ತೀವ್ರ ಕುತೂಹಲ ಕೆರಳಿಸಿದ ಬಿಗ್ ಬಾಸ್ 9 ವಿನ್ನರ್ ಘೋಷಣೆ, ಈ ಬಾರಿ ಮಹಿಳೆಗೆ ಟ್ರೋಫಿ

Published : Jan 18, 2026, 11:01 PM IST

ತೀವ್ರ ಕುತೂಹಲ ಕೆರಳಿಸಿದ ಬಿಗ್ ಬಾಸ್ 9 ವಿನ್ನರ್ ಘೋಷಣೆ, ಯಾರು ಚಾಂಪಿಯನ್ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದಿವ್ಯಾ ಗಣೇಶನ್ ಬಿಗ್ ಬಾಸ್ ಟ್ರೋಫಿ ಗೆದ್ದುಕೊಂಡಿದ್ದಾರೆ. ಇದೀಗ ಸಂಭ್ರಮಾಚರಣೆ ಶುರುವಾಗಿದೆ. 

PREV
15
ಬಿಗ್ ಬಾಸ್ 9ರ ಕುತೂಹಲ

ಕನ್ನಡ ಬಿಗ್ ಬಾಸ್ ಶೋ ಫಿನಾಲೆ ಭಾರಿ ಸದ್ದು ಮಾಡಿದ್ದರೆ, ಅತ್ತ ಬಿಗ್ ಬಾಸ್ 9 ತಮಿಳು ಕೂಡ ಇಂದೇ ಫಿನಾಲೆ.  ಕಳೆದ 9 ವರ್ಷಗಳಿಂದ ಬಿಗ್ ಬಾಸ್ ಶೋ ಅದ್ಧೂರಿಯಾಗಿ ನಡೆದಿದೆ. ಕಳೆದೆರಡು ಸೀಸನ್‌ಗಳಿಂದ ನಟ ವಿಜಯ್ ಸೇತುಪತಿ ಹೋಸ್ಟ್ ಮಾಡುತ್ತಿುರುವ ಬಿಗ್ ಬಾಸ್  ಈ ಬಾರಿ ಬಾರಿ ಕುತೂಹಲ ಕೆರಳಿಸಿತ್ತು.  

25
ಫಿನಾಲೆಯಲ್ಲಿ ತೀವ್ರ ಸ್ಪರ್ಧೆ

ಬಿಗ್ ಬಾಸ್ 9ನೇ ಸೀಸನ್‌ನಲ್ಲಿ ನಂದಿನಿ, ಪ್ರವೀಣ್ ಗಾಂಧಿ, ಆಧಿರಾ, ಅಪ್ಸರಾ, ಕಲೈಯರಸನ್, ಪ್ರವೀಣ್ ರಾಜ್, ದುಶಾರ್, ದಿವಾಕರ್, ಪ್ರಜನ್, ವಿಯಾನಾ, ಪಾರ್ವತಿ, ಕಮ್ರುದ್ದೀನ್, ಸಾಂಡ್ರಾ, ಗಾನಾ ವಿನೋದ್, ರಮ್ಯಾ ಜೋ, ಕೆಮಿ, ಕನಿ, ಎಫ್‌ಜೆ, ಸುಭಿಕ್ಷಾ, ಶಬರಿ, ವಿಕ್ಕಲ್ಸ್ ವಿಕ್ರಮ್, ಅರೋರಾ, ದಿವ್ಯಾ ಗಣೇಶ್ ಸೇರಿ ಒಟ್ಟು 24 ಸ್ಪರ್ಧಿಗಳಿದ್ದರು. ಇದರಲ್ಲಿ ದಿವ್ಯಾ, ಶಬರಿ, ವಿಕ್ರಮ್, ಅರೋರಾ ಫೈನಲ್‌ಗೆ ಆಯ್ಕೆಯಾಗಿದ್ದರು.

