ಈಗ ಆದಿ, ಭಾಗ್ಯ ಕಣ್ಣು ನೋಡಿದಕೂಡಲೇ ಕಳೆದು ಹೋಗುತ್ತಿದ್ದಾನೆ. ಮುಂದೆ ಇವನೇ ಪ್ರೇಮ ನಿವೇದನೆ ಮಾಡಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.
ಅದರಲ್ಲಿ ಭಾಗ್ಯ ಹಾಗೂ ಆದೀಶ್ವರ್ ಕಾಮತ್ ಅವರು ರೊಮ್ಯಾಂಟಿಕ್ ಹಾಡಿನಲ್ಲಿ ಕುಣಿದಿದ್ದಾರೆ. ಅಂದರೆ ಇವರಿಬ್ಬರು ಮದುವೆ ಆಗಲಿದ್ದಾರೆ ಎನ್ನುವ ಸೂಚನೆಯಿದು. ಹಾಗಾದರೆ ಇವರಿಬ್ಬರು ಮದುವೆ ಆಗ್ತಾರಾ? ಅಥವಾ ಭಾಗ್ಯ, ತಾಂಡವ್ ಮತ್ತೆ ಒಂದಾಗ್ತಾರಾ ಎಂದು ಕಾದು ನೋಡಬೇಕಿದೆ.
ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಆದಿ ಪಾತ್ರದಲ್ಲಿ ಹರೀಶ್ ರಾಜ್, ಭಾಗ್ಯ ಪಾತ್ರದಲ್ಲಿ ಸುಷ್ಮಾ ರಾವ್ ನಟಿಸುತ್ತಿದ್ದಾರೆ.