ಬಿಗ್ ಬಾಸ್ ಸೀಸನ್ 12ರಲ್ಲಿ ತಮ್ಮ ಮಾತು ಮತ್ತು ಮನರಂಜನೆಯಿಂದಲೇ ಮೋಡಿ ಮಾಡುತ್ತಿರುವ ಬೆಡಗಿ ರಕ್ಷಿತಾ ಶೆಟ್ಟಿ ತಮ್ಮ ಸಿಂಪಲ್ ಲುಕ್ ನಿಂದಲೇ ಜನಪ್ರಿಯತೆ ಪಡೆದಿದ್ದಾರೆ. ಇದೀಗ ಅವರ AI Photos ವೈರಲ್ ಆಗುತ್ತಿದೆ. ಹೇಗಿದೆ ನೋಡಿ ರಕ್ಷಿತಾ ಶೆಟ್ಟಿ ಸ್ಟೈಲಿಶ್ ಫೋಟೊಗಳು.
ಕನ್ನಡ ಬಿಗ್ ಬಾಸ್ ಸೀಸನ್ 12ರಲ್ಲಿ ತಮ್ಮ ನೇರ ಮಾತು ಹಾಗೂ ಮನರಂಜನೆಯಿಂದ ಮೋಡಿ ಮಾಡುತ್ತಿರುವ ಬೆಡಗಿ ರಕ್ಷಿತಾ ಶೆಟ್ಟಿ. ತಮಗೆ ತಪ್ಪು ಎಂದು ಅನಿಸಿದಾಗ ತಮ್ಮ ನೇರ ಮಾತಿನಿಂದ ಎದುರಿಗಿದ್ದವರ ಬೆವರು ಇಳಿಯುವಂತೆ ಮಾತನಾಡೋ ಸ್ಪರ್ಧಿ ರಕ್ಷಿತಾ.
26
ಸಿಂಪಲ್ ಲುಕ್
ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಹೆಚ್ಚಿನವರು ಎಲ್ಲರೂ ನಟ-ನಟಿಯರೇ ಆಗಿದ್ದಾರೆ. ಇವರ ಮಧ್ಯ ರಕ್ಷಿತಾ ಯಾವಾಗ್ಲೂ ಸಿಂಪಲ್ ಆಗಿದ್ದುಕೊಂಡು, ತಮಗೂ ಮೇಕಪ್ ಗೂ ಸಂಬಂಧವೇ ಇಲ್ಲ ಎನ್ನುವಂತೆ ಇರುತ್ತಾರೆ. ಇವರ ಸಿಂಪಲ್ ಲುಕ್ ನ್ನು ಜನ ಇಷ್ಟಪಟ್ಟಿದ್ದಾರೆ.
36
AI Photos ವೈರಲ್
ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತಾ ಶೆಟ್ಟಿ AI Photos ವೈರಲ್ ಆಗುತ್ತಿದೆ. ಜೀನ್ಸ್ ಟೀ ಶರ್ಟ್ ಹಾಕಿ ಸ್ಟೈಲಿಶ್ ಲುಕ್ ನೀಡುತ್ತಿರುವ ರಕ್ಷಿತಾ ಫೋಟೊಗಳು ತುಂಬಾನೆ ಮುದ್ದಾಗಿದ್ದು, ಅಭಿಮಾನಿಗಳು ಈ ಫೋಟೊಗಳನ್ನು ಇಷ್ಟಪಟ್ಟಿದ್ದಾರೆ.
ರಕ್ಷಿತಾ ಶೆಟ್ಟಿ ಅಭಿಮಾನಿಗಳ ಪಾಲಿಗೆ ಟಗರು ಪುಟ್ಟಿ. ಯಾಕಂದ್ರೆ ಅಶ್ವಿನಿ ಗೌಡರಂತಹ ಜನಪ್ರಿಯ ಜೊತೆಗೆ ಸ್ಟ್ರಾಂಗ್ ಕಂಟೆಸ್ಟಂಟ್ ಗಳ ಜೊತೆಗೆ ಯುದ್ಧ ಮಾಡೋದಕ್ಕೂ ರೆಡೀಯಾಗಿರುವ ಸ್ಪರ್ಧಿ. ಆಕೆಯ ನೇರ ಮಾತನ್ನು ನೋಡಿಯೇ ಜನ ಟಗರು ಪುಟ್ಟಿ ಎನ್ನುತ್ತಿದ್ದಾರೆ.
56
ಯಾರು ಈ ರಕ್ಷಿತಾ ಶೆಟ್ಟಿ
ರಕ್ಷಿತಾ ಶೆಟ್ಟಿ ಮೂಲತಃ ಉಡುಪಿಯ ಆದರೆ ಮುಂಬೈನಲ್ಲಿ ಹುಟ್ಟಿ ಬೆಳೆದಂತಹ ಹುಡುಗಿ. ಮೂಲತಃ ಕನ್ನಡದವರು ಆಗಿರುವ ಕಾರಣ ಕನ್ನಡದಲ್ಲಿ ವ್ಲಾಗ್ ಮಾಡಲು ಶುರು ಮಾಡುವ ಮೂಲಕ ಜನಪ್ರಿಯತೆ ಗಳಿಸಿದ ಜೊತೆಗೆ, ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದವರು ರಕ್ಷಿತಾ ಶೆಟ್ಟಿ.
66
ಅವಮಾನದಿಂದ ಬಹುಮಾನ
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಗೆ ಬರುವಲ್ಲಿವರೆಗೂ ರಕ್ಷಿತಾ ಶೆಟ್ಟಿಯನ್ನು ತೆಗಳುವವರೇ ಇದ್ದಿದ್ದು, ಇವಳನ್ಯಾಕೆ ಬಿಗ್ ಬಾಸ್ ಗೆ ಕರೆದದ್ದು ಎನ್ನುವ ಪ್ರಶ್ನೆಗಳೇ ಕೇಳಿ ಬರುತ್ತಿತ್ತು. ಆದರೆ ಬಂದ ಮೇಲೆ ಆಕೆಯ ಮಾತು, ನಡೆ, ಸ್ಪರ್ಧಾತ್ಮಕ ಆಟ ನೋಡಿ ಹೆಚ್ಚು ಹೆಚ್ಚು ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.