Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಕಾಮಿಡಿ ಮಾಡೋದು ಒಳಗಡೆ ಇದ್ದವರಿಗೆ ಬೇಸರ ತಂದರೆ, ಹೊರಗಡೆ ವೀಕ್ಷಕರಿಗೆ ಭರ್ಜರಿ ಖುಷಿ ಕೊಟ್ಟಿದೆ. ಈ ಕಾರಣಕ್ಕೆ ಇರಬಹುದು, ಈ ಬಾರಿ TRP ಹೆಚ್ಚಾಗಿ, ಚಾನೆಲ್ ಕೂಡ ನಂ 1 ಆಗಿದೆ.
ಗಿಲ್ಲಿ ನಟ ಅವರು ಮನೆ ಕೆಲಸ ಮಾಡೋದಿಲ್ಲ, ಟಾಸ್ಕ್ ಕೂಡ ಅಷ್ಟು ಚೆನ್ನಾಗಿ ಆಡೋದಿಲ್ಲ, ಅವರ ಕೆಲಸಗಳನ್ನು ಕೂಡ ಮಾಡಿಕೊಳ್ಳೋದಿಲ್ಲ. ಇದೇ ಕಾರಣ ನೀಡಿ ಅವರನ್ನು ಸಾಕಷ್ಟು ಬಾರಿ ನಾಮಿನೇಶನ್ ಮಾಡಿದ್ದರು ಹಾಗೂ ಕಳಪೆ ಎಂದು ಹೇಳಿದ್ದರು.
25
ಮನೆ ಕೆಲಸ ಮಾಡಿಸೋದು ಟಾಸ್ಕ್
ಗಿಲ್ಲಿ ನಟ ಬಳಿ ಮನೆ ಕೆಲಸ ಮಾಡಿಸಿಕೊಳ್ಳೋದು ಕ್ಯಾಪ್ಟನ್ ಟಾಸ್ಕ್. ಇವರ ಬಳಿ ಕೆಲಸ ಮಾಡಿಸಿಕೊಳ್ಳೋದರ ಬದಲು ನಾವೇ ಕೆಲಸ ಮಾಡಬಹುದು ಎಂದು ಪ್ರತಿ ಬಾರಿ ಕ್ಯಾಪ್ಟನ್ ಆದ ಸ್ಪರ್ಧಿಗಳಿಗೆ ಅನಿಸುತ್ತಿರುತ್ತದೆ. ಆದರೆ ಏನು ಮಾಡೋಣ? ನಾವು ಮನೆ ಕೆಲಸ ಮಾಡಲು ಇಲ್ಲಿಗೆ ಬಂದಿಲ್ಲ ಎಂದು ಗಿಲ್ಲಿ ನಟ ಹೇಳುತ್ತಾರೆ.
35
ಎಂಟರ್‌ಟೇನ್‌ಮೆಂಟ್‌ನಲ್ಲಿ ನಂ 1
ಎಂಟರ್‌ಟೇನ್‌ಮೆಂಟ್ ವಿಚಾರಕ್ಕೆ ಬಂದರೆ ಗಿಲ್ಲಿ ನಟ ಅವರು ನಂ 1. ಗಿಲ್ಲಿ ಕಾಮಿಡಿಗೆ ವೀಕೆಂಡ್ ಎಪಿಸೋಡ್‌ಗಳಲ್ಲಿ ಕಿಚ್ಚ ಸುದೀಪ್ ನಕ್ಕು ನಕ್ಕು ಸುಸ್ತಾಗ್ತಾರೆ. ಟೈಮ್‌ಗೆ ತಕ್ಕಂತೆ ಗಿಲ್ಲಿ ಕಾಮಿಡಿ ಮಾಡುತ್ತಾರೆ. ಯಾವುದೇ ಸಂದರ್ಭ ಕೊಟ್ಟರೂ ಕೂಡ ಸ್ಕ್ರಿಪ್ಟ್ ಇಲ್ಲದೆ, ತಕ್ಷಣ ಉತ್ತರ ಕೊಡುವ ಶಕ್ತಿ ಗಿಲ್ಲಿಗೆ ಇದೆ. ಸಾಕಷ್ಟು ಜನರು ಗಿಲ್ಲಿ ನಟನ ಅಭಿಮಾನಿಗಳಾಗಿದ್ದಾರೆ.
ಗಿಲ್ಲಿ ನಟನ ಕಾಮಿಡಿ ಬೇರೆಯವರ ಮನಸ್ಸಿಗೆ ನೋವಾಗಬಾರದು, ಬೇರೆಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯಬಾರದು, ಬೇರೆಯವರ ವ್ಯಕ್ತಿತ್ವವನ್ನು ಕೆಳಗಡೆ ಹಾಕಿ ಕಾಮಿಡಿ ಮಾಡಬಾರದು, ತೇಜೋವಧೆ ಮಾಡಬಾರದು ಎಂದು ಸ್ಪರ್ಧಿಗಳು ಹೇಳಿದ್ದುಂಟು. ಕಿಚ್ಚ ಸುದೀಪ್ ಕೂಡ ಈ ವಿಚಾರದಲ್ಲಿ ಒಮ್ಮೆ ಕಿವಿ ಹಿಂಡಿದ್ದರು.
55
ಬಿಗ್ ಬಾಸ್ ಮನೆಯಲ್ಲಿ ಇಲ್ಲ ಅಂದ್ರೆ?
ಈಗ ಗಿಲ್ಲಿ ನಟ ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಇಲ್ಲ ಅಂದರೆ ಏನು ಕಂಟೆಂಟ್ ಕೊಡ್ತೀರಿ? ಒಂದು ವಾರ ಅವರನ್ನು ಸೀಕ್ರೇಟ್ ರೂಮ್‌ಗೆ ಹಾಕಿ ನೋಡಿ. ಆ ಮನೆಯ ಸ್ಪರ್ಧಿಗಳು ಏನು ಮಾಡ್ತಾರೆ ಎಂದು ಕಾದು ನೋಡೋಣ ಎಂದು ಕೆಲ ವೀಕ್ಷಕರು ಬಿಗ್ ಬಾಸ್ ಟೀಂಗೆ ಸಲಹೆ ನೀಡಿದ್ದಾರೆ. ಇದನ್ನು ಬಿಗ್ ಬಾಸ್ ಪರಿಗಣಿಸುತ್ತಾರಾ?