ಛೇ...Bigg Boss ಮನೆಯೊಳಗಡೆ ಬಾಯ್‌ಫ್ರೆಂಡ್‌ ಹಣೆಬರಹ ಗೊತ್ತಾಯ್ತು, ಅಲ್ಲೇ ಬ್ರೇಕಪ್‌ ಆಗೋಯ್ತು!

Published : Oct 23, 2025, 11:13 AM IST

Bigg Boss: ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಬಾರಿ ಪ್ರೀತಿ ಹುಟ್ಟತ್ತೆ, ಅಲ್ಲೇ ಸಾಯತ್ತೆ, ಇನ್ನೂ ಕೆಲವೊಮ್ಮೆ ಹೊರಗಡೆ ಹೋಗಿ ಅವರು ಮದುವೆಯಾಗಿ ಸುಂದರವಾಗಿ ಬದುಕಿರುವ ಉದಾಹರಣೆಯೂ ಇದೆ, ಡಿವೋರ್ಸ್‌ ಆಗಿದ್ದೂ ಇದೆ. ಅಲ್ಲೇ ಬ್ರೇಕಪ್‌ ಆದ ಸ್ಟೋರಿ ಇಲ್ಲಿದೆ.  

PREV
16
ರಶ್ಮಿ ದೇಸಾಯಿ, ಅರ್ಹಾನ್‌ ಖಾನ್‌ ಲವ್

ಬಿಗ್‌ ಬಾಸ್‌ 13 ಶೋನಲ್ಲಿ ನಟಿ ರಶ್ಮಿ ದೇಸಾಯಿ ಭಾಗವಹಿಸಿದ್ದರು. ಅವರ ಬಾಯ್‌ಫ್ರೆಂಡ್‌ ಅರ್ಹಾನ್ ಖಾನ್ ಕೂಡ ಅಲ್ಲಿಗೆ ಬಂದಿದ್ದರು. ಇವರಿಬ್ಬರು ಪ್ರೀತಿ ಮಾಡುತ್ತಿದ್ದರು. ಸಲ್ಮಾನ್ ಖಾನ್ ಅವರಿಗೆ ರಶ್ಮಿ ಪರಿಚಯ ಇತ್ತು, ಆದರೆ ರಶ್ಮಿ ಜೀವನ ಹಾಳಾಗಬಾರದು ಎಂದು ಅವರು ಅರ್ಹಾನ್‌ರ ನಿಜಬಣ್ಣವನ್ನು ಬಯಲು ಮಾಡಿದ್ದರು.

26
ರಶ್ಮಿಗೆ ವಿಷಯ ಗೊತ್ತಿಲ್ಲ

ಸಲ್ಮಾನ್‌ ಖಾನ್‌ ಅವರು ಮನೆಯಲ್ಲಿ ಯಾರು ಯಾರಿದ್ದಾರೆ ಎಂದು ಅರ್ಹಾನ್‌ಗೆ ಪ್ರಶ್ನೆ ಮಾಡಿದಾಗ ಅವರು ಸರಿಯಾದ ಉತ್ತರವನ್ನು ಕೊಡಲೇ ಇಲ್ಲ. ಅರ್ಹಾನ್‌ಗೆ ಮದುವೆಯಾಗಿರುವ ವಿಷಯ ತಿಳಿದಿದ್ದ ರಶ್ಮಿಗೆ ಮಗು ವಿಷಯ ಗೊತ್ತಿರಲಿಲ್ಲವಂತೆ

36
ರಶ್ಮಿ ಮನೆಯಲ್ಲಿದ್ದರು

ರಶ್ಮಿ ದೇಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ಅವರಿಗೆ ಗೊತ್ತಿಲ್ಲದೆ ಅರ್ಹಾನ್‌ ಇದ್ದರು ಎಂದು ಸಲ್ಮಾನ್‌ ಖಾನ್‌ ಅವರೇ ರಿವೀಲ್‌ ಮಾಡಿದ್ದರು. ಬಿಗ್ ಬಾಸ್ 13 ಮನೆಗೆ ಹೋಗುವಾಗ ಮನೆಯ ಕೀಯನ್ನು ರಶ್ಮಿ ಅವರು ಅರ್ಹಾನ್‌ಗೆ ಕೊಟ್ಟಿದ್ದರು.

