ಬಿಗ್ ಬಾಸ್ ಸೀಸನ್ 12 ಚಾಂಪಿಯನ್ ಗಿಲ್ಲಿ ನಟನ ಪೇಮೆಂಟ್ ಎಷ್ಟು ಗೊತ್ತಾ?

Published : Jan 18, 2026, 11:44 PM IST

ಬೆಂಗಳೂರು: 12ನೇ ಸೀಸನ್ ಬಿಗ್‌ ಬಾಸ್ ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಗಿಲ್ಲಿ ನಟ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಗಿಲ್ಲಿ ತಮ್ಮ ಮೊದಲ ಪೇಮೆಂಟ್ ಬಗ್ಗೆ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. 

PREV
17
ಗಿಲ್ಲಿ ಬಿಗ್ ಬಾಸ್ ಚಾಂಪಿಯನ್

12ನೇ ಆವೃತ್ತಿಯ ಬಿಗ್ ಬಾಸ್ ಫಿನಾಲೆಯಲ್ಲಿ ಗಿಲ್ಲಿ ನಟ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್‌ನ ಅಂತಿಮ ಸುತ್ತಿನಲ್ಲಿ ಗಿಲ್ಲಿ, ಅಶ್ವಿನಿ ಗೌಡ ಹಾಗೂ ರಕ್ಷಿತಾ ರೇಸ್‌ನಲ್ಲಿದ್ದರು.

27
ಕಡುಬಡತನದ ಹಿನ್ನೆಲೆಯಿಂದ ಬಂದ ಗಿಲ್ಲಿ

ಆರಂಭದಿಂದಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಗಿಲ್ಲಿ ನಟ, ಸಾಕಷ್ಟು ಕಡುಬಡತನ ಹಿನ್ನೆಲೆಯಿಂದ ಬಂದು ತನ್ನ ಪ್ರತಿಭೆ ಮೂಲಕವೇ ಕನ್ನಡಿಗರ ಮನೆ ಮಾತಾಗಿದ್ದಾರೆ.

37
ಅನುಶ್ರೀ ಜತೆಗಿನ ಸಂದರ್ಶನದಲ್ಲಿ ಮಾತಾಡಿದ ಗಿಲ್ಲಿ

ಕೆಲ ದಿನಗಳ ಹಿಂದೆ ಅನುಶ್ರೀ ಅವರ ಜತೆಗಿನ ಸಂದರ್ಶನವೊಂದರಲ್ಲಿ ಗಿಲ್ಲಿ ನಟ ತಮ್ಮ ಮೊದಲ ಪೇಮೆಂಟ್‌ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆರಂಭದ ದಿನಗಳನ್ನು ಗಿಲ್ಲಿ ನಟ ಮೆಲುಕು ಹಾಕಿದ್ದಾರೆ.

47
ರಿಯಾಲಿಟಿ ಶೋನಲ್ಲಿ ಹಣ ಸಿಗುವುದೇ ಗೊತ್ತಿರಲಿಲ್ಲ

ರಿಯಾಲಿಟಿ ಶೋನಲ್ಲಿ ನಟಿಸಿದ್ರೆ ಹಣ ಸಿಗುತ್ತೆ ಎನ್ನುವ ವಿಷಯವೇ ಗಿಲ್ಲಿ ನಟನಿಗೆ ಗೊತ್ತಿರಲಿಲ್ಲ ಎಂದು ಅನುಶ್ರೀ ಹೇಳಿದಾಗ ಈ ಬಗ್ಗೆ ಮೊದಲ ಸಲ ಗಿಲ್ಲಿ ತನ್ನ ಅನುಭವ ಹಂಚಿಕೊಂಡರು.

57
ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಗಿಲ್ಲಿ

ಕಾಮಿಡಿ ಕಿಲಾಡಿಗಳನ್ನು ಮಾಡಬೇಕಿದ್ರೆ ತಬಲ ನಾಣಿಯವರು ಕುರುಬರಹಳ್ಳಿಯಲ್ಲಿ ಸ್ಕಿಟ್ ಮಾಡಲು ಆಫರ್ ಕೊಟ್ಟಿದ್ರು. ಆದರೆ ತಮ್ಮ ತಂಡವನ್ನು ಕಟ್ಟಿಕೊಂಡು ಹೋಗಿ ಸ್ಕಿಟ್ ಮಾಡಲು ಸಾಧ್ಯವಿಲ್ಲ ಅಂತ ಸುಮ್ನಾದೆ. ಈ ರೀತಿ ಎಂಟು-ಒಂಬತ್ತು ಕಾರ್ಯಕ್ರಮಗಳು ಮಿಸ್ ಆದ್ವು.

67
ಗಿಲ್ಲಿ ಮೊದಲ ಪೇಮೆಂಟ್ 10 ಸಾವಿರ!

ಮಿಮಿಕ್ರಿ ಸಾಗರ್ ಒಮ್ಮೆ ಕಾಲ್ ಮಾಡಿ ಹೊಸದುರ್ಗದಲ್ಲಿ ಒಂದು ಇವೆಂಟ್ ಇದೆ. ನಿನಗೆ 10 ಸಾವಿರ ಪೇಮೆಂಟ್ ಓಕೆನಾ ಅಂದ. ಅದನ್ನು ಕೇಳಿ ಶಾಕ್ ಆದೆ. ಅದು ನನ್ನ ಮೊದಲ ಪೇಮೆಂಟ್ ಎಂದು ಗಿಲ್ಲಿ ಹೇಳಿದ್ದಾರೆ.

77
50 ಲಕ್ಷ ರುಪಾಯಿ ಗೆದ್ದ ಗಿಲ್ಲಿ

ಇದೀಗ ಬಿಗ್ ಬಾಸ್ ಚಾಂಪಿಯನ್ ಆದ ಗಿಲ್ಲಿ 50 ಲಕ್ಷ ರುಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories