೆ ರಮೇಶ್ ಕುತಂತ್ರಕ್ಕೋ ಏನೋ ತೇಜಸ್ ಮದುವೆ ಮನೆಯಿಂದ ಓಡಿ ಹೋದ. ಮೊಮ್ಮಗಳ ಮದುವೆ ಮುರಿಯಿತು ಎಂದು ನಿತ್ಯಾ ಅಜ್ಜಿ ಶಾಂತಿ ಸಾ*ಯಲು ರೆಡಿ ಆಗಿದ್ದಳು. ರಮೇಶ್ ಪ್ಲ್ಯಾನ್‌ನಂತೆ ಕರ್ಣ ಹಾಗೂ ನಿತ್ಯಾ ಮದುವೆ ಆಗುವ ಹಾಗೆ ಆಯ್ತು. ಆದರೆ ಕರ್ಣ ಇಲ್ಲೊಂದು ಪ್ಲ್ಯಾನ್ ಮಾಡಿದ್ದನು.
27
ಇದು ಮದುವೆಯ ನಾಟಕ
ನಿಧಿಯನ್ನು ಪ್ರೀತಿಸಿ, ನಿತ್ಯಾಳನ್ನು ಮದುವೆ ಆಗೋಕೆ ಕರ್ಣನಿಗೆ ಇಷ್ಟವೇ ಇಲ್ಲ. ತಾನು ನಿತ್ಯಾಳನ್ನು ಮದುವೆ ಆಗಿಲ್ಲ ಅಂದ್ರೆ, ನನ್ನ ಅಜ್ಜಿ ಕೂಡ ಬದುಕಿರೋದಿಲ್ಲ ಎಂದು ಅವನಿಗೆ ಗೊತ್ತಾಗುವುದು. ಹೀಗಾಗಿ ಎರಡೂ ಮನೆಯ ಅಜ್ಜಿಯಂದಿರನ್ನು ಉಳಿಸಬೇಕು, ನಿತ್ಯಾ ಭವಿಷ್ಯ ಕೂಡ ಸರಿ ಹೋಗಬೇಕು ಎಂದು ಅವನು ಮದುವೆ ಆದಂತೆ ನಾಟಕ ಮಾಡುತ್ತಾನೆ. ನಿತ್ಯಾಳಿಗೆ ನೀನೇ ತಾಳಿ ಕಟ್ಟಿಕೋ ಎಂದು ಹೇಳುತ್ತಾನೆ. ರೂಮ್‌ವೊಳಗಡೆ ನಿತ್ಯಾ ತಾಳಿ ಕಟ್ಟಿಕೊಳ್ತಾಳೆ.
37
ನಿತ್ಯಾ, ನಿಧಿ, ಕರ್ಣ ಒಟ್ಟಿಗೆ ಬರ್ತಾರೆ
ಇನ್ನೊಂದು ಕಡೆ ನಿಧಿ ಮನೆಗೆ ಬೆಂಕಿ ಬೀಳುವುದು. ಲೋಕದ ಕಣ್ಣಿಗೆ ನಿತ್ಯಾಗೆ ಮದುವೆ ಆಗಿದೆ. ನಿಧಿ ಹಾಗೂ ಶಾಂತಿ ಅಜ್ಜಿ ಇಬ್ಬರೇ ಆ ಮನೆಯಲ್ಲಿ ಇರಬೇಕಿತ್ತು. ಆದರೆ ಮನೆ ಸುಟ್ಟು ಹೋಗಿದ್ದರಿಂದ ಅವರು ಕೂಡ ನಮ್ಮ ಮನೆಗೆ ಬರಲಿ ಎಂದು ಕರ್ಣನೇ ಹೇಳಿದ್ದಾನೆ. ಕರ್ಣ ಹಾಗೂ ನಿತ್ಯಾ ಇಬ್ಬರೂ ಗೃಹ ಪ್ರವೇಶ ಮಾಡಬೇಕಿತ್ತು. ಇವರಿಬ್ಬರು ಹೊಸಿಲು ತುಳಿಯುಷ್ಟರಲ್ಲಿ ನಿಧಿ ತಲೆ ತಿರುಗಿ ಬೀಳುತ್ತಾಳೆ, ಆಗ ಅಜ್ಜಿ ನಿಧಿಯನ್ನು ಎತ್ತಿಕೊಂಡು ಒಳಗಡೆ ಬಾ ಕರ್ಣ ಎಂದು ಹೇಳುತ್ತಾಳೆ. ನಿಧಿಯನ್ನು ಎತ್ತಿಕೊಂಡು ಕರ್ಣ ಒಳಗಡೆ ಬಂದರೆ ಅತ್ತ ನಿತ್ಯಾ ಕೂಡ ಬರುತ್ತಾಳೆ.
