ಪಿಯುಸಿ ಫೇಲ್, ಒಂದು ಹೊತ್ತು ಊಟಕ್ಕೂ ಪರದಾಟ; ಇಂದು ₹23 ಲಕ್ಷ ಕಾರು ತಗೊಳ್ಳುವಷ್ಟು ದುಡಿಯುತ್ತಿರುವ ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ

Published : Aug 06, 2026, 11:39 AM IST

ಜೀವನದಲ್ಲಿ ಯಶಸ್ಸು ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ಅದರ ಹಿಂದೆ ಕಷ್ಟ, ಅವಮಾನ, ಕಣ್ಣೀರು, ಹಸಿವು ಮತ್ತು ನಿರಂತರ ಹೋರಾಟ ಅಡಗಿರುತ್ತದೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ ಕುಟುಂಬದ ಬದುಕಿನ ಕಥೆ

PREV
14
ಒಂದು ಹೊತ್ತು ಊಟ

ಜೀವನದಲ್ಲಿ ಯಶಸ್ಸು ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ಅದರ ಹಿಂದೆ ಕಷ್ಟ, ಅವಮಾನ, ಕಣ್ಣೀರು, ಹಸಿವು ಮತ್ತು ನಿರಂತರ ಹೋರಾಟ ಅಡಗಿರುತ್ತದೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ ಕುಟುಂಬದ ಬದುಕಿನ ಕಥೆಯೂ ಇದಕ್ಕೆ ಅಪವಾದವಲ್ಲ. ಒಂದು ಹೊತ್ತು ಊಟಕ್ಕೂ ಪರದಾಡಿದ ಈ ಕುಟುಂಬ, ಇಂದು ₹23 ಲಕ್ಷ ಮೌಲ್ಯದ ಕಾರಿನ ಮಾಲೀಕರಾಗಿ ಯಶಸ್ಸಿನ ಹೊಸ ಅಧ್ಯಾಯ ಬರೆದಿದೆ.

ಒಂದು ಹೊತ್ತು ಊಟ ಸಿಕ್ಕರೆ, ಇನ್ನೊಂದು ಹೊತ್ತು ಹಸಿವೇ

ತಾರೇಶ್ ಅವರ ಸಹೋದರ ರಮೇಶ್ ತಮ್ಮ ಬಾಲ್ಯದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಒಂದು ಹೊತ್ತು ಊಟ ಸಿಕ್ಕಿದರೆ, ಇನ್ನೊಂದು ಹೊತ್ತಿಗೆ ಊಟ ಇರ್ತಿರಲಿಲ್ಲ. ಬೇರೆಯವರು ಊಟ ಮಾಡೋದನ್ನ ನೋಡ್ತಾ ನಿಲ್ಲಬೇಕಾಗುತ್ತಿತ್ತು. ನಾವು ಹಾಸನಕ್ಕೆ ಬಂದಾಗ ಇರೋದಕ್ಕೆ ಸರಿಯಾದ ಮನೆಯೂ ಇರಲಿಲ್ಲ. ಕೆರೆಯಿಂದ ಮಣ್ಣು ತಂದು, ಅನಿವಾರ್ಯವಾಗಿ ಗುಡಿಸಲು ಕಟ್ಟಿಕೊಂಡು ಬದುಕಿದ್ದೇವೆ. ಬಡತನದ ನಡುವೆ ಬೆಳೆದ ಈ ಕುಟುಂಬಕ್ಕೆ ಪ್ರತಿದಿನವೂ ಬದುಕೇ ದೊಡ್ಡ ಸವಾಲಾಗಿತ್ತು.

24
ಪಿಯುಸಿ ಫೇಲ್, ತಂದೆಯ ಹೊಡೆತ, ಮರೆಯಲಾಗದ ಬಾಲ್ಯ

ತಾರೇಶ್ ಬಾಶ್ (Bosch) ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಅಣ್ಣ ರಮೇಶ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಆರಂಭಿಸಿ ಇಂದು ಸ್ವಂತ ಕಂಪನಿ ಕಟ್ಟಿದ್ದಾರೆ. ಆದರೆ ಬಾಲ್ಯದಲ್ಲಿ ಎಲ್ಲವೂ ಸುಲಭವಾಗಿರಲಿಲ್ಲ. ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಅನುಭವಿಸಿದ ಅಪಮಾನ, ಶಿಸ್ತಿನ ಹೆಸರಿನಲ್ಲಿ ತಂದೆಯಿಂದ ಸಿಕ್ಕ ಹೊಡೆತಗಳು ಇಂದಿಗೂ ಅವರ ನೆನಪಿನಲ್ಲಿ ಉಳಿದಿವೆ.

ಹೋಟೆಲ್ ಕೆಲಸದಿಂದ ಯೂಟ್ಯೂಬ್ ಸ್ಟಾರ್ ತನಕ

ಸ್ವಾತಿ ಹಲವು ವರ್ಷಗಳ ಕಾಲ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡಿದ್ದರು. ಕಷ್ಟದ ದಿನಗಳನ್ನು ದಾಟಿದ ನಂತರವೇ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಷನ್ ಆರಂಭಿಸಿದರು. ಗಂಡ-ಹೆಂಡತಿ ಸೇರಿ ಮಾಡುತ್ತಿರುವ ವ್ಲಾಗ್‌ಗಳು ಮತ್ತು ಕುಟುಂಬದ ನೈಜ ಜೀವನವನ್ನು ತೋರಿಸುವ ವಿಡಿಯೋಗಳ ಮೂಲಕ ಸಾವಿರಾರು ಜನರ ಮನಗೆದ್ದಿದ್ದಾರೆ.

34
ಕುಟುಂಬದ ನಿಜವಾದ ಶಕ್ತಿ 'ಭಾರತಿಯಮ್ಮ

ಈ ಕುಟುಂಬದ ಬೆನ್ನೆಲುಬು ಭಾರತಿಯಮ್ಮ. ಬೆಳಿಗ್ಗೆ 5.30ಕ್ಕೆ ಎದ್ದು ಮನೆ ಸ್ವಚ್ಛಗೊಳಿಸುವುದರಿಂದ ಹಿಡಿದು ಮನೆಯ ಪ್ರತಿಯೊಂದು ಜವಾಬ್ದಾರಿಯನ್ನೂ ಪ್ರೀತಿಯಿಂದ ನಿರ್ವಹಿಸುವ ಅವರು, ಸೊಸೆಯನ್ನು ಸೊಸೆಯಂತೆ ಅಲ್ಲ, ಮಗಳಂತೆ ಕಾಣುತ್ತಾರೆ. ಕುಟುಂಬವನ್ನು ಒಂದಾಗಿ ಕಟ್ಟಿಹಾಕಿರುವ ದೊಡ್ಡ ಶಕ್ತಿ ಭಾರತಿಯಮ್ಮ ಎನ್ನುವುದರಲ್ಲಿ ಮನೆಯ ಎಲ್ಲ ಸದಸ್ಯರೂ ಒಪ್ಪುತ್ತಾರೆ.

₹23 ಲಕ್ಷ ಕಾರು ಖರೀದಿ, ಆದರೆ ಟ್ರೋಲ್‌ಗಳ ಕಾಟ

ಕಷ್ಟಪಟ್ಟು ಸಂಪಾದಿಸಿದ ಹಣದಿಂದ ತಾರೇಶ್-ಸ್ವಾತಿ ದಂಪತಿ ₹23 ಲಕ್ಷ ಮೌಲ್ಯದ ಹೊಸ ಕಾರು ಖರೀದಿಸಿದರು. ಆದರೆ ಅದರ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ಮತ್ತು ನೆಗೆಟಿವ್ ಕಾಮೆಂಟ್‌ಗಳು ಎದುರಾದವು. ಈ ಕಾರು ತಗೊಳ್ಳೋಕೆ ನಾವು ಎಷ್ಟು ಕಷ್ಟಪಟ್ಟಿದ್ದೀವಿ ಅನ್ನೋದು ನಮಗೆ ಮಾತ್ರ ಗೊತ್ತು. ಆದರೆ ಜನರು ಏನೇನೋ ಕಾಮೆಂಟ್ ಮಾಡ್ತಾರೆ. ಅದಕ್ಕೇ ಕೆಲವೊಮ್ಮೆ ಕಾಮೆಂಟ್ ಸೆಕ್ಷನ್ ಆಫ್ ಮಾಡಬೇಕಾಗುತ್ತೆ.

44
ಸಾವಿನ ದವಡೆಯಿಂದ ಪಾರಾದ ಅನುಭವ

ಜೀವನದಲ್ಲಿ ಮತ್ತೊಂದು ದೊಡ್ಡ ಆಘಾತವನ್ನೂ ಈ ಕುಟುಂಬ ಎದುರಿಸಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಡೆದ ಭೀಕರ ಅಪಘಾತವನ್ನು ನೆನೆದು ರಮೇಶ್ ಭಾವುಕರಾಗಿದ್ದಾರೆ. ಅಂದು ನಡೆದ ಘಟನೆ ನೆನೆದರೆ ಇಂದಿಗೂ ಮೈ ನಡುಗುತ್ತೆ. ಯಾವುದೋ ಪುಣ್ಯದ ಫಲಕ್ಕೆ ನಾವು ಬದುಕಿದ್ದೀವಿ. ನನ್ನ ಹೆಂಡತಿಯ ಸ್ಥಿತಿ ನೋಡಿದಾಗ ತುಂಬಾ ನೋವಾಗುತ್ತೆ.

ಕಷ್ಟವೇ ಜೀವನದ ದೊಡ್ಡ ಗುರು

ಒಂದು ಕಾಲದಲ್ಲಿ ಕೆಲಸ ಕೇಳಿದರೂ ಯಾರೂ ಕೊಡದ ಪರಿಸ್ಥಿತಿ. ಹಸಿವು, ಬಡತನ, ಅವಮಾನ ಎಲ್ಲವನ್ನೂ ಮೀರಿ ಇಂದು ನೆಮ್ಮದಿಯ ಜೀವನ ನಡೆಸುತ್ತಿರುವ ಈ ಕುಟುಂಬದ ಯಶೋಗಾಥೆ ಅನೇಕರಿಗೆ ಪ್ರೇರಣೆಯಾಗಿದೆ. ಇದು ಇತ್ತೀಚೆಗೆ 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ತಾರೇಶ್-ಸ್ವಾತಿ ಕುಟುಂಬ ತಮ್ಮ ಬದುಕಿನ ನೋವು, ಹೋರಾಟ ಮತ್ತು ಯಶಸ್ಸಿನ ಕಥೆಯನ್ನು ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories