ಬ್ರಹ್ಮಗಂಟು (Brahmagantu Serial)ನಲ್ಲಿ ಸದ್ಯ ದೀಪಾನೇ ದಿಶಾ ಎನ್ನುವ ಡೌಟ್ ರೂಪಾಗೆ ಬಂದಿದೆ. ಆದರೆ ಅದರ ಅರಿವು ದೀಪಾಗೆ ಇಲ್ಲ. ಇದೀಗ ಚಿರು ಕೈಗೆ ಬ್ಯಾಂಡೇಜ್ ಹಾಕಿರುವ ಕಾರಣದಿಂದ ದಿಶಾ ಚಿರುನ ಆಫೀಸ್ ಕೆಲಸವನ್ನೂ ನೋಡಿಕೊಳ್ಳಬೇಕಿದೆ.
26
ಸೊಸೆಯಂದಿರ ಪರೀಕ್ಷೆ
ಇದರ ಜೊತೆಗೆ, ಸೊಸೆಯಂದಿರಿಗೆ ಟಾಸ್ಕ್ ಕೊಟ್ಟಿದ್ದಾಳೆ ಅಜ್ಜಿ. ಮೂರು ಟಾಸ್ಕ್ನಲ್ಲಿ ಎರಡು ವಿನ್ ಆಗಲೇಬೇಕು. ಇಲ್ಲದಿದ್ದರೆ ದೀಪಾ ಮನೆಬಿಟ್ಟು ಹೋಗುವುದಾಗಿ ಹೇಳಿಬಿಟ್ಟಿದ್ದಾಳೆ. ಇದಾಗಲೇ ಮೊದಲ ಟಾಸ್ಕ್ನಲ್ಲಿ ಆಕೆ ವಿನ್ ಆಗಿದ್ದಾಳೆ.
36
ಡಬಲ್ ಟಾಸ್ಕ್
ಇನ್ನೂ ಎರಡು ಟಾಸ್ಕ್ ಇದೆ. ಆದರೆ ಈಗ ಆಗಿರೋದೇ ಬೇರೆ. ದೀಪಾ, ದಿಶಾ ಆಗಿ ಚಿರು ಆಫೀಸ್ ನೋಡಿಕೊಂಡು ಮನೆಯಲ್ಲಿ ಟಾಸ್ಕ್ ಕೂಡ ಗೆಲ್ಲಬೇಕಿದೆ. ಆದರೆ ಇದರ ನಡುವೆಯೇ ದೀಪಾ ಅರೆಸ್ಟ್ ಆಗಿಬಿಟ್ಟಿದ್ದಾಳೆ.
ಈ ಅರೆಸ್ಟ್ ಮಾಡಿಸಿದ್ದು ರೂಪಾನೇ. ಕಚೇರಿಯಲ್ಲಿ ಇಟ್ಟಿದ್ದ ಹಣವೆಲ್ಲಾ ಮಾಯವಾಗಿದೆ. ಅದು ದಿಶಾ ತಲೆಮೇಲೆ ಬರುವ ಹಾಗೆಮಾಡಿದ್ದಾಳೆ ರೂಪಾ. ಅವಳಿಗೆ ರೂಪಾ ಮತ್ತು ದಿಶಾ ಒಬ್ಬರೇ ಎಂದು ಸಾಬೀತು ಮಾಡಬೇಕಿದೆ. ಅದಕ್ಕಾಗಿಯೇ ಈ ಆಟ.
56
ಶ್ರಾವಣಿ ಎಂಟ್ರಿ
ದೀಪಾಳನ್ನು ಜೈಲಿಗೆ ಹಾಕಲಾಗಿದೆ. ಆಕೆಯನ್ನು ಬಿಡಿಸಲು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಶ್ರಾವಣಿ ಎಂಟ್ರಿ ಕೊಟ್ಟಿದ್ದಾಳೆ. ನನ್ನ ಸ್ನೇಹಿತೆಯನ್ನು ಯಾರು ಜೈಲಿಗೆ ಹಾಕಿದ್ದು, ಏನು ಸಾಕ್ಷಿ ಇದೆ ಎಂದು ಪ್ರಶ್ನಿಸಿದ್ದಾಳೆ.
66
ಕಂಪ್ಲೇಂಟ್ ಕೊಟ್ಟಿದ್ದು ಯಾರು
ಈಕೆಯ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದು ಯಾರು ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾಳೆ. ಆದರೆ ಪೊಲೀಸರು ಸದ್ಯ ಏನೂ ಹೇಳಲಿಲ್ಲ. ಇದೀಗ ರೂಪಾ ಕಿತಾಪತಿ ಬಯಲಾಗಲಿದೆ. ರೂಪಾ ಸತ್ಯದ ಬಾಯಿ ಬಿಟ್ಟರೆ ಅಲ್ಲಿಗೆ ದೀಪಾ ಖೇಲ್ ಕಥಮ್. ಮುಂದೇನು?