Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇದೀಗ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ. ಬಂಗಾರಮ್ಮನ ಮರಣದ ಬಳಿಕ ಪುಟ್ಟಕ್ಕನ ನಿಲುವೆ ಬದಲಾಗಿದೆ. ಇಲ್ಲಿವರೆಗೂ ಸಾಧುವಾಗಿದ್ದ ಪುಟ್ಟಕ್ಕ ಇದೀಗ ಕೈಯಲ್ಲಿ ಕತ್ತಿ ಹಿಡಿದು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.
ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಇನ್ನೇನು ಮುಗಿಯಲಿದೆ ಎಂದು ಒಂದು ಕಡೆ ಹೇಳುತ್ತಿದ್ದರೆ, ಇನ್ನೊಂದು ಕಡೆ ಧಾರಾವಾಹಿಯಲ್ಲಿ ಹೊಸ ಹೊಸ ಟ್ವಿಸ್ಟ್ ಗಳು ಸಿಗುತ್ತಾ ಹೋಗುತ್ತಿವೆ. ಈಗಷ್ಟೇ ಬಂಗಾರಮ್ಮ ಸಾವನ್ನಪ್ಪಿ ದೊಡ್ಡ ಟ್ವಿಸ್ಟ್ ತಂದಿದ್ದರು. ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
27
ಪುಟ್ಟಕ್ಕನ ಹೊಸ ಅವತಾರ
ಹೌದು, ಇದೀಗ ಪುಟ್ಟಕ್ಕ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಟ್ಟಕ್ಕನ ಈ ಘೋರ ಅವತಾರ ನೋಡಿ, ಗಂಡ, ಮಕ್ಕಳು ಮಾತ್ರವಲ್ಲ ವೀಕ್ಷಕರು ಸಹ ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಪುಟ್ಟಕ್ಕನ ಏನು ಮಾಡಿದ್ದಾರೆ.
37
ಬಂಗಾರಮ್ಮನ ಸಾವಿಗೆ ಸೇಡು
ಪುಟ್ಟಕ್ಕ ತನ್ನ ಜೀವದ ಗೆಳತಿ ಬಂಗಾರಮ್ಮನ ಸಾವಿಗೆ ಸೇಡು ತೀರಿಸಲು ಹೊರಟು ನಿಂತಿದ್ದಾಳೆ. ಹರಿತವಾದ ಕತ್ತಿಯನ್ನು ಹಿಡಿದುಕೊಂಡು ಶತ್ರುಗಳ ನಾಶಕ್ಕೆ ಹೊರಟಿದ್ದು, ಪುಟ್ಟಕ್ಕನನ್ನು ಹುಡುಕಿಕೊಂಡು ಮನೆಮಂದಿ ಕೂಡ ಹೊರಟಿದ್ದಾರೆ.
ಪುಟ್ಟಕ್ಕ ಎಲ್ಲೂ ಕಾಣಿಸ್ತಿಲ್ಲ ಎಂದು ಮನೆಮಂದಿ ಗಾಬರಿಯಾಗಿದ್ದಾರೆ. ಪೊಲೀಸ್ ಸ್ಟೇಷನ್ ಗೆ ಬರೋದಕ್ಕೂ ಮನೆಮಂದಿಗೆ ಕರೆಬಂದಿದೆ. ಪೊಲೀಸ್ ಟೇಬಲ್ ಮೇಲೆ ರಕ್ತ ಸಿಕ್ತವಾದ ಕತ್ತಿ ಇದೆ. ಇದನ್ನ ನೋಡಿ ಪುಟ್ಟಕ್ಕನಿಗೆ ಏನು ಆಗಿದೆ ಎಂದು ಮನೆಯವರು ಗಾಬರಿಯಾಗಿದ್ದಾರೆ.
57
ಅಷ್ಟಕ್ಕೂ ಆಗಿದ್ದೇನು?
ಪುಟ್ಟಕ್ಕ ರಕ್ತಸಿಕ್ತವಾದ ಕತ್ತಿಯನ್ನು ಕೈಯಲ್ಲಿ ಹಿಡಿದು, ಪೊಲೀಸ್ ಸ್ಟೇಷನ್ ಗೆ ಬಂದು, ಘಟ ಘಟನೆ ನೀರು ಕುಡಿದಿದ್ದಾಳೆ. ಅಂದ್ರೆ ಪುಟ್ಟಕ್ಕನ ಕೈಯಿಂದ ಬಂಗಾರಮ್ಮನ ಕೊಲೆಗೆ ಕಾರಣವಾದವರ ಸಂಹಾರ ಆಗಿದೆ ಎಂದಾಯ್ತು. ಹಾಗಿದ್ರೆ ಪುಟ್ಟಕ್ಕ ಕೊಂದಿದ್ದು ಯಾರನ್ನು?
67
ಸಖತ್ ಇಂಟ್ರೆಸ್ಟಿಂಗ್ ಆಗಿದೆ ಕಥೆ
ಈಗಂತೂ ಪುಟ್ಟಕ್ಕನ ಮಕ್ಕಳು ಸಿರಿಯಲ್ ಕಥೆ ಸಖತ್ ಇಂಟ್ರೆಸ್ಟಿಂಗ್ ಆಗಿ ಬರುತ್ತಿದೆ. ಪುಟ್ಟಕ್ಕನ ಈ ಹೊಸ ಅವತಾರವನ್ನು ನೋಡಿ ಮನೆಮಂದಿ ಗಡ ಗಡ ನಡುಗಿದ್ದಂತೂ ನಿಜ, ಅಲ್ಲದೇ ವೀಕ್ಷಕರೂ ಸಹ ಪುಟ್ಟಕ್ಕನ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.
77
ಯಾವ ಪಾತ್ರಕ್ಕೂ ಸೈ
ನಟಿ ಉಮಾಶ್ರೀಯವರು (Umashree)ಅದ್ಭುತವಾದ ನಟಿಯಾಗಿದ್ದಾರೆ. ಇವರು ಯಾವ ಪಾತ್ರ ಕೊಟ್ಟರೂ ಮಾಡಲು ಸೈ ಅನ್ನೋದು ಎಲ್ಲರಿಗೂ ಗೊತ್ತಿದೆ. ಪುಟ್ಟಕ್ಕನಾಗಿ ಅಳುತ್ತಾ, ನಗುತ್ತಾ, ಜವಬ್ಧಾರಿಯನ್ನು ಹೊತ್ತ ಹೆಣ್ಣುಮಗಳಾಗಿಯೂ ಕಾಣಿಸಿಕೊಂಡ ಪುಟ್ಟಕ್ಕ, ಇದೀಗ ರೌದ್ರ ರೂಪದಲ್ಲಿ ಕಾಣಿಸಿಕೊಂಡಿದ್ದು ನೋಡಿ ವೀಕ್ಷಕರು ಉಮಾಶ್ರೀ ಮೇಡಂ ಎಲ್ಲಾದಕ್ಕೂ ಸೈ, ಬೆಸ್ಟ್ ನಟಿ ಎಂದಿದ್ದಾರೆ.