ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು

Published : May 13, 2026, 04:28 PM IST

ಕಿರುತೆರೆ ಹಾಗೂ ಬೆಳ್ಳಿತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವು ಕಾಣಿಸಿಕೊಂಡಾಗ ಸ್ಮಾರ್ಟ್‌ವಾಚ್‌ನಲ್ಲಿ ಪರೀಕ್ಷಿಸಿ ನಿರ್ಲಕ್ಷಿಸಿದ್ದರು ಎನ್ನಲಾಗಿದ್ದು, ಇದು ತಂತ್ರಜ್ಞಾನದ ಮೇಲಿನ ಅವಲಂಬನೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

PREV
16
ನಟ ದಿಲೀಪ್ ರಾಜ್​ ಇನ್ನು ನೆನಪು ಮಾತ್ರ

ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಿದ್ದ, ಯು ಟರ್ನ್, ಅಂಬಿ ನಿಂಗೆ ವಯಸ್ಸಾಯ್ತೊ, ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡು ಕೊನೆಗೆ ಹಿಟ್ಲರ್‌ ಕಲ್ಯಾಣ ಸೀರಿಯಲ್​ನಲ್ಲಿ ನಾಯಕನಾಗಿ ಕಾಣಿಸಿಕೊಂಡು ಎಲ್ಲರ ಮನಸ್ಸನ್ನು ಗೆದ್ದಿದ್ದ, ನಿರ್ದೇಶಕ, ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದ ನಟ ದಿಲೀಪ್​ ರಾಜ್​ ಇನ್ನು ನೆನಪು ಮಾತ್ರ. 47ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಅವರು ಬಲಿಯಾಗಿದ್ದಾರೆ.

26
ಸೂಚನೆ ಕಡೆಗಣನೆ

ಹೃದಯಕ್ಕೆ ಸಂಬಂಧಿಸಿದಂತೆ ತೊಂದರೆ ಬಂದಾಗ, ಕೆಲವೊಂದು ಸೂಚನೆಯನ್ನು ದೇಹ ನೀಡುತ್ತದೆ. ಅದು ಕೊನೆಯ ಎಚ್ಚರಿಕೆಯಾಗಿರುತ್ತದೆ. ಇಂಥ ಸಂದರ್ಭದಲ್ಲಿ ಸ್ವಲ್ಪ ಎಡವಿದರೂ ಪ್ರಾಣವೇ ಹೋಗುತ್ತದೆ ಎನ್ನುತ್ತಾರೆ ವೈದ್ಯರು. ದಿಲೀಪ್​ ರಾಜ್​ (Dileep Raj) ವಿಷ್ಯದಲ್ಲಿಯೂ ಹಾಗೆಯೇ ಆಯ್ತಾ ಎನ್ನುವ ಪ್ರಶ್ನೆಯನ್ನು ಅವರ ಆಪ್ತ ವಲಯಗಳು ಕೇಳುತ್ತಿವೆ.

36
ಎದೆನೋವು- ಸ್ಮಾರ್ಟ್​ವಾಚ್​

ಅಷ್ಟಕ್ಕೂ ನಿನ್ನೆ ಅಂದರೆ ಮೇ 12ರಂದು ನಟ ದಿಲೀಪ್ ರಾಜ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತಂತೆ. ಆಗ ಅವರು ಅದನ್ನು ನಿರ್ಲಕ್ಷ್ಯ ಮಾಡಿದರು. ಅಂದರೆ, ತಮ್ಮ ಬಳಿ ಇದ್ದ ಸ್ಮಾರ್ಟ್ ವಾಚ್ ಮೂಲಕ ಹೃದಯ ಹಾರ್ಟ್​ ಬೀಟ್​ ನನ್ನು ಚೆಕ್​ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಅದರಲ್ಲಿ ಹೃದಯದ ಬಡಿತ ಎಲ್ಲಾ ಸರಿಯಾಗಿಯೇ ತೋರಿಸಿತ್ತು. ಆದ್ದರಿಂದ ನಟ, ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಲೇ ಇಲ್ಲ ಎನ್ನಲಾಗುತ್ತಿದೆ.

46
ಮಷಿನ್​ ನಂಬಿಬಿಟ್ರಾ ನಟ?

ಸ್ಮಾರ್ಟ್​ವಾಚ್​ ನಂಬಿದ್ದ ಅವರು ಎದೆ ನೋವು ಇದ್ದರೂ ಏನೂ ಆಗಿಲ್ಲ ಎಂದು ಮಲಗಿದ್ದಾರೆ. ಆದರೆ ಮಧ್ಯರಾತ್ರಿ ನೋವು ಹೆಚ್ಚಾದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಬದುಕಿ ಉಳಿಯಲೇ ಇಲ್ಲ. ಸ್ಮಾರ್ಟ್​ವಾಚ್​ನಂಥ ಮಷಿನ್​ ನಂಬಿ ತಮ್ಮ ಜೀವವನ್ನೇ ಕಳೆದುಕೊಂಡು ಬಿಟ್ರಾ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಪ್ರಶ್ನಿಸುತ್ತಿದ್ದಾರೆ.

56
ಚರ್ಚೆ ಆರಂಭ

ಮನೆಯಲ್ಲಿಯೇ ನಮ್ಮ ಆರೋಗ್ಯವನ್ನು ನೋಡಿಕೊಳ್ಳಲು ಕೆಲವೊಂದು ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಬಿಪಿ,ಶುಗರ್​, ಎದೆ ಬಡಿತ... ಹೀಗೆ ಎಲ್ಲದನ್ನೂ ನೋಡಿಕೊಳ್ಳಬಹುದು. ಆದರೆ ಅದು ಎಷ್ಟರಮಟ್ಟಿಗೆ ಕೆಲಸ ನಿರ್ವಹಿಸುತ್ತದೆ, ಪದೇ ಪದೇ ಅದನ್ನೇ ನಂಬಿ ಜನರು ಬದುಕುವುದು ಎಷ್ಟು ಅಪ್ರಸ್ತುತ ಎನ್ನುವ ಬಗ್ಗೆ ದಿಲೀಪ್​​ ರಾಜ್​ ಅವರ ಪ್ರಕರಣ ಚರ್ಚೆಯನ್ನು ಹುಟ್ಟುಹಾಕಿದೆ.

66
ಅಂತಿಮ ಯಾತ್ರೆ

ಇದರ ನಡುವೆಯೇ ದಿಲೀಪ್​ ರಾಜ್​ ಅವರ ಅಂತಿಮ ಯಾತ್ರೆಯನ್ನು ನಡೆಸಲಾಗಿದೆ. ಇದರ ವಿಡಿಯೋಗಳು ವೈರಲ್​ ಆಗುತ್ತಿವೆ. ಅವರ ಪಾರ್ಥಿವ ಶರೀರವನ್ನು ರಾಮನಗರಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿಯೇ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories