ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!

Published : Dec 09, 2025, 05:21 PM IST

ಕನ್ನಡ ಸೀರಿಯಲ್‌ಗಳಲ್ಲಿ ಜ್ಯೋತಿಷಿಗಳನ್ನು ವಂಚಕರಂತೆ ಚಿತ್ರಿಸಲಾಗುತ್ತಿದೆ. ಕರ್ಣ ಸೀರಿಯಲ್‌ನಲ್ಲಿ, ವಿಲನ್ ರಮೇಶ್ ಜ್ಯೋತಿಷಿಗೆ ಲಂಚ ನೀಡಿ, ಕರ್ಣ ಮತ್ತು ನಿತ್ಯಾಳ ಮದುವೆಯನ್ನು ಬಲವಂತವಾಗಿ ಮಾಡಲು ಸುಳ್ಳು ಶಾಸ್ತ್ರ ಹೇಳಿಸುತ್ತಾನೆ. ಈ ಕುರಿತು ವೀಕ್ಷಕರು ಭಾರಿ ಅಸಮಾಧಾನ ಹೊರಹಾಕಿದ್ದಾರೆ. 

PREV
18
ವಂಚಕರಾಗಿ ಜ್ಯೋತಿಷಿಗಳು!

ಸಾಮಾನ್ಯವಾಗಿ ನಿಜ ಜೀವನದಲ್ಲಿಯೂ ಶುಭ ಕಾರ್ಯಗಳನ್ನು ಮಾಡುವಾಗ ಜ್ಯೋತಿಷಿಗಳ ಮೊರೆ ಹೋಗುವುದು ಸಾಮಾನ್ಯ. ಅದರಲ್ಲಿಯೂ ಮದುವೆಯಂಥ ಕಾರ್ಯಗಳಲ್ಲಿ ತಿಥಿ, ಗಳಿಗೆ ಎಲ್ಲವನ್ನೂ ನೋಡಿ ಮದುವೆ ಮುಹೂರ್ತ ಫಿಕ್ಸ್​ ಮಾಡುವುದೂ ಇವರೇ. ಆದರೆ ಇದೀಗ ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಜ್ಯೋತಿಷಿಗಳನ್ನು ಮಹಾ ವಂಚಕರಂತೆ ತೋರಿಸಲಾಗುತ್ತಿದೆ!

28
ಕರ್ಣದಲ್ಲೂ ಇದೇ ಸ್ಟೋರಿ

ಇದೀಗ ಕರ್ಣ ಸೀರಿಯಲ್​ (Karna Serial)ನಲ್ಲಿಯೂ ಇದೇ ಸ್ಟೋರಿ. ಇದಾಗಲೇ ಬಹುತೇಕ ಸೀರಿಯಲ್​ಗಳಲ್ಲಿ ವಿಲನ್​ಗಳು ಜ್ಯೋತಿಷಿಗಳಿಗೆ ಲಂಚ ನೀಡಿ ನಾಯಕ-ನಾಯಕಿಯನ್ನು ಬೇರೆ ಬೇರೆ ಮಾಡುವುದು ನಡೆದೇ ಇದೆ. ಅದರಲ್ಲಿಯೂ ಹೆಚ್ಚಾಗಿ ಅವರಿಬ್ಬರೂ ದೈಹಿಕ ಸಂಬಂಧ ಮಾಡಬಾರದು ಎಂದು ಸುಳ್ಳು ಜ್ಯೋತಿಷ ಹೇಳಿಸುವುದು ಸೀರಿಯಲ್​ಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.

38
ಕರ್ಣ- ನಿತ್ಯಾ ಮದುವೆ!

ಇದಕ್ಕಿಂತ ತುಸು ಭಿನ್ನ ಎನ್ನುವಂತೆ ಕರ್ಣ ಸೀರಿಯಲ್​ನಲ್ಲಿ ಕರ್ಣ ಮತ್ತು ನಿತ್ಯಾಳ ಮದುವೆ ಮಾಡಿಸಲು ವಿಲನ್​ ಮುಂದಾಗಿದ್ದಾನೆ. ಕರ್ಣನ ತಂದೆ ರಮೇಶ್ ಮಾಡಿರುವ ಕುತಂತ್ರದಿಂದ ಇದೀಗ ಕರ್ಣ ಮತ್ತು ನಿತ್ಯಾ ನಿಜವಾಗಿಯೂ ಮದುವೆಯಾಗಬೇಕಾಗಿದೆ.

48
ನಿತ್ಯಾ ಒಡಲ ಗುಟ್ಟು

ಇದಾಗಲೇ ಇವರಿಬ್ಬರ ಮದುವೆಯಾಗಿರುವುದಾಗಿ ಎಲ್ಲರೂ ನಂಬಿದ್ದಾರೆ. ಆದರೆ ಅಸಲಿಗೆ ನಿಧಿ ಗರ್ಭಿಣಿಯಾಗಿರುವುದರಿಂದ ಆಕೆಯನ್ನು ರಕ್ಷಿಸಲು ಕರ್ಣ ಮದುವೆಯಾದಂತೆ ನಾಟಕ ಮಾಡಿದ್ದಾನೆ. ಇದರಲ್ಲಿ ನಿಧಿನೇ ತನ್ನ ಕೊರಳಿಗೆ ತಾಳಿ ಕಟ್ಟಿಕೊಂಡಿದ್ದಾಳೆ.

58
ರಮೇಶನ ಪ್ಲ್ಯಾನ್​

ಈ ಸತ್ಯ ರಮೇಶ್​ಗೆ ಗೊತ್ತಿದೆ. ನಿಧಿ ಮತ್ತು ಕರ್ಣ ಲವ್​ ಮಾಡ್ತಿರೋದೂ ಗೊತ್ತಿದೆ. ಆದ್ದರಿಂದ ಅವರಿಗೆ ಹಿಂಸೆ ಕೊಡುವುದಕ್ಕಾಗಿಯೇ ಈ ಪ್ಲ್ಯಾನ್​ ಮಾಡಿದ್ದಾನೆ.

68
ಅಶುಭ ಎಂದ ಜ್ಯೋತಿಷಿ

ನಿತ್ಯಾಳ ಕುತ್ತಿಗೆಯಲ್ಲಿ ಇದ್ದ ತಾಳಿಯನ್ನು ಆಕೆ ಮಲಗಿದಾಗ ಗಾಯಬ್​ ಮಾಡಿ, ಅದು ಬಿದ್ದುಹೋಗಿರುವುದಾಗಿ ನಟಿಸಲಾಗಿದೆ. ಈ ಸಂದರ್ಭದಲ್ಲಿ ಜ್ಯೋತಿಷಿಗೆ ದುಡ್ಡು ಕೊಟ್ಟು ಕರೆಸಿದ್ದಾನೆ ರಮೇಶ. ಅವನು ತನಗೆ ಎಲ್ಲವೂ ಗೊತ್ತಿರುವ ಹಾಗೆ ನಾಟಕ ಮಾಡಿ, ಮಂಗಳಸೂತ್ರ ಕಿತ್ತು ಹೋಗಿರುವುದು ಅಶುಭ ಎಂದಿದ್ದಾನೆ.

78
ಎರಡೇ ದಿನಗಳಲ್ಲಿ ಮದುವೆ

ಎರಡು ದಿನಗಳಲ್ಲಿ ಶುಭ ಮುಹೂರ್ತ ಇದ್ದು, ಮತ್ತೊಮ್ಮೆ ಕರ್ಣ ನಿತ್ಯಾಳಿಗೆ ತಾಳಿ ಕಟ್ಟಿದರೆ ಎಲ್ಲವೂ ಸರಿಯಾಗುತ್ತೆ ಎಂದಿದ್ದಾನೆ. ಅಲ್ಲಿಗೆ ಕರ್ಣ ಅಜ್ಜಿಗೆ ಖುಷಿಯಾಗಿದೆ. ಇದೇ ವೇಳೆ ರಮೇಶ್​ ಈ ಜ್ಯೋತಿಷಿಯತ್ತ ಓರೆನೋಟ ಬೀರಿ, ಧನ್ಯವಾದ ಸಲ್ಲಿಸಿದ್ದಾನೆ.

88
ವಿಲನ್ ಯಾಕೆ?

ಅಲ್ಲಿಗೆ ರಮೇಶನೇ ದುಡ್ಡು ಕೊಟ್ಟು ಜ್ಯೋತಿಷಿ ಬಳಿ ಸುಳ್ಳು ಹೇಳಿಸಿರುವುದು ತಿಳಿಯುತ್ತದೆ. ಪದೇ ಪದೇ ಜ್ಯೋತಿಷಿಗಳನ್ನು ಈ ರೀತಿಯಾಗಿ ಸೀರಿಯಲ್​ಗಳಲ್ಲಿ ತೋರಿಸುವುದಕ್ಕೆ ಭಾರಿ ಆಕ್ರೋಶ, ಅಸಮಾಧಾನ ಹೊರ ಹಾಕಲಾಗುತ್ತಿದೆ. ಇದೇ ಮಾರ್ಗ ಬೇಕಾ? ಬೇರೆಯ ರೀತಿಯಲ್ಲಿ ಇದೇ ದೃಶ್ಯಗಳನ್ನು ತೋರಿಸಬಹುದಲ್ವಾ, ಎಲ್ಲಾ ಸೀರಿಯಲ್​ಗಳಲ್ಲಿಯೂ ಜ್ಯೋತಿಷಿಗಳನ್ನು ವಿಲನ್​ಗಳಂತೆ ಬಿಂಬಿಸುವುದು ಏಕೆ ಎನ್ನುವ ಪ್ರಶ್ನೆ ಮೂಡಿಬರುತ್ತಿದೆ.

Read more Photos on
click me!

Recommended Stories