ನಂದಗೋಕುಲದಲ್ಲಿ ಮಾಧವ ಮತ್ತು ಪ್ರಿಯಾಳ ಹನಿಮೂನ್ ಪ್ಲಾನ್, ಫ್ಯಾಮಿಲಿ ಟ್ರಿಪ್ ಆಗಿ ಬದಲಾಗಿದ್ದಕ್ಕೆ ಪ್ರಿಯಾ ಬೇಸರಗೊಂಡಿದ್ದಾಳೆ. ಮತ್ತೊಂದೆಡೆ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮಾಡಿದ್ದಾಳೆಂಬ ಆಕೆಯ ಸುಳ್ಳು, ಅಮೂಲ್ಯ ಮತ್ತು ಮೀನಾಳಿಂದಾಗಿ ಬಯಲಾಗುವ ಹಂತದಲ್ಲಿದೆ.
ನಂದಗೋಕುಲದಲ್ಲಿ ಅಳಿಯ ಮಾಧವ ಮತ್ತು ಮಗಳಿಗೆ ಮಾತ್ರ ಒಳ್ಳೆದಾಗಬೇಕೆಂದು ಇಬ್ಬರನ್ನು ಹನಿಮೂನ್‌ಗೆ ಕಳುಹಿಸಬೇಕೆಂದು ಪ್ರಿಯಾ ಅಮ್ಮಾ ಪ್ಲಾನ್ ಮಾಡಿದ್ದಳು. ಆ ಪ್ಲಾನ್ ಪ್ರಕಾರವೇ, ನಂದಕುಮಾರ್ ಸಹ ಮಾಧವ್-ಪ್ರಿಯಾಳನ್ನು ಹನಿಮೂನ್‌ಗೆ ಕಳುಹಿಸಲು ಒಪ್ಪಿಕೊಂಡಿದ್ದ. ಆದ್ರೆ ಅವರಿಬ್ಬರನ್ನು ಮಾತ್ರ ಕಳುಹಿಸುತ್ತಿರೋದು ಪಕ್ಷಪಾತ ಆಗುತ್ತೆ ಎಂದು ಗಿರಿಜಾ ಹೇಳಿದ್ದಕ್ಕೆ ಕೇಶವ-ಮೀನಾ, ವಲ್ಲಭ-ಅಮೂಲ್ಯಗೆ ಹನಿಮೂನ್‌ಗೆ ತೆರಳಲು ನಂದ ಸಮ್ಮತಿಸಿದ್ದಾನೆ.
25
ಅಮ್ಮಾ ಅಷ್ಟೆಲ್ಲಾ ಪ್ಲಾನ್ ಮಾಡಿದ್ರೂ ಫೇಲ್ ಆಯ್ತು
ಕೇಶವ-ಮೀನಾ, ವಲ್ಲಭ-ಅಮೂಲ್ಯ ಜೊತೆ ಹನಿಮೂನ್‌ಗೆ ಬರುತ್ತಿರುವ ವಿಷಯ ಕೇಳಿ ಪ್ರಿಯಾಗೆ ಬೇಸರವಾಗಿದೆ. ಹೀಗೆ ಎಲ್ಲರೂ ಹೋದ್ರೆ ಅದು ಫ್ಯಾಮಿಲಿ ಟ್ರಿಪ್ ಆಗಲ್ಲವಾ ಎಂದು ಮಾಧವನ ಮುಂದೆ ಪ್ರಿಯಾ ಬೇಸರ ವ್ಯಕ್ತಪಡಿಸಿದ್ದಾಳೆ. ಆದ್ರೆ ಮಾಧವ, ಇದಕ್ಕೆ ಇದು ಫ್ಯಾಮಿಲಿ ಹನಿಮೂನ್ ಆಗುತ್ತೆ ಎಂದು ತಮ್ಮಂದಿರುವ ಜೊತೆಯಲ್ಲಿ ಬರುತ್ತಿರೋದಕ್ಕೆ ಮಾಧವ ಖುಷಿಯಾಗಿದ್ದಾನೆ.
35
ಹನಿಮೂನ್‌ಗೆ ಹೋಗಲು ಹಿಂದೇಟು
ಇತ್ತ ಪ್ರಿಯಾ ಜೊತೆ ಹೋಗಲು ಇಷ್ಟವಿಲ್ಲದ ಕಾರಣ ಮೀನಾ ಹನಿಮೂನ್‌ಗೆ ಹೋಗಲು ಹಿಂದೇಟು ಹಾಕಿದ್ದಾಳೆ. ಮತ್ತೊಂದೆಡೆ ಇಷ್ಟವಿಲ್ಲದೇ ಮದುವೆ ಆಗಿದ್ದು, ಪ್ರತಿದಿನ ಜಗಳ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಹಾಗಾಗಿ ಹನಿಮೂನ್‌ಗೆ ತೆರಳಲು ತಮಗೆ ಯೋಗ್ಯತೆ ಇಲ್ಲವೆಂದು ಅಮೂಲ್ಯ-ವಲ್ಲಭ ಸಹ ಹಿಂದೇಟು ಹಾಕುತ್ತಿದ್ದಾರೆ.
ಮದುವೆಗೆ ಮುನ್ನ ಮಗಳು ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮಾಡಿದ್ದಾಳೆ ಎಂದು ಪ್ರಿಯಾ ಪೋಷಕರು ಹೇಳಿದ್ದರು. ಆದರೆ ಸುಳ್ಳು ಎಂದು ಗೊತ್ತಿದ್ರೂ ಪ್ರಿಯಾ ಮಾತ್ರ ಈ ವಿಷಯವನ್ನು ಯಾರೊಂದಿಗೂ ಹೇಳಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸೀರಿಯಲ್ ಮೇಕಿಂಗ್ ಕ್ಲಿಪ್ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ ಪ್ರಿಯಾಳ ಸುಳ್ಳಿನ ಮುಖವಾಡ ಬಯಲಾಗುವ ಸಮಯ ಸನ್ನಿಹಿತವಾಗಿ ಎಂಬ ಸುಳಿವು ನೀಡಿದೆ.
ಮೇಕಿಂಗ್ ವಿಡಿಯೋದಲ್ಲಿ ಅಮೂಲ್ಯ ಮತ್ತು ಮೀನಾ ಜೊತೆಯಾಗಿ ಪ್ರಿಯಾಳನ್ನು ಕೋಚಿಂಗ್ ಸೆಂಟರ್‌ಗೆ ಕರೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದಾರೆ. ಅಲ್ಲಿಗೆ ಬಂದು ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕೋಚಿಂಗ್ ಸೆಂಟರ್‌ಗೆ ಹೋಗಲು ಪ್ರಿಯಾ ಹಿಂದೇಟು ಹಾಕುತ್ತಿದ್ದಾಳೆ. ಒಂದ್ವೇಳೆಮ ಇಬ್ಬರು ಪಟ್ಟು ಸಡಿಲಸದೇ ಪ್ರಿಯಾಳನ್ನು ಕರೆದುಕೊಂಡು ಹೋದ್ರೆ ಸುಳ್ಳು ಬಯಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.