ಅಲ್ಲಿಗೆ ಈ ಮೂವರು ಒಟ್ಟಿಗೆ ಮನೆ ಪ್ರವೇಶ ಮಾಡಿದ್ದಾರೆ ಎಂದಾಯ್ತು. ಮುಂದೆ ಕರ್ಣ ಹಾಗೂ ನಿತ್ಯಾ ಪರಸ್ಪರ ಪ್ರೀತಿಸಿ, ಸಂಸಾರ ಮಾಡುತ್ತಾರೆ ಎಂದರೆ ಈಗಲೇ ಮದುವೆ ಆಗಬೇಕಿತ್ತು. ಆದರೆ ಇಲ್ಲಿ ಭಾರೀ ಟ್ವಿಸ್ಟ್ ಇದೆ.
57
ತೇಜಸ್ ಮತ್ತೆ ಬಂದರೆ?
ನಿತ್ಯಾ ಹೊಟ್ಟೆಯಲ್ಲಿ ಮಗು ಇದೆ. ತೇಜಸ್ ಯಾವ ಕಾರಣಕ್ಕೆ ಈ ಮದುವೆಯಿಂದ ದೂರ ಆದನೋ ಏನೋ, ಆದರೆ ಮುಂದಿನ ದಿನಗಳಲ್ಲಿ ತೇಜಸ್ ಬಂದರೂ ಕೂಡ ನಿತ್ಯಾ ಅವಳನ್ನು ಒಪ್ಪಿಕೊಳ್ಳೋದು ಡೌಟ್.
67
ನಿತ್ಯಾ ಮಗುವಿಗೆ ತಂದೆ ಆಗ್ತಾನಾ?
ಇನ್ನೊಂದು ಕಡೆ ತಾನು ಅನಾಥ ಎಂದು ನಿತ್ಯಾ ಹೊಟ್ಟೆಯಲ್ಲಿರುವ ಮಗುವಿಗೆ ಅನಾಥ ಪಟ್ಟ ಬೇಡ ಎಂದು ಕರ್ಣ ಅಂದುಕೊಳ್ಳುವುದುಂಟು. ನಿತ್ಯಾ ಮಗುವಿಗೆ ಅವನು ತಂದೆ ಆಗಲೂಬಹುದು.
77
ಮುಂದೆ ಏನಾಗಬಹುದು?
ಇನ್ನೊಂದು ಕಡೆ ನಿಧಿ, ಕರ್ಣನ ಪ್ರೀತಿ ಬಗ್ಗೆ ನಿತ್ಯಾಗೆ ಗೊತ್ತಿಲ್ಲ. ಕರ್ಣನನ್ನು ಕಂಡರೆ ನಿತ್ಯಾಗೆ ಇಷ್ಟ ಆಗಲೂಬಹುದು. ನಿತ್ಯಾಳನ್ನು ಹೆಂಡ್ತಿ ಎಂದು ಒಪ್ಪಿಕೊಳ್ಳಲಾಗದೆ, ನಿಧಿಯನ್ನು ಬಿಡಲಾಗದೆ ಕರ್ಣ ಒದ್ದಾಡಬಹುದು. ಆದರೆ ಮುಂದೊಂದು ದಿನ ನಿತ್ಯಾ ಮೇಲೆ ಕರ್ಣನಿಗೆ ಲವ್ ಆದರೂ ಆಶ್ಚರ್ಯವಿಲ್ಲ. ಮುಂದೆ ನಿಧಿ ಲವ್ ವಿಷಯ ಗೊತ್ತಾಗಿ, ನಿಧಿ-ಕರ್ಣ ಮದುವೆ ಆಗಲೂಬಹುದು. ಈ ಮೂವರು ಒಟ್ಟಿಗೆ ಮನೆ ಪ್ರವೇಶ ಮಾಡಿರೋದು ನೋಡಿದರೆ, ಕರ್ಣ, ನಿಧಿಯನ್ನು ಮದುವೆ ಆಗುವ ಸೂಚನೆ ಕೊಡುತ್ತಿದೆ