ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಬಂಗಾರಮ್ಮ ಪಾತ್ರಧಾರಿ ಮಂಜು ಭಾಷಿಣಿ, ಬಿಗ್‌ಬಾಸ್‌ಗಾಗಿ ಧಾರಾವಾಹಿಗೆ ವಿದಾಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ತಾವು ತೆಗೆದುಕೊಂಡಿರೋ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್‌ನ ಬಂಗಾರಮ್ಮ ಎಂದರೆ ಅದರ ಗತ್ತೇ ಬೇರೆ. ಈ ಪಾತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಮನೆ ಮಾತಾಗಿರೋ ನಟಿ ಮಂಜು ಭಾಷಿಣಿ. ಕೆಲವೇ ದಿನಗಳ ಹಿಂದೆ ಮಂಜು ಭಾಷಿಣಿ ಎಂದರೆ ಎಷ್ಟೋ ಮಂದಿಗೆ ಗೊತ್ತೇ ಆಗುತ್ತಿರಲಿಲ್ಲವೇನೋ. ಬಂಗಾರಮ್ಮ ಎಂದೇ ಫೇಮಸ್ ಆದವರು. ಆದರೆ ಇದೀಗ ಬಿಗ್ಬಾಸ್ (Bigg Boss)ನಿಂದ ಇವರ ಹೆಸರು ಎಲ್ಲರಿಗೂ ತಿಳಿಯುವ ಹಾಗೆ ಆಗಿದೆ.
27
ಸೀರಿಯಲ್ಗೆ ಗುಡ್ಬೈ
ಅಂದಹಾಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ಮಂಜು ಭಾಷಿಣಿ (Manju Bhashini) ಗುಡ್ಬೈ ಹೇಳಿದ್ದಾರೆ. ಈ ಮೂಲಕ ಸೀರಿಯಲ್ ಪ್ರೇಮಿಗಳಿಗೆ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಬಿಗ್ಬಾಸ್ ಎನ್ನುವುದು ಎಲ್ಲರಿಗೂ ತಿಳಿದದ್ದೇ.
37
ತುಂಬಾ ಹಿಂದೆ ಬಿಗ್ಬಾಸ್ ಆಫರ್
ಈ ಬಗ್ಗೆ ಸಂದರ್ಶನದಲ್ಲಿ ಮಂಜು ಭಾಷಿಣಿ ಹೇಳಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಅನ್ನು ನಾಲ್ಕು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ತುಂಬಾ ಹಿಂದೆಯೇ ಬಿಗ್ಬಾಸ್ ಆಫರ್ ಬಂದಿತ್ತು. ಆದರೆ ಎಲ್ಲೋ ಏನೋ ಸಿಗುತ್ತೆ ಎಂದು ಇನ್ನೇನನ್ನೋ ಕಳೆದುಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಸೀರಿಯಲ್ ಬಿಟ್ಟು ಹೋಗಿರಲಿಲ್ಲ ಎಂದಿದ್ದಾರೆ.
ಈಗ ಪುಟ್ಟಕ್ಕನ ಮಕ್ಕಳು ಮುಗಿಯತ್ತೆ ಎಂದು ಹೇಳಿದ್ರು. ಸೋ ಒಂದು ತಿಂಗಳು ಇರುವಾಗ ಸೀರಿಯಲ್ ಬಿಟ್ಟರೆ ಯಾರಿಗೂ ಸಮಸ್ಯೆ ಆಗಲ್ಲ ಹಾಗೂ ನನಗೂ ನಾನು ಮೋಸ ಮಾಡಿಲ್ಲ ಎನ್ನುವ ನೆಮ್ಮದಿ ಇರುತ್ತದೆ. ಅದಕ್ಕಾಗಿಯೇ ಈ ಬಗ್ಗೆ ಹೇಳಿಯೇ ಬಿಟ್ಟುಬಂದೆ ಎಂದಿದ್ದಾರೆ.
57
ಮೂರನೆ ವಾರದಲ್ಲಿ ಎಲಿಮಿನೇಟ್
ಇದೇ ವೇಳೆ ಅವರು,ಬಿಗ್‌ಬಾಸ್‌ಗಾಗಿ 2-3 ಲಕ್ಷ ರೂಪಾಯಿಗಳ ಬಟ್ಟೆ ಖರೀದಿ ಮಾಡಿರುವ ಬಗ್ಗೆ ಮಾತನಾಡಿದ್ದಾರೆ. ಆದರೆ ಮೂರು ವಾರದಲ್ಲಿಯೇ ಎಲಿಮಿನೇಟ್ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
67
ನಟಿಯ ಕುರಿತು...
ಮಂಜು ಭಾಷಿಣಿ ಕುರಿತು ಹೇಳುವುದಾದರೆ, ಇವರು 1997 ರಲ್ಲಿ ತೆರೆಕಂಡ ಪ್ರಶಸ್ತಿ ವಿಜೇತ ಚಿತ್ರ `ಭೂಮಿ ತಾಯಿ' ಮೂಲಕ ಜನಪ್ರಿಯರಾದರು. ಇವರು ಈ ಟಿವಿ ಕನ್ನಡದಲ್ಲಿ ಪ್ರಸಾರವಾದ `ಸಿಲ್ಲಿ ಲಲ್ಲಿ' ಧಾರವಾಹಿಯ ಸಮಾಜಸೇವಕಿ ಲಲಿತಾಂಬ ಪಾತ್ರದ ಮೂಲಕ ತುಂಬಾ ಪ್ರಸಿದ್ಧಿ ಪಡೆದರು.
77
ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ
ನಟಿ ಮಂಜು ಭಾಷಿಣಿ `ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿ'ಯನ್ನೂ ನಡೆಸುತ್ತಿದ್ದಾರೆ.