ಮೂರನೇ ಕಣ್ಣು ತೆರೆದ ಶಿವಣ್ಣನ ರುದ್ರತಾಂಡವ ನೋಡಲು ಕಾಯ್ತಿದ್ದ ವೀಕಕ್ಷರಿಗೆ ನಿರಾಸೆ

Published : May 15, 2025, 08:05 PM IST

Annayya Serial: ವೀರಭದ್ರನು ಪಾರ್ವತಿಯ ಆಸ್ಪತ್ರೆ ಪರವಾನಗಿಯನ್ನು ಹರಿದು ಹಾಕಿದ್ದಾನೆ. ಇದನ್ನು ತಿಳಿದ ಶಿವು ಕೋಪಗೊಂಡು ವೀರಭದ್ರನಿಗೆ ಎಚ್ಚರಿಕೆ ನೀಡುತ್ತಾನೆ. ಆದರೆ, ಇದೆಲ್ಲವೂ ವೀರಭದ್ರನ ಕನಸಾಗಿತ್ತು.

PREV
15
ಮೂರನೇ ಕಣ್ಣು ತೆರೆದ ಶಿವಣ್ಣನ ರುದ್ರತಾಂಡವ ನೋಡಲು ಕಾಯ್ತಿದ್ದ ವೀಕಕ್ಷರಿಗೆ ನಿರಾಸೆ

ಅಣ್ಣಯ್ಯ ಸೀರಿಯಲ್‌ ವಿಶೇಷತೆ ಅಂದ್ರೆ ಇಲ್ಲಿ ವಿಲನ್ ಮಹಿಳೆ ಅಲ್ಲ. ಹಾಗಾಗಿ ಎಲ್ಲಾ ಧಾರಾವಾಹಿಗಿಂತ ಅಣ್ಣಯ್ಯ ವಿಶೇಷವಾಗುತ್ತದೆ. ಧಾರಾವಾಹಿ ಕಥನಾಯಕನ ಮಾವ, ನಾಯಕಿಯ ತಂದೆ ವೀರಭದ್ರನೇ ಇಲ್ಲಿನ ವಿಲನ್. ವೀರಭದ್ರನಿಗೆ ಮಗ ಪರಶು ಸಾಥ್ ನೀಡುತ್ತಿರುತ್ತಾನೆ. ಮಾವನನ್ನು ದೇವರು ಎಂದು ನಂಬಿರುವ ಶಿವುಗೆ ಮೊದಲ ಬಾರಿ ವೀರಭದ್ರನ ಅಸಲಿ ಮುಖ ಗೊತ್ತಾಗಿದೆ. 

25

ವೈದ್ಯಕೀಯ ಪದವಿ ಪಡೆದು ಊರಿಗೆ ಬಂದಿದ್ದ ಪಾರು ಮದುವೆ ಶಿವು ಜೊತೆ ಆಗುತ್ತದೆ. ಇದೀಗ ಪಾರ್ವತಿಗೆ ಆಸ್ಪತ್ರೆಗೆ ತೆರೆದುಕೊಂಡು ಶಿವು ಯೋಚಿಸುತ್ತಿದ್ದಾನೆ. ಆದ್ರೆ ಯುನಿವರ್ಸಿಟಿ ಮತ್ತು ಮೆಡಿಕಲ್ ಬೋರ್ಡ್‌ನಿಂದ ಅನುಮತಿ ಸಿಕ್ಕಿಲ್ಲ ಎಂದು ಪಾರು ಹೇಳಿದ್ದಾನೆ. ಇತ್ತ ಪಾರುಗೆ ಆಸ್ಪತ್ರೆ ಆರಂಭಿಸುವ ಲೆಸೆನ್ಸ್ ದಾಖಲೆ ವೀರಭದ್ರನ ಮನೆಯನ್ನು ತಲುಪಿದೆ.

35

ಪಾರ್ವತಿಯ ಲೈಸೆನ್ಸ್ ನೋಡುತ್ತಿದ್ದಂತೆ ಕೋಪಗೊಂಡ ವೀರಭದ್ರ ಅದನ್ನು ಹರಿದು ಹಾಕಿದ್ದಾನೆ. ಹರಿದು ಹಾಕಿರುವ ದಾಖಲೆಯನ್ನು ಎತ್ತಿಟ್ಟುಕೊಂಡಿರುವ ಪಾರ್ವತಿ ಚಿಕ್ಕಮ್ಮ, ಅದನ್ನು ಶಿವುಗೆ ತೋರಿಸಿದ್ದಾಳೆ. ಪಾರ್ವತಿ ಕ್ಲಿನಿಕ್ ಆರಂಭಿಸಬಾರದು ಎಂಬ ಉದ್ದೇಶದಿಂದ ನಿಮ್ಮ ಮಾವ ಹರಿದು ಹಾಕಿದ್ದಾರೆ. ನಿನ್ನ ಪಾಲಿಗೆ ದೇವರು ಅಂದುಕೊಂಡಿರುವ ನಿನ್ನ ಮಾವ, ಬೆನ್ನಹಿಂದೆ ರಾಕ್ಷಸ. ನಿನ್ನ ಏಳಿಗೆಯನ್ನು ಸಹಿಸದ ದುಷ್ಟ. ಮಗಳು ಹಾಳಾಗಬೇಕು ಎಂದು ಬಯಸುವ ನೀಚ ಎಂಬ ಸತ್ಯವನ್ನು ಪಾರ್ವತಿ ಚಿಕ್ಕಮ್ಮ ಹೇಳಿದ್ದಾಳೆ. ಶಿವು ಕೋಪ ನೋಡಿ ವೀರಭದ್ರ ಭಯಗೊಂಡಿದ್ದಾನೆ.

45

ಪಾರ್ವತಿಯ ಹರಿದ ಸರ್ಟಿಫಿಕೇಟ್ ನೋಡುತ್ತಿದ್ದಂತೆ ಶಿವು ಕೋಪಗೊಂಡು ಮೂರನೇ ಕಣ್ಣು ತೆರೆದಿದ್ದಾನೆ. ಆದ್ರೆ ಇದೆಲ್ಲವೂ ವೀರಭದ್ರನ ಕನಸು ಆಗಿತ್ತು. ಇದೆಲ್ಲಾ ಕನಸು ಎಂದು ತಿಳಿಯುತ್ತಿದ್ದಂತೆ ವೀಕ್ಷಕರು ನಿರಾಸೆಗೊಂಡಿದ್ದಾರೆ. ಶಿವನ ರುದ್ರತಾಂಡವ ನೋಡಲು ಕಾಯುತ್ತಿದ್ದ ಪ್ರೇಕ್ಷಕರಲ್ಲಿ ಕೊಂಚ ಬೇಸರವುಂಟಾಗಿದೆ. ಕೊನೆಗೆ ಮನೆಗೆ ಬಂದ ಶಿವುಗೆ ಯಾವುದೇ ಲೈಸೆನ್ಸ್ ನಮ್ಮ ಮನೆಗೆ ಬಂದಿಲ್ಲವೆಂದು ಸುಳ್ಳು ಹೇಳಿ ಕಳುಹಿಸಿದ್ದಾನೆ. 

55

ಏನೇನೋ ಆಸೆ ಇಟ್ಕೊಂಡು ಅಲ್ಲಿಗೆ ಹೋದ್ರೆ ಲೈಸೆನ್ಸ್ ಸಿಗಲಿಲ್ಲ ಎಂದು ಶಿವು ಹೇಳುತ್ತಾನೆ. ಮನೆಗೆ ಬಂದಿಲ್ಲವೆಂದ್ರೆ ಅದು ಮತ್ತೆ ಪೋಸ್ಟ್ ಆಫಿಸ್‌ಗೆ ಹೋಗಿರಬಹುದು ಎಂದು ಪಾರ್ವತಿ ಹೇಳುತ್ತಾಳೆ. ಈ ಮಾತು ಕೇಳುತ್ತಿದ್ದಂತೆ ನಾಳೆಯೇ ಪೋಸ್ಟ್ ಆಫಿಸ್‌ಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ ಎಂದು ಶಿವು ಹೇಳಿದ್ದಾನೆ. 

Read more Photos on
click me!

Recommended Stories