46
ಸತ್ಯ ಹೇಳಿದರು

ಸಲ್ಮಾನ್‌ ಖಾನ್‌ ಅವರು ಕೂಗಾಡಿದಾಗ ಅರ್ಹಾನ್‌ ಅವರು ಮಗು ಇರುವ ವಿಷಯವನ್ನು ರಿವೀಲ್‌ ಮಾಡಿದ್ದಾರೆ. "ಯಾವುದೇ ವೇದಿಕೆಯಿರಲೀ, ರಶ್ಮಿ ಸಿಕ್ಕಾಗ ಸಲ್ಮಾನ್‌ ಖಾನ ಅವರು ಕೀ ವಿಷಯ ಇಟ್ಟುಕೊಂಡು ಕಾಮಿಡಿ ಮಾಡ್ತಾರೆ. ಮೂರು ವರ್ಷ ನಾನು, ರಶ್ಮಿ ಒಟ್ಟಿಗೆ ಇದ್ದೆವು, ನನ್ನ ಫೋನ್‌ನ್ನು ಯಾವಾಗ ಬೇಕಿದ್ರೂ ನೋಡಬಹುದು” ಎಂದು ಅರ್ಹಾನ್‌ ಹೇಳಿದ್ದಾರೆ. ಅರ್ಹಾನ್ ಅವರು 2014ರಲ್ಲಿ ಮದುವೆಯಾದರು. ಮದುವೆಯಾಗಿ ಒಂದು ವರ್ಷದೊಳಗಡೆ ಬೇರೆ ಬೇರೆಯಾದರು ಎಂದು ಅವರು ಹೇಳಿದ್ದಾರೆ.

56
ರೇಟಿಂಗ್‌ಗೋಸ್ಕರ ಮಾತಾಡ್ತೀರಾ?

ಅರ್ಹಾನ್ ಖಾನ್ ಅವರು ಬಿಗ್ ಬಾಸ್ ನಿರ್ಮಾಪಕರು ಟಿಆರ್‌ಪಿಗಾಗಿ 'ಕೀ' ವಿಷಯವನ್ನು ಬಳಸುತ್ತಾರೆ, ನನಗೂ ಕೂಡ ಒಂದು ಕುಟುಂಬವಿದೆ ಎನ್ನೋದು ಮರೆತು ಹೋಗತ್ತಾ? ನಾನು ಪಾಸ್ಟ್‌ ಲೈಫ್‌ನಿಂದ ಹೊರಗಡೆ ಬಂದಿದೀನಿ, ಆದರೆ ಜನರು ಹಾಗೆ ಇದ್ದಾರೆ, ರೇಟಿಂಗ್‌ಗೋಸ್ಕರ ಇದೆಲ್ಲ ಮಾತನಾಡಬೇಕಾ? ನನ್ನ ಕುಟುಂಬ ಕೂಡ ಟಿವಿ ನೋಡುತ್ತದೆ. ಇನ್ನೆಷ್ಟು ದಿನ ಈ ವಿಷಯವನ್ನು ಎಳೆಯುತ್ತೀರಾ?” ಎಂದು ಅರ್ಹಾನ್‌ ಅವರು ಪ್ರಶ್ನೆ ಮಾಡಿದ್ದರು.

66
ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದೆವು

“ನಾನು, ರಶ್ಮಿ ಒಂದೂವರೆ ವರ್ಷ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದೆವು. ಬಿಗ್ ಬಾಸ್‌ನಲ್ಲಿ ನಾವು ಇದ್ದೆವು. ನಮ್ಮ ಸಂಬಂಧದ ಕೊನೆಯ 3 ತಿಂಗಳುಗಳು ಇಷ್ಟು ಕೆಟ್ಟದಾಗಿರುತ್ತವೆ ಅಂತ ಅಂದುಕೊಂಡಿರಲಿಲ್ಲ. ನನಗೆ ಮಗು ಇರೋ ವಿಷಯ ಅವಳಿಗೆ ಗೊತ್ತಿದ್ದರೂ ಕೂಡ ಅವಳು ಗೊತ್ತಿಲ್ಲ ಎಂದು ಸುಳ್ಳು ಹೇಳಿದ್ದಳು. ಬಿಗ್ ಬಾಸ್ ಶೋ ಮುಗಿದ್ಮೇಲೆ ನಾನು ಅವಳನ್ನು ಕಾಂಟ್ಯಾಕ್ಟ್‌ ಮಾಡಿದರೂ ಕೂಡ ಸಿಕ್ಕಿರಲಿಲ್ಲ. ರಶ್ಮಿಗೆ ನನ್ನ ಪ್ರಶ್ನೆಗೆ ಉತ್ತರ ಕೊಡೋಕೆ ಆಗೋದಿಲ್ಲ” ಎಂದು ಅರ್ಹಾನ್‌ ಹೇಳಿದ್ದರು.

Read more Photos on
click me!

Recommended Stories