ರಾಕೇಶ್‌ ಪೂಜಾರಿ ಹೋದಾಗಿಂದ ಅವನ ತಾಯಿ ನನ್ನ ಮಗ ಎಲ್ಲೋದ, ಬಾಲೆ ಬಾಲೆ ಅಂತಿದ್ದಾರೆ: ಕಾಮಿಡಿ ಕಿಲಾಡಿ ಸೂರಜ್

Published : May 16, 2025, 11:09 AM ISTUpdated : May 16, 2025, 11:13 AM IST

ರಾಕೇಶ್‌ ಪೂಜಾರಿ ಅವರು ಲೋ ಬಿಪಿ ಆಗಿ ತೀರಿಕೊಂಡಿದ್ದಾರೆ. ʼಕಾಮಿಡಿ ಕಿಲಾಡಿಗಳುʼ ಶೋ ಖ್ಯಾತಿಯ ರಾಕೇಶ್‌ ಇಂದು ಇನ್ನಿಲ್ಲ ಎನ್ನೋದನ್ನು ಅವರ ಕುಟುಂಬದವರು, ಸ್ನೇಹಿತರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. 

PREV
15
ರಾಕೇಶ್‌ ಪೂಜಾರಿ ಹೋದಾಗಿಂದ ಅವನ ತಾಯಿ ನನ್ನ ಮಗ ಎಲ್ಲೋದ, ಬಾಲೆ ಬಾಲೆ ಅಂತಿದ್ದಾರೆ: ಕಾಮಿಡಿ ಕಿಲಾಡಿ ಸೂರಜ್

ʼಕಾಂತಾರʼ ಸಿನಿಮಾದಲ್ಲಿ ರಾಕೇಶ್‌ ಪೂಜಾರಿ ನಟಿಸಿದ್ದರು. ರಾಕೇಶ್‌ ಮನೆಯಿಂದ 20km ದೂರದಲ್ಲಿ ʼಕಾಂತಾರʼ ಸಿನಿಮಾ ಶೂಟಿಂಗ್‌ ನಡೆಯುತ್ತಿತ್ತು. ಆದರೂ ರಿಷಬ್‌ ಶೆಟ್ಟಿ ಅವರು ಕೊನೆಯಬಾರಿ ರಾಕೇಶ್‌ರನ್ನು ನೋಡಲು ಬರಲಿಲ್ಲ ಎಂದು ಕೆಲವರು ಆರೋಪ ಮಾಡಿದ್ದರು. ಈ ಬಗ್ಗೆ ಮಾಧ್ಯಮವೊಂದರ ಜೊತೆ ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಸೂರಜ್‌ ಹೇಳಿದ್ದಾರೆ. 
 

25

“ತಾಯಿ, ತಂಗಿ ಸ್ಥಿತಿ ಹೇಗಿತ್ತು ಅಂದ್ರೆ ನಾವು ಯಾರು ಊಹಿಸಿಕೊಳ್ಳೋಕೆ ಆಗಲ್ಲ. ಆ ಮನೆಗೆ ಮಗನೇ ಆಧಾರ ಸ್ತಂಭ. ತಂದೆಯೂ ಇಲ್ಲ, ನಮಗೆ ಅವನ ತಾಯಿ ನೆನಪಿಸಿಕೊಂಡ್ರೆ ಎಷ್ಟು ದುಃಖ ಬರುತ್ತೆ ಅಂದ್ರೆ ಅದನ್ನ ಹೇಳಕಾಗಲ್ಲ. ಅವನಿಗೆ ತಾಯಿ ಮೇಲೆ ತುಂಬ ಪ್ರೀತಿ. ತಾಯಿಗೂ ಮಗ ಅಂದ್ರೆ ಇಷ್ಟ. ದಿನಕ್ಕೊಮ್ಮೆ ಅವನು ಮನೆಗೆ ಫೋನ್‌ ಮಾಡ್ತಾನೆ. ಈಗ ರೆಗ್ಯುಲರ್ ಆಗಿ ನಾನು ಅವನ ಮನೆಗೆ ಫೋನ್‌ ಮಾಡ್ತಿದೀನಿ. ಊಟ ಮಾಡುವ ಮುನ್ನ ಕೂಡ ಮನೆಗೆ ಫೋನ್‌ ಮಾಡಿ ಆರಾಮಾಗಿದ್ದೀರಾ, ಏನು ಅಡುಗೆ ಮಾಡಿದ್ದೀರಾ ಅಂತ ಪ್ರಶ್ನೆ ಮಾಡುತ್ತಿದ್ದನು” ಎಂದು ಸೂರಜ್‌ ಹೇಳಿದ್ದಾರೆ.
 

35

“ಕಳೆದ ಮೂರು ದಿನಗಳಿಂದ ನನ್ನ ಮಗ ಎಲ್ಲೋದ? ನನ್ನ ಮಗ ಎಲ್ಲೋದ? ನನ್ನ ಮಗ ಇಲ್ಲಿದ್ದಾನ? ಅಯ್ಯೋ ನನ್ನ ಬಾಲೆ.. ಅಯ್ಯೋ ನನ್ನ ಬಾಲೆ ಇದನ್ನೇ ಹೇಳ್ತಿದ್ದಾರೆ. ಅದು ಬಿಟ್ಟು ಬೇರೆ ಏನು ಹೇಳ್ತಿಲ್ಲ. ರಾಕೇಶ್‌ ತಾಯಿ ಮೈಂಡ್‌ ಸ್ಟ್ರಾಂಗ್‌ ಆಗಬೇಕು. ಕಾಂತಾರ ಸಿನಿಮಾದಲ್ಲಿ 90 ದಿನಗಳ ಶೂಟಿಂಗ್ ಇತ್ತು. ಇಡೀ ಸಿನಿಮಾ ಪೂರ್ತಿ ರಾಕೇಶ್‌ ಪೂಜಾರಿ ನಟಿಸಿದ್ದರು. ಅದನ್ನೆಲ್ಲ ನೆನಪಿಸಿಕೊಂಡರೆ ನಮಗೆ ಬೇಜಾರಾಗುತ್ತೆ. ರಿಷಬ್ ಶೆಟ್ಟಿ ಸರ್ ಬಗ್ಗೆ ನಮ್ಮ ಹತ್ರ ಬಂದು ಹೇಳುವನು ರಿಷಬ್ ಸರ್ ಹಿಂಗೆ ಆಕ್ಟ್ ಮಾಡ್ಬೇಕು ಅಂತ ಹೇಳ್ತಿದ್ರು ಅಂತ ಹೇಳಿದ್ದನು. ಅದನ್ನು ನಾವು ಅವನಿಂದ ಕಲಿತಿದ್ವಿ” ಎಂದು ಸೂರಜ್‌ ಹೇಳಿದ್ದಾರೆ. 
 

45

“ಕಾಂತಾರ ಸಿನಿಮಾಕ್ಕೋಸ್ಕರ ಬೇರೆ ಎಲ್ಲಾ ಸಿನಿಮಾ ಬದಿಗಿಟ್ಟು, ಅದರ ಮೇಲೆ ಗಮನಹರಿಸ್ತಿದ್. ಸಣ್ಣ ಆಗಬೇಕು ಅಂತ ಡಯಟ್ ಮಾಡಿ ತುಂಬಾ ಡೆಡಿಕೇಟೆಡ್ ಆಗಿ ವರ್ಕ್ ಮಾಡಿದ್ದಾನೆ. ಅದನ್ನು ನೆನಪಿಸಿಕೊಂಡ್ರೆ ಒಂತರ ಅಯ್ಯೋ ಅನಿಸಿಬಿಡುತ್ತೆ. ಆ ಸಿನಿಮಾ ನೋಡಬೇಕು, ನಾವೆಲ್ಲ ಸೆಲೆಬ್ರೇಟ್ ಮಾಡಬೇಕು, ಮಂಗಳೂರಲ್ಲಿ ಅವಂದು ಕಟೌಟ್ ಆಗಬೇಕು‌, ಅವನ ಒಂದು ಫ್ಲೆಕ್ಸ್‌ಗಳು ಆಗಬೇಕು, ಈ ಥರ ತುಂಬಾ ಪ್ಲಾನ್ ಮಾಡಿದ್ವಿ. ಈಗ ಅವನೇ ಇಲ್ಲ” ಎಂದು ಸೂರಜ್‌ ಹೇಳಿದ್ದಾರೆ. 

55

“ನಾವು ಅವನ ಜೊತೆ ಇದ್ದವರು. ತುಂಬಾ ಬೇಜಾರಿದೆ. ಅದರಿಂದ ಹೊರಗಡೆ ಬರೋಕೆ ಆಗ್ತಿಲ್ಲ. ಕಾಂತಾರ ಸಿನಿಮಾದಲ್ಲಿ ಬಹುತೇಕ ಅವನ ಶೂಟಿಂಗ್‌ ಮುಗಿದಿತ್ತು, ಇನ್ನು ಸ್ವಲ್ಪ ದಿನ ಇದೆ ಅಂತ ಅವನು ಹೇಳಿದ್ದನು. ನಿಜಕ್ಕೂ ಅವನ ಭಾಗ ಎಷ್ಟಿದೆ ಅಂತ ಗೊತ್ತಿಲ್ಲ” ಎಂದು ಸೂರಜ್‌ ಅವರು ಹೇಳಿದ್ದಾರೆ. 
 

Read more Photos on
click me!

Recommended Stories