35
ಟ್ರೋಫಿ ಗೆದ್ದ ದಿವ್ಯ

ಬಿಗ್ ಬಾಸ್ ಸೀಸನ್ 9ರಲ್ಲಿ ಅರೋರಾ ನಾಲ್ಕನೇ ಸ್ಥಾನ ಪಡೆದರು. ಮೂರನೇ ಸ್ಥಾನ ವಿಕ್ಕಲ್ ವಿಕ್ರಮ್‌ಗೆ ಸಿಕ್ಕಿತು. ಅಂತಿಮ ವೇದಿಕೆಯಲ್ಲಿ ಶಬರಿ ಮತ್ತು ದಿವ್ಯಾ ಗಣೇಶ್ ಇದ್ದರು. ಅವರಲ್ಲಿ ಹೆಚ್ಚು ವೋಟ್ ಪಡೆದ ದಿವ್ಯಾ ಗಣೇಶ್ ಕೈಯನ್ನು ವಿಜಯ್ ಸೇತುಪತಿ ಎತ್ತಿ ವಿಜೇತೆ ಎಂದು ಘೋಷಿಸಿದರು. ಇದರೊಂದಿಗೆ ಬಿಗ್ ಬಾಸ್ ಟೈಟಲ್ ಗೆದ್ದ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ದಿವ್ಯಾ ಪಾತ್ರರಾದರು. ಈ ಹಿಂದೆ 7ನೇ ಸೀಸನ್‌ನಲ್ಲಿ ಅರ್ಚನಾ ಟೈಟಲ್ ಗೆದ್ದಿದ್ದರು.

45
ದಿವ್ಯಗೆ 50 ಲಕ್ಷ ರೂ ಬಹುಮಾನ

ಬಿಗ್ ಬಾಸ್ ಸೀಸನ್ 9 ಟೈಟಲ್ ಗೆದ್ದ ದಿವ್ಯಾ ಗಣೇಶ್‌ಗೆ ಟ್ರೋಫಿ ನೀಡಲಾಯಿತು. ಅಷ್ಟೇ ಅಲ್ಲದೆ, ಮೊದಲ ಸ್ಥಾನಕ್ಕೆ 50 ಲಕ್ಷ ರೂ. ಬಹುಮಾನ ನೀಡಲಾಯಿತು. ಈ ಸೀಸನ್‌ನಲ್ಲಿ ಅತಿ ಹೆಚ್ಚು ಸಂಬಳ ಪಡೆದ ಸ್ಪರ್ಧಿಯೂ ದಿವ್ಯಾ. ಅವರಿಗೆ ದಿನಕ್ಕೆ 30 ಸಾವಿರ ರೂ. ಸಂಬಳ ನೀಡಲಾಗಿತ್ತು. ಅದರಂತೆ 77 ದಿನಗಳಿಗೆ 23 ಲಕ್ಷಕ್ಕೂ ಹೆಚ್ಚು ಸಂಬಳ ಪಡೆದಿದ್ದಾರೆ. ಒಟ್ಟಾರೆ ಈ ಸೀಸನ್‌ನಿಂದ ದಿವ್ಯಾ 73 ಲಕ್ಷಕ್ಕೂ ಹೆಚ್ಚು ಹಣ ಗಳಿಸಿದ್ದಾರೆ.

55
ದಿವ್ಯ ಬಿಗ್ ಬಾಸ್ ಮನೆ ಸಾಧನೆ

ಬಿಗ್ ಬಾಸ್ ಸೀಸನ್ 9 ಶೋಗೆ ದಿವ್ಯಾ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟರು. 28ನೇ ದಿನ ಮನೆಗೆ ಬಂದರು. ಬಂದ ಮೊದಲ ವಾರವೇ ಮನೆಯ ಕ್ಯಾಪ್ಟನ್ ಆದರು. ನಂತರ ಸಾಂಡ್ರಾ ಜೊತೆಗಿನ ಕಿರಿಕ್‌ನಿಂದ ಹಿನ್ನಡೆ ಅನುಭವಿಸಿದರು. ಬಳಿಕ ಚೇತರಿಸಿಕೊಂಡು ಆಟವಾಡಿದರು. ಟಿಕೆಟ್ ಟು ಫಿನಾಲೆ ಕಾರ್ ಟಾಸ್ಕ್‌ನಲ್ಲಿ ಪಾರ್ವತಿ ಮತ್ತು ಕಮ್ರುದ್ದೀನ್‌ರನ್ನು ಧೈರ್ಯವಾಗಿ ಎದುರಿಸಿದ್ದರಿಂದ ದಿವ್ಯಾಗೆ ಜನಪ್ರಿಯತೆ ಹೆಚ್ಚಿ, ಟೈಟಲ್ ವಿನ್ನರ್ ಆದರು. ಇನ್ನು ಸಿನಿಮಾದಲ್ಲೂ ಹೀರೋಯಿನ್ ಆಗಿ ಮಿಂಚುವ ನಿರೀಕ್ಷೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories