ಒಂದೇ ದಿನದ ಅಂತರದಲ್ಲಿ ‘ಹಿಟ್ಲರ್ ಕಲ್ಯಾಣ’ದ ಇಬ್ಬರು ನಟರು ಹೃದಯಾಘಾತಕ್ಕೆ ಬಲಿ!

Published : May 13, 2026, 12:21 PM IST

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಇಬ್ಬರು ನಟರು ಒಂದೇ ದಿನದ ಅಂತರದಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ವರ್ಷಗಳ ಹಿಂದೆ ರಾಕೇಶ್ ಪೂಜಾರಿ, ಇದೀಗ ದಿಲೀಪ್ ರಾಜ್ ಅಕಾಲಿಕವಾಗಿ ಮರಣವನ್ನಪ್ಪಿದ್ದಾರೆ. 

PREV
15
ದಿಲೀಪ್ ರಾಜ್ ನಿಧನ

ಕನ್ನಡ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಝೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಇವರು ನಾಯಕರಾಗಿ ನಟಿಸಿದ್ದರು. ಕಳೆದ ವರ್ಷ ಇದೇ ಸಮಯದಲ್ಲಿ ಧಾರಾವಾಹಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

25
ಹೃದಯಾಘಾತಕ್ಕೆ ಬಲಿ

ದಿಲೀಪ್ ರಾಜ್ ಮೇ 13ರಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಬಳಲಿದ್ದು, ಶೀಘ್ರವೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾದಗ ಸಾವನ್ನಪ್ಪಿದ್ದಾರೆ. ದಿಲೀಪ್ ರಾಜ್ ಅವರ ಅಕಾಲಿಕ ಮರಣ ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರಿಗೆ ಭರಸಿಡಿನಂತೆ ಎರಗಿದೆ.

35
ಹಿಟ್ಲರ್ ಕಲ್ಯಾಣದ ಇಬ್ಬರೂ ನಟರು ಒಂದೇ ದಿನದ ಅಂತರದಲ್ಲಿ ಸಾವು

ಹಿಟ್ಲರ್ ಕಲ್ಯಾಣ ಧಾರಾವಾಹಿಯ ಇಬ್ಬರು ನಟರು ಕೂಡ ಒಂದು ವರ್ಷದ ಅಂತರದಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಬಲಿಯಾಗಿರುವುದು ಕಾಕತಾಳೀಯವಾಗಿದೆ. ಕಳೆದ ವರ್ಷ ಮೇ 12ರಂದು ಹಿಟ್ಲರ್ ಕಲ್ಯಾಣದಲ್ಲಿ ವಿಶ್ವರೂಪಂ ಪಾತ್ರದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ನಿಧನರಾಗಿದ್ದರು.

45
ಗೆಳೆಯನ ಮದುವೆ ಸಂಭ್ರಮದ ನಡುವೆ ಸಾವು

ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದಿದ್ದ ನಗುಮುಖದ ಒಡೆಯ ರಾಕೇಶ್ ಪೂಜಾರಿ ಕಳೆದ ವರ್ಷ ಗೆಳೆಯನ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಡ್ಯಾನ್ಸ್ ಕೂಡ ಮಾಡಿದ್ದರು. ಆ ವೇಳೆ ಹಠಾತ್‌ ಕುಸಿದುಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳಲಾಗದೆ ಹೃದಯಾಘಾತಕ್ಕೆ ನಟ ಬಲಿಯಾಗಿದ್ದರು.

55
ಹಿಟ್ಲರ್ ಕಲ್ಯಾಣದ ಬೆಸ್ಟ್ ನಟರು ಇಬ್ಬರು

ದಿಲೀಪ್ ರಾಜ್ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕನಾಗಿ ಗಮನ ಸೆಳೆದರೆ, ರಾಕೇಶ್ ಪೂಜಾರಿ ತಮಾಷೆ ಮಾಡುತ್ತಾ, ಎಲ್ಲರನ್ನೂ ನಗಿಸುತ್ತಾ, ನಾಯಕಿಗೆ ಸದಾ ನೆರವು ನೀಡುವ ಪಾತ್ರ ಇವರದ್ದಾಗಿತ್ತು. ಇವರ ಪಾತ್ರವನ್ನು, ಕಾಮಿಡೀ ಟೈಮಿಂಗ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇದೀಗ ಇಬ್ಬರು ಒಂದು ವರ್ಷದಲ್ಲಿ ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿರುವುದು ಬೇಸರ ತಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories