Amruthadhaare Serial: ಶಕುಂತಲಾ ನಿದ್ದೆ ಕೆಡಿಸಿದ ಈ ಪಂಕಜಾ ಯಾರು? ಇಲ್ಲಿದೆ ರಹಸ್ಯ!

Published : May 16, 2025, 10:14 AM ISTUpdated : May 16, 2025, 10:19 AM IST

ʼಅಮೃತಧಾರೆʼ ಧಾರಾವಾಹಿಯಲ್ಲಿ ಪಂಕಜಾ ಎನ್ನುವ ಶಬ್ದ ಭಾರೀ ಸೌಂಡ್‌ ಮಾಡ್ತಿದೆ. ಪಂಕಜಾ ಯಾರು ಎನ್ನುವ ಪ್ರಶ್ನೆಯೇ ಈಗ ಮಿಲಿಯನ್‌ ಡಾಲರ್‌ ಪ್ರಶ್ನೆ ಆಗಿದೆ. ಶಕುಂತಲಾಗೂ ಪಂಕಜಾಗೂ ಸಂಬಂಧ ಇದೆ ಎಂಬಂತೆ ಸದ್ಯ ಧಾರಾವಾಹಿಯಲ್ಲಿ ಪ್ರಸಾರ ಆಗ್ತಿದೆ.

PREV
15
Amruthadhaare Serial: ಶಕುಂತಲಾ ನಿದ್ದೆ ಕೆಡಿಸಿದ ಈ ಪಂಕಜಾ ಯಾರು? ಇಲ್ಲಿದೆ ರಹಸ್ಯ!

ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಿದಾಗ ಅವಳಿಗೆ ಒಂದು ಲೇಡಿ ಕಾಣಿಸಿದ್ದಳು. ಆಗ ಅವಳಿಗೆ ಆ ಲೇಡಿ ಹಾಕಿದ್ದ ಚಪ್ಪಲಿ ಮಾತ್ರ ಕಾಣಿಸಿತ್ತು. ಮನೆಗೆ ಬಂದಾಗ ಆ ಚಪ್ಪಲಿಯನ್ನು ಶಕುಂತಲಾ ಹಾಕಿರೋದು ಲಚ್ಚಿಗೆ ಗೊತ್ತಾಗಿತ್ತು. ಹೀಗಾಗಿ ಅವಳು ಪದೇ ಪದೇ ಶಕುಂತಲಾ ನೋಡಿ ಅಜ್ಜಿ ನೋಡಿ ಭಯಬೀಳುತ್ತಿದ್ದಳು. ಇದು ಭೂಮಿಗೆ ಗೊತ್ತಾಗಿತ್ತು. ಶಕುಂತಲಾ ಸತ್ಯವನ್ನು ಹೊರತರಲು ಭೂಮಿ, ಅವಳ ರೂಮ್‌ಗೆ ಹೋಗಿದ್ದಳು. ಆಗ ಅವಳಿಗೆ ಪಂಕಜಾ ಎನ್ನುವವರ ಬರ್ತ್‌ ಸರ್ಟಿಫಿಕೇಟ್‌ ಸಿಕ್ಕಿದೆ.
 

25

ಪಂಕಜಾ ಜನ್ಮದಿನವೂ, ಶಕುಂತಲಾ ಜನ್ಮದಿವೂ ಒಂದೇ ಆಗಿದೆ. ಇದು ಭೂಮಿಗೂ ಅನುಮಾನ ತಂದಿತ್ತು. ಗಂಡ ಗೌತಮ್‌ ಗೆಳೆಯ ಆನಂದ್‌ ಸಹಾಯ ಪಡೆದು ಅವಳು ಪಂಕಜಾ ಸತ್ಯವನ್ನು ಹೊರತರಲು ಪ್ರಯತ್ನಪಡುತ್ತಿದ್ದಾಳೆ. ಪಂಕಜಾ ಊರು ಯಾವುದು ಎಂದು ತಿಳಿದುಕೊಂಡು, ಅಲ್ಲಿನ ಗ್ರಾಮ ಪಂಚಾಯಿತಿಗೆ ಫೋನ್‌ ಮಾಡಿದ್ದಾರೆ. ಆಗ ಅಲ್ಲಿ ಪಂಕಜಾ ಬಗ್ಗೆ ಗೊತ್ತಿರೋರು ಗೌತಮ್‌ ದಿವಾನ್‌ ಮನೆಗೆ ಫೋನ್‌ ಮಾಡಿದ್ದಾರೆ.
 

35

ಫೋನ್‌ ಕರೆಯನ್ನು ಅಜ್ಜಿ ರಿಸೀವ್‌ ಮಾಡಿದ್ದಳು. ಅವರು ಪಂಕಜಾಗೆ ಫೋನ್‌ ಕೊಡಿ ಎಂದು ಹೇಳಿದ್ದಾರೆ. ಇಲ್ಲಿ ಯಾರೂ ಪಂಕಜಾ ಎನ್ನುವವರು ಇಲ್ಲ, ಇದು ಗೌತಮ್‌ ದಿವಾನ್‌ ಮನೆ ಅಂತ ಅಜ್ಜಿ ಹೇಳಿದ್ದಾರೆ. ಅದನ್ನು ಶಕುಂತಲಾ ಅಡಗಿ ನಿಂತು ಕೇಳುತ್ತಿದ್ದಳು. ಇದು ಭೂಮಿ ಕಣ್ಣಿಗೆ ಬಿದ್ದಿದೆ, ಆಗ ಅವಳಿಗೆ ಇನ್ನೂ ಸತ್ಯ ತಿಳಿದುಕೊಳ್ಳೋದಿದೆ ಅಂತ ಅನಿಸಿದೆ. 

45

ಪಂಕಜಾ ಎನ್ನುವ ಪದ ಕಿವಿಗೆ ಬೀಳ್ತಿದ್ದಂತೆ ಶಕುಂತಲಾ ಗಾಬರಿ ಬಿದ್ದಿದ್ದಳು. ಅವಳಿಗೆ ಆಗ ಪುಟ್ಟ ಮಗಳು ಇನ್ನೇನೋ ನೆನಪಿಗೆ ಬಂದ ಹಾಗೆ ಆಗಿದೆ. ಹೀಗಾಗಿ ಅವಳೇ ಪಂಕಜಾ ಆಗಿರಬಹುದು. ಗೌತಮ್‌ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪಂಕಜಾ ಅವರ ಆಸ್ತಿ ಮೇಲೆ ಕಣ್ಣಿಟ್ಟು, ಗೌತಮ್‌ ತಂದೆಯನ್ನು ಮದುವೆ ಆಗಿರಬಹುದು ಅಥವಾ ಗೌತಮ್‌ ತಂದೆ ಮದುವೆ ಆಗಿದೀನಿ ಅಂತ ಸುಳ್ಳು ಕೂಡ ಹೇಳಿರಬಹುದು. ಈ ಹಿಂದೆ ಜಯದೇವ್‌ ತನ್ನ ತಂದೆಯನ್ನು ಬೈಯ್ದಾಗ ಶಕುಂತಲಾ ಸಹಿಸಲೇ ಇಲ್ಲ. ಗೌತಮ್‌ ತಂದೆ, ಜಯದೇವ್‌ ತಂದೆ ಬೇರೆ ಬೇರೆ ಆಗಿರುವ ಸಾಧ್ಯತೆ ಇದೆ. 
 

55

ಗೌತಮ್‌ ದಿವಾನ್‌ ಮಲತಾಯಿ ಶಕುಂತಲಾ ಸಿಕ್ಕಾಪಟ್ಟೆ ದುಷ್ಟೆ, ಕುತಂತ್ರಿ. ಗೌತಮ್‌ ಮನೆ ಪ್ರವೇಶ ಮಾಡಿರುವ ಅವಳು ತನ್ನ ಸಂಪೂರ್ಣ ಆಸ್ತಿಯನ್ನು ತಾನು ಹೊಡೆಯಬೇಕು ಎಂದುಕೊಂಡಿದ್ದಾಳೆ. ಇದನ್ನು ಭೂಮಿ ಬಯಲುಮಾಡ್ತಾಳಾ ಅಂತ ಕಾದು ನೋಡಬೇಕಾಗಿದೆ. ಛಾಯಾ ಸಿಂಗ್‌, ರಾಜೇಶ್‌ ನಟರಂಗ, ವನಿತಾ ವಾಸು ನಟನೆಯ ಅಮೃತಧಾರೆ ಧಾರಾವಾಹಿಯು ಟಿಆರ್‌ಪಿಯಲ್ಲಿ ಕೂಡ ಮುಂದಿದೆ. 

Read more Photos on
click me!

Recommended Stories