Karna Serial ಹ್ಯಾಂಡ್ಸಮ್​ ವಿಲನ್​ ಸಂಜಯ್​ ಹುಟ್ಟುಹಬ್ಬ: ನಾಟಕ ಮಾಡಲು ಹೋಗಿ ತುಟಿ, ರೆಪ್ಪೆ ಸುಟ್ಕೊಂಡ ಕಥೆ ಕೇಳಿ

Published : Aug 06, 2026, 12:26 PM IST

'ಕರ್ಣ' ಸೀರಿಯಲ್‌ನಲ್ಲಿ ಖಳನಾಯಕ ಸಂಜಯ್ ಪಾತ್ರದಲ್ಲಿ ಮಿಂಚುತ್ತಿರುವ ನಟ ವಿನಯ್ ಕಶ್ಯಪ್ ಅವರ ಹುಟ್ಟುಹಬ್ಬವನ್ನು ಇತ್ತೀಚೆಗೆ ತಂಡವು ಆಚರಿಸಿದೆ. ರಂಗಭೂಮಿ ಹಿನ್ನೆಲೆಯುಳ್ಳ ವಿನಯ್, ಒಮ್ಮೆ ನಾಟಕದ ಪಾತ್ರಕ್ಕಾಗಿ ಬೀಡಿ ಸೇದಲು ಹೋಗಿ ತುಟಿ ಸುಟ್ಟುಕೊಂಡಿದ್ದ ಕುತೂಹಲಕಾರಿ ಘಟನೆಯನ್ನು ಲೇಖನವು ವಿವರಿಸುತ್ತದೆ.

PREV
17
ಕರ್ಣ ಸೀರಿಯಲ್​ ಹ್ಯಾಂಡ್ಸಮ್​ ವಿಲನ್​

ಕರ್ಣ ಸೀರಿಯಲ್​ನಲ್ಲಿ (Karna Serial)ನಲ್ಲಿ ಕರ್ಣನಷ್ಟೇ ಮಹತ್ವ ಪಡೆದಿರುವ ಕ್ಯಾರೆಕ್ಟರ್​ ಅಂದರೆ ಅದು ಕರ್ಣನ ತಮ್ಮ ಸಂಜಯ್​ದು. ಕರ್ಣ ಸೀರಿಯಲ್​ನಲ್ಲಿ ಇವರ ಪ್ರೊಮೋ ಹಾಕಿದಾಗಲೆಲ್ಲಾ ಬೈಗುಳಗಳ ಸುರಿಮಳೆ ಎಷ್ಟು ಆಗುತ್ತಿದೆಯೋ ಅಷ್ಟೇ ಕಮೆಂಟ್ಸ್​, ಇಷ್ಟು ಹ್ಯಾಂಡಸಮ್​ ಆಗಿದ್ದೋರು ವಿಲನ್​ ಆಗೋದು ಬೇಡ್ತಿದ್ದು, ಹೀರೋಗೆ ಇವರು ಸೂಪರ್ ಚಾಯ್ಸ್​ ಎಂದು ಹೇಳುವವರೂ ಇದ್ದಾರೆ. ಅಂಥ ಹ್ಯಾಂಡ್​ಸಮ್​ ವಿಲನ್​ ರಿಯಲ್​ ಹೆಸರು ವಿನಯ್​ ಕಶ್ಯಪ್.

27
ಇಂದು ಹುಟ್ಟುಹಬ್ಬ

ಇಂದು ನಟ ವಿನಯ್​ ಕಶ್ಯಪ್​ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಕರ್ಣ ಟೀಂ ಕೇಕ್​ ಕಟ್​ ಮಾಡುವ ಮೂಲಕ ವಿಲನ್​ ಸಂಜಯ್​ ಹುಟ್ಟುಹಬ್ಬವನ್ನು ಗ್ರ್ಯಾಂಡಾಗಿ ಸೆಲಬ್ರೇಷನ್​ ಮಾಡಿದೆ. ಗೂಗಲ್​ ದಾಖಲೆಯ ಪ್ರಕಾರ ವಿನಯ್​ ಅವರಿಗೆ ಈಗ 29 ವರ್ಷ ವಯಸ್ಸು. (ಈ ದಾಖಲೆಯನ್ನು ಸಂಪೂರ್ಣ ನಂಬಲು ಬರುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ!)

37
ಕುತೂಹಲದ ಸ್ಟೋರಿ

ಅಂದಹಾಗೆ ವಿನಯ್​ ಕಶ್ಯಪ್​ ಅವರ ಲೈಫ್​ನ ಕುತೂಹಲದ ಸ್ಟೋರಿ ಒಂದಿದೆ. ಅದು ಸ್ಮೋಕ್​ ಮಾಡಲು ಹೋಗಿ ತುಟಿ ಸುಟ್ಟುಕೊಂಡಿರುವ ಸ್ಟೋರಿ. ಈ ಹಿಂದೆ ಈ ವಿಷಯವನ್ನು ಅವರು ಸಂದರ್ಶನವೊಂದರಲ್ಲಿ ರಿವೀಲ್​ ಮಾಡಿದ್ದರು.

47
ಬೀಡಿ ಸೇದಿದ ಸಂದರ್ಭ

ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ನಟ ವಿನಯ್​, ಅವರು ನಾಟಕದ ಸಮಯದಲ್ಲಿ ಅನಿವಾರ್ಯವಾಗಿ ಬೀಡಿ ಸೇದುವಂತಾಗಿದ್ದ ಬಗ್ಗೆ ವಿವರಿಸಿದ್ದಾರೆ. ಇವರು ತರಂಗ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರು. ಡ್ರಾಮಾ ಎಂದ ಮೇಲೆ ಆ ಪಾತ್ರ ಮಾಡಲೇಬೇಕಿತ್ತು. ಬೀಡಿ ಸೇದಲೇಬೇಕಿತ್ತು. ನಾನು ಎಂದಿಗೂ ಸ್ಮೋಕ್​ ಮಾಡಿದವನಲ್ಲ. ಮೊದಲ ಬಾರಿಗೆ ಬೀಡಿ ಸೇದಲು ಪ್ರಯತ್ನಿಸಿದಾಗ ತುಟಿ, ರೆಪ್ಪೆ ಎಲ್ಲಾ ಸುಟ್ಟುಹೋಯಿತು. ಕೆಲವು ದಿನಗಳವರೆಗೆ ಮನೆಯವರ ಜೊತೆಯೂ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

57
ಸಿನಿಮಾಗಳಲ್ಲಿಯೂ ನಟನೆ

ಇನ್ನು ವಿನಯ್ ಕಶ್ಯಪ್ ಕುರಿತು ಹೇಳುವುದಾದರೆ, ಕೋಟಿಗೊಬ್ಬಳು, ಟ್ರೈನ್ ಟು ಪಾಕಿಸ್ತಾನ್ ಎಂಬ ನಾಟಕಗಳಲ್ಲಿ ನಟಿಸಿರುವ ಇವರು, ಬೀದಿ ನಾಟಕಗಳಲ್ಲಿಯೂ ತರಬೇತಿ ಪಡೆದುಕೊಂಡಿದ್ದಾರೆ. ರಂಗಭೂಮಿ, ಸೀರಿಯಲ್​ ಮಾತ್ರವಲ್ಲದೇ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

67
ಸೀರಿಯಲ್​​ಗಳಲ್ಲಿ ನಟನೆ

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸೇವಂತಿ ಧಾರಾವಾಹಿಯಲ್ಲಿ ಅಶ್ವಿನ್ ಪಾತ್ರದಲ್ಲಿ ಮತ್ತು ಸ್ಟಾರ್ ಸುವರ್ಣ ವಾಹಿನಿಯ ಅರಮನೆ ಧಾರಾವಾಹಿಯಲ್ಲಿ ಅರುಣ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಬೆಳ್ಳಿಪರದೆಯಲ್ಲಿಯೂ ಮಿಂಚಿದ್ದ ಅವರು, ಗದಾಯುದ್ಧ ಸಿನಿಮಾದಲ್ಲಿಯೂ ಬಣ್ಣಹಚ್ಚಿದ್ದಾರೆ. ಆ ಕಡೆ ಸಿನಿಮಾ ಇಂಡಸ್ಟ್ರಿಗೂ ಕಾಲಿರುವ ವಿನಯ್ ಕಶ್ಯಪ್ 'ಮೃಗಶಿರಾ' ಖ್ಯಾತಿಯ ನಿರ್ದೇಶಕ ಶ್ರೀವತ್ಸ ಅವರ 'ಗದಾಯುದ್ಧ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ.

77
ಹಲವು ಕಾರ್ಯಕ್ರಮಗಳಲ್ಲಿ ಮಿಂಚಿಂಗ್​

ಧಾರಾವಾಹಿ ಹಾಗೂ ಸಿನಿಮಾ ಹೊರತು ಪಡಿಸಿ ಕೆಲವು ಸ್ಟೇಜ್ ಕಾರ್ಯಕ್ರಮಗಳು ಹಾಗೂ ಅವಾರ್ಡ್ ಕಾರ್ಯಕ್ರಮಗಳಲ್ಲೂ ಮಿಂಚಿದ್ದಾರೆ. 2018ರ ಸೈಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ಒಂದು ಸ್ಟ್ರಾಂಗ್ ಕಾಫಿ ಕಿರುಚಿತ್ರದ ಅಭಿನಯಕ್ಕೆ ಉತ್ತಮ ಪ್ರಶಂಸೆ ಪಡೆದುಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories