Bigg Boss ರಕ್ಷಿತಾ ಶೆಟ್ಟಿಯ ಯುಟ್ಯೂಬ್​ ಆದಾಯ ಇದೀಗ ರಿವೀಲ್​! ಇಷ್ಟು ಸಿಕ್ಕಿದ್ಯಾ?

Published : Nov 13, 2025, 06:29 PM IST

ಬಿಗ್​ಬಾಸ್​ ಮನೆಯಲ್ಲಿ ಸದ್ದು ಮಾಡುತ್ತಿರುವ ರಕ್ಷಿತಾ ಶೆಟ್ಟಿ, ತಮ್ಮ ವಿಭಿನ್ನ ಭಾಷಾ ಶೈಲಿಯಿಂದಲೇ ಜನಪ್ರಿಯರಾಗಿದ್ದಾರೆ. ಮುಂಬೈನಲ್ಲಿ ಬೆಳೆದರೂ ಕರಾವಳಿ ಅಡುಗೆ ವಿಡಿಯೋಗಳಿಂದ ಫೇಮಸ್ ಆಗಿರುವ ಅವರ ಯೂಟ್ಯೂಬ್ ಆದಾಯದ ಅಂದಾಜು ಲೆಕ್ಕಾಚಾರದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

PREV
16
ರಕ್ಷಿತಾ ಶೆಟ್ಟಿ ಹವಾ ಜೋರು

ಸದ್ಯ ಬಿಗ್​ಬಾಸ್​​ನಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ಹವಾ ಜೋರಾಗಿಯೇ ಇದೆ. ಇಷ್ಟು ದಿನ ಪ್ರೀತಿ ಗಳಿಸುತ್ತಿದ್ದ ರಕ್ಷಿತಾ ಶೆಟ್ಟಿ ಒಂದೆರಡು ದಿನಗಳಿಂದ ಯಾಕೋ ಎಲ್ಲರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಅಭಿಷೇಕ್‌ ಅವರನ್ನ ಸೇವ್‌ ಮಾಡುವ ಭರದಲ್ಲಿ ರಕ್ಷಿತಾ ಶೆಟ್ಟಿ ರಘು ಅವರನ್ನ ನಾಮಿನೇಟ್‌ ಮಾಡಿದ್ದರು. ಇದು ಹಲವರ ಅಸಮಅಧಾನಕ್ಕೆ ಗುರಿಯಾಗಿತ್ತು.

26
ರಕ್ಷಿತಾ ಮೇಲೆ ಕ್ರೇಜ್​

ಕೊನೆಗೆ ಕಾವ್ಯ ಶೈವ ಅವರ ಮನವರಿಕೆಯಿಂದ ರಕ್ಷಿತಾ ಶೆಟ್ಟಿ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ. ಅದೇನೇ ಇದ್ದರೂ ರಕ್ಷಿತಾ ಮೇಲಿನ ಕ್ರೇಜ್​ ವೀಕ್ಷಕರಿಗೆ ಕಡಿಮೆ ಆಗಲ್ಲ ಎನ್ನಿ.

36
ಹಲವು ಭಾಷೆಗಳ ಮಿಕ್ಸಿಂಗ್​

ಅಷ್ಟಕ್ಕೂ ರಕ್ಷಿತಾ ಅವರು, ತುಳು, ಕನ್ನಡ, ಹಿಂದಿ, ಇಂಗ್ಲಿಷ್​ ಎಲ್ಲಾ ಮಿಕ್ಸ್​ ಮಾಡಿ ಮಾತನಾಡುವುದರಿಂದಲೇಫೇಮಸ್​. ಇದೇ ಆಕೆಯನ್ನು ಬಿಗ್​ಬಾಸ್​ ಮನೆಯವರೆಗೂ ತಂದು ನಿಲ್ಲಿಸಿದೆ. ಮುಂಬೈನಲ್ಲಿ ಬೆಳೆದಿರೋ ಅವರು, ತಮ್ಮ ಕರಾವಳಿ ಊಟದ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ.

46
ಯುಟ್ಯೂಬ್​ ಆದಾಯ ಎಷ್ಟು

ಹಾಗಿದ್ದರೆ ರಕ್ಷಿತಾ ಶೆಟ್ಟಿ (Bigg Boss Rakshita Shetty) ಯುಟ್ಯೂಬ್​ ಆದಾಯ ಎಷ್ಟು ಎಂದು ತಿಳಿಯುವ ಆಸೆ ಹಲವರಿಗೆ ಇದ್ದೇ ಇರುತ್ತದೆ. ನಿಖರವಾಗಿ ಇಂತಿಷ್ಟೇ ಎಂದು ಹೇಳಲು ಆಗದಿದ್ದರೂ, ಅವರ ಫಾಲೋವರ್ಸ್​, ವ್ಯೂವ್ಸ್​, ಅವರು ಹಾಕಿರುವ ವಿಡಿಯೋಗಳ ಆಧಾರದ ಮೇಲೆ ಇದರ ಲೆಕ್ಕಾಚಾರ ಹಾಕಲಾಗಿದೆ.

56
119 ವಿಡಿಯೋ

ಪ್ರಶಾಂತ್​ ಟಾಕ್ಸ್​ ಇನ್​ಸ್ಟಾದಲ್ಲಿ ರಕ್ಷಿತಾ ಶೆಟ್ಟಿ ಅವರ ಅಂದಾಜು ಗಳಿಕೆಯ ಬಗ್ಗೆ ವಿವರಣೆ ನೀಡಲಾಗಿದೆ. ಇವರ ಯುಟ್ಯೂಬ್​ ಹೆಸರು ರಕ್ಷಿತಾ ಟಾಕ್ಸ್​. ಇವರ ಯುಟ್ಯೂಬ್​ ಫಾಲೋವರ್ಸ್​ 3 ಲಕ್ಷದ 37 ಸಾವಿರ ಮಂದಿ. ಅವರು ಇದುವರೆಗೆ 119 ವಿಡಿಯೋಗಳನ್ನು ಹಾಕಿದ್ದಾರೆ.

66
390 ಯುಟ್ಯೂಬ್​ ಶಾರ್ಟ್ಸ್​

ಇದರಲ್ಲಿ 390 ಯುಟ್ಯೂಬ್​ ಶಾರ್ಟ್ಸ್​ ಹಾಗೂ 803 ಲಾಂಗ್​ ಫಾರ್ಮ್​ ವಿಡಿಯೋಗಳಿವೆ. ​ ಇವರ ವಿಡಿಯೋಗಳ ಡ್ಯುರೇಷನ್​ 20 ರಿಂದ 30- ನಿಮಿಷಗಳು ಇವೆ. ಲೈಫ್​ಸ್ಟೈಲ್​ ವಿಡಿಯೋ ಹೆಚ್ಚು ಶೇರ್​ ಮಾಡುತ್ತಾರೆ.

Read more Photos on
click me!

Recommended Stories