Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ನನ್ನು ದಿಯಾ ಜೈಲಿಗೆ ಹಾಕಿಸಿದ್ದಳು. ಈಗ ಅವನಿಗೆ ಜಾಮೀನು ಸಿಕ್ಕಿದ್ದು, ಹೊರಗಡೆ ಬಂದಿದ್ದಾನೆ. ಇದರ ಹಿಂದೆ ಇದ್ದೋರು ಯಾರು?
ತಾನು ಗೌತಮ್ ದಿವಾನ್ ಸಹೋದರ, ಜಯದೇವ್ ದಿವಾನ್ ಎಂದು ಹೇಳಿದ್ರೂ ಕೂಡ, ಯಾರೂ ಕೇಳಲೇ ಇಲ್ಲ. ಇನ್ನೊಂದು ಕಡೆ ಶಕುಂತಲಾ ಕೂಡ ಅವನು ನನ್ನ ಮಗ ಅಲ್ಲ ಎಂದಳು. ತಾಯಿ ಹೀಗೆ ಹೇಳಿದ್ದು ಕೇಳಿ ಜಯದೇವ್‌ಗೆ ಶಾಕ್ ಆಗಿದೆ. ಪೊಲೀಸರಂತೂ ಜಯದೇವ್‌ಗೆ ಏರೋಪ್ಲೇನ್ ಹತ್ತಿಸಿದ್ದಾರೆ. ಆದರೂ ಕೂಡ ಜಯದೇವ್‌ಗೆ ಬುದ್ಧಿಯೇ ಬಂದಿಲ್ಲ, ಅವನೊಳಗಿನ ರಾಕ್ಷಸ ಹಾಗೆ ಇದ್ದಾನೆ.
24
ಮಗಳ ಹುಡುಕಾಟ ಶುರುವಾಗಿದೆ
ಗೌತಮ್ ತನ್ನ ಮನೆಗೆ ಕಾಲಿಡುತ್ತಿದ್ದಂತೆ, ಅಲ್ಲಿಗೆ ಅರಸನಕೋಟೆ ಅಖಿಲಾಂಡೇಶ್ವರಿ ಆಗಮನವಾಗಿದೆ. ಪೂಜೆಯಲ್ಲಿ ಅವಳು ಕೂಡ ಭಾಗಿ ಆಗಿದ್ದಾಳೆ, ಇನ್ನೊಂದು ಕಡೆ ಗೌತಮ್ ದಿವಾನ್ ಮಗಳ ಬಗ್ಗೆ ಕೂಡ ಮಾತು ಬಂತು. ಇದೇನು ಎಂದು ಅಖಿಲಾಂಡೇಶ್ವರಿ ಕೇಳಿದ್ದಳು. ಆಗ ಗೌತಮ್, “ನಮಗೆ ಅವಳಿ ಮಕ್ಕಳು ಹುಟ್ಟಿದ್ದವು. ನನ್ನ ಮಗಳು ಎಂಟು ವರ್ಷದ ಹಿಂದೆ ಮಿಸ್ ಆಗಿದ್ದಾಳೆ, ಅವಳು ಎಲ್ಲಿದ್ದಾಳೆ ಎಂದು ಹುಡುಕಾಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾನೆ.
34
ಅಖಿಲಾಂಡೇಶ್ವರಿ ಸಹಾಯ
ನಾನೊಂದು ಎನ್‌ಜಿಒ ನಡೆಸುತ್ತಿದ್ದೇನೆ. ಸಾಕಷ್ಟು ಮಿಸ್ ಆಗಿರೋ ಮಕ್ಕಳು ಸಿಕ್ಕಿವೆ, ಮಗುವಿನ ಹಿನ್ನಲೆ ಬಗ್ಗೆ ನಾವು ಹುಡುಕಾಟ ಮಾಡ್ತೀವಿ, ನಿಮ್ಮ ಮಗು ಎಲ್ಲಿದೆ ಎಂದು ಹುಡುಕ್ತೀವಿ, ಅಡ್ರೆಸ್ ಕೊಡಿ ಎಂದು ಅಖಿಲಾಂಡೇಶ್ವರಿ ಹೇಳಿದ್ದು, ಗೌತಮ್ ದಿವಾನ್‌ಗೆ ಫುಲ್ ಖುಷಿಯಾಗಿದೆ. ಅವನು ಎಲ್ಲ ಡಿಟೇಲ್ಸ್ ಕೊಟ್ಟಿದ್ದಾನೆ. ಈಗ ಮಗು ಸಿಗೋ ಸಾಧ್ಯತೆ ಇದೆ.
ಜಯದೇವ್ ಪೊಲೀಸ್ ಸ್ಟೇಶನ್‌ನಲ್ಲಿದ್ದಾನೆ. ಅಲ್ಲಿಗೆ ಮಾವ ಲಕ್ಷ್ಮೀಕಾಂತ್ ಬಂದಿದ್ದನು. ಅವನು ಜಯದೇವ್‌ನನ್ನು ಬಿಡಿಸಿದ್ದಾನೆ, ನಿಮ್ಮ ಹಂಗು ಬೇಡ, ನೀವು ಜಾಮೀನು ಕೊಡೋದು ಬೇಡ ಎಂದು ಜಯದೇವ್ ಹೇಳಿದ್ದನು. ಆಮೇಲೆ ಪೊಲೀಸರು ಬೆಂಡೆತ್ತುತ್ತಾರೆ ಎಂದು ಗೊತ್ತಾಗಿ ಸುಮ್ಮನಾಗಿದ್ದಾನೆ. ಲಕ್ಷ್ಮೀಕಾಂತ್ ಒಳ್ಳೆಯ ಮನಸ್ಸಿನಿಂದ ಹೀಗೆ ಮಾಡಿದನಾ? ಅಥವಾ ಗೌತಮ್ ಈ ರೀತಿ ಬಿಡಿಸಿ ಎಂದು ಹೇಳಿದ್ದನಾ ಎಂಬ ಸಂಶಯ ಇದೆ. ಜಯದೇವ್ ಹೊರಗಡೆ ಬಂದರೆ ಸುಮ್ಮನೆ ಇರೋದಿಲ್ಲ, ಇನ್ನೇನಾದ್ರೂ ಸಮಸ್ಯೆ ಮಾಡುತ್ತಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.