50 ವರ್ಷಕ್ಕೆ ನಿವೃತ್ತಿ ತಗೋತೇನಪ್ಪಾ ಎಂದಿದ್ದ Dileep Raj 47ಕ್ಕೇ ಮುಗಿಸಿದ್ರು ಪಯಣ, ಮುಂದಿನ ಪ್ಲ್ಯಾನ್​ ಏನಿತ್ತು

Published : May 13, 2026, 05:59 PM IST

ನಟ ದಿಲೀಪ್ ರಾಜ್ ಅವರ ಹಳೆಯ ಸಂದರ್ಶನವೊಂದು ಅವರ ಸಾವಿನ ನಂತರ ವೈರಲ್ ಆಗಿದೆ. ಅದರಲ್ಲಿ, ತಮ್ಮ 50ನೇ ವಯಸ್ಸಿಗೆ ನಿರ್ಮಾಣದಿಂದ ನಿವೃತ್ತಿ ಹೊಂದಿ, ಜೀವನಪೂರ್ತಿ ನಟನಾಗಿ ಉಳಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ, 47ನೇ ವಯಸ್ಸಿನಲ್ಲಿಯೇ ಅವರು ನಿಧನರಾಗಿದ್ದಾರೆ.

PREV
16
ತಾನೊಂದು ಬಗೆದರೆ ದೈವವೊಂದು...

'ತಾನೊಂದು ಬಗೆದರೆ ದೈವವೊಂದು ಬಗೆಯಿತು' ಎನ್ನುವ ಮಾತು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ನಮ್ಮ ಪ್ಲ್ಯಾನೇ ಬೇರೆ ಇರುತ್ತದೆ. ಆದರೆ ವಿಧಿ ಮೊದಲೇ ಎಲ್ಲವನ್ನೂ ನಿಗದಿ ಮಾಡಿಬಿಟ್ಟಿರುತ್ತದೆ. ಭವಿಷ್ಯದ ಬಗ್ಗೆ, ಮುಂದಿನ ಹತ್ತಾರು ವರ್ಷಗಳ ಬಗ್ಗೆ ಕನಸುಗಳು ನಮ್ಮ ಕಣ್ಣುಮುಂದೆ ಇದ್ದು ಅದರ ಬಗ್ಗೆ ಮಾತನಾಡುತ್ತಿದ್ದರೆ ಸಾವು ನಗುತ್ತಿರುತ್ತದೆಯಂತೆ, ಇವರೆಂಥ ಹುಚ್ಚರಪ್ಪಾ ಎಂದು.

26
ದಿಲೀಪ್​ ರಾಜ್ ಸಂದರ್ಶನ

ಇದೀಗ ಕಿರುತೆರೆ, ಹಿರಿತೆರೆಯ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್​ ರಾಜ್​ ಅವರ ಸಾವಿನ ಬಳಿಕ ಅವರ ಸಂದರ್ಶನಗಳು ಒಂದೊಂದಾಗಿ ವೈರಲ್​ ಆಗುತ್ತಿವೆ. ತಮ್ಮ ಜೀವನದ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು. ಏಳು ಬೀಳುಗಳ ಬಗ್ಗೆ ಸಂದರ್ಶನಗಳಲ್ಲಿ ರಿವೀಲ್​ ಮಾಡಿದ್ದರು. ಆದರೆ 50ನೇ ವರ್ಷಕ್ಕೆ ನಿವೃತ್ತರಾಗುವ ಬಗ್ಗೆ rapidrashmi ಚಾನೆಲ್​ಗೆ ಕಳೆದ ವರ್ಷ ಅವರು ನೀಡಿದ್ದ ಸಂದರ್ಶನವನ್ನು ರಶ್ಮಿ ಅವರು ಪುನಃ ಶೇರ್​ ಮಾಡಿಕೊಂಡಿದ್ದಾರೆ.

36
ಡಿಸೈನ್​ ಮಾಡಬಾರದು

ಈ ಸಂದರ್ಶನದಲ್ಲಿ ದಿಲೀಪ್​ ರಾಜ್​ ಅವರು, ಲೈಫ್​ ಹೀಗೆಯೇ ಇರಬೇಕು ಎಂದು ಡಿಸೈನ್ ಮಾಡುವುದು ಕಷ್ಟ, ನಮ್ಮ ಲೈಫ್​ ಅನ್ನು ನಾವೇ ಡಿಸೈನ್​ ಮಾಡಲು ಆಗುವುದಿಲ್ಲ. ಲೈಫ್​ ಕಾಲಕ್ಕೆ ತಕ್ಕಂತೆ ಚೇಂಜ್​ ಆಗುತ್ತಿರುತ್ತದೆ. ಆ ಚೇಂಜ್​ಗೆ ತಕ್ಕಂತೆ ನಾವು ಚೇಂಜ್​ ಆಗಬೇಕು ಎಂದಿದ್ದರು.

46
ಸಾವಿರ ರೂಪಾಯಿಗೂ ಕಷ್ಟಪಡ್ತಿರೋದು ಇದೆ

ನನ್ನ ಬಳಿ ದುಡ್ಡು ಇಲ್ಲ ಅಂತೇನಿಲ್ಲ. ದುಡ್ಡು ಇದೆ. ಆದರೆ ಕೆಲವೊಮ್ಮೆ ಸಾವಿರ ರೂಪಾಯಿ ಬೇಕು ಎಂದ್ರೂ ಸಿಗದದ್ದು ಕೂಡ ಇದೆ. ಏಕೆಂದ್ರೆ ಟೈಮ್​ ಹಾಗೆ ಇರುತ್ತದೆ. ಅದಕ್ಕೆ ನಾವು ಹೊಂದಿಕೊಳ್ಳಬೇಕು ಅಷ್ಟೇ ಎಂದಿದ್ದರು ದಿಲೀಪ್​ ರಾಜ್.

56
50ಕ್ಕೆ ರಿಟೈರ್​ ಆಗ್ತೀನಿ

ನನ್ನ ಜರ್ನಿಯಲ್ಲಿ ಹಣಕ್ಕಿಂತ ಹೆಚ್ಚಾಗಿ ವ್ಯಕ್ತಿಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದೇನೆ. ನನ್ನ ಹೆಂಡ್ತಿ ಹತ್ರ ಯಾವಾಗಲೂ ಹೇಳ್ತಾ ಇರ್ತೀನಿ. ನೋಡಮ್ಮಾ ನಾವೀಗ ಹತ್ತಿರ ಬರುತ್ತಿದ್ದೇವೆ. ಆದ್ದರಿಂದ 50 ವರ್ಷಕ್ಕೆ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿದ್ದರು.

66
ಲೈಫ್​ಲಾಂಗ್​ ನಟನಾಗಿರ್ತೀನಿ

ಆದರೆ ಅದು ನಟನೆಯಿಂದ ಅಲ್ಲ, ಬದಲಿಗೆ ಪ್ರೊಡಕ್ಷನ್​ಗಳಿಂದ ನಿವೃತ್ತನಾಗ್ತೇನೆ. ಆದರೆ ಲೈಫ್​ ಲಾಂಗ್​ ನಟನಾಗಿಯೇ ಉಳಿಯುತ್ತೇನೆ ಎಂದಿದ್ದರು. ಕೊನೆಯವರೆಗೂ ನಟನಾಗಿಯೇ ಉಳಿದರು ನಿಜ. ಆದರೆ 47ನೇ ವಯಸ್ಸಿನಲ್ಲಿಯೇ ವಿಧಿಯಾಟವೇ ಬೇರೆ ಆಗೋಯ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories