BBK 13: ಹೊಲಸು ಮಾತುಗಳಿಂದ ಹೋಗಿದ್ದ ಮಂಜ, ಮನೆಯೊಳಗೆ ಬರ್ತಿದ್ದಂತೆ ಗಲೀಜು ಮಾಡಿದ!

Published : Nov 09, 2026, 08:36 AM IST

ತಮ್ಮ ಅತಿರೇಕದ ವರ್ತನೆಯಿಂದ ಮನೆಯಿಂದ ಹೊರಗೆ ಹೋಗಿದ್ದ ಸ್ಪರ್ಧಿ ಮಾಡರ್ನ್ ಮಹಾಕವಿ ಮಂಜುನಾಥ್ ಬಿಗ್‌ಬಾಸ್‌ಗೆ ಮತ್ತೆ ಆಗಮಿಸಿದ್ದಾರೆ. ವೇದಿಕೆ ಮೇಲೆ ಮಂಜು ಅವರನ್ನು ಕರೆಸಿ ಮಂಜುನಾಥ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

PREV
15
ಹೊಲಸು ಮಾತುಗಳು ಮತ್ತು ಅತಿರೇಕದ ವರ್ತನೆ

ಸೀಸನ್ 13ರ ಸ್ಪರ್ಧಿ ಸ್ವಯಂಘೋಷಿತ ಮಾಡರ್ನ್ ಮಹಾಕವಿ ಮಂಜುನಾಥ್ ಮತ್ತೊಮ್ಮೆ ಬಿಗ್‌ಬಾಸ್‌ಗೆ ಬಂದಿದ್ದಾರೆ. ತಮ್ಮ ಹೊಲಸು ಮಾತುಗಳು ಮತ್ತು ಅತಿರೇಕದ ವರ್ತನೆಯಿಂದಲೇ ಮಂಜುನಾಥ್ ಗೇಟ್ ಪಾಸ್ ಆಗಿದ್ದರು. ಇದೀಗ ಎರಡನೇ ಅವಕಾಶ ಪಡೆದುಕೊಂಡಿರುವ ಮಂಜುನಾಥ್, ಬರುತ್ತಿದ್ದಂತೆ ಮನೆಯಲ್ಲಿ ಗಲೀಜು ಪಸರಿಸಿದ್ದಾರೆ.

25
ಎರಡು ಕಸದ ಬ್ಯಾಗ್ ಜೊತೆ ಬಂದ ಮಂಜ

ಹೌದು. ಮನೆಯೊಳಗೆ ಎರಡು ಕಸದ ಬ್ಯಾಗ್ ಜೊತೆ ಬಂದ ಮಂಜುನಾಥ್, ತಮ್ಮ ಶೈಲಿಯಲ್ಲಿ ಪ್ರಾಸಪದಗಳನ್ನು ಹೇಳುತ್ತಾ, ಸಾಧಕನಂತೆ ವರ್ತಿಸುತ್ತಿದ್ದಾರೆ. ತಾವು ತೆಗೆದುಕೊಂಡು ಬಂದ ಕಸದ ಜೊತೆ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಅಸ್ತವ್ಯಸ್ತ ಮಾಡಿದ್ದಾರೆ.

35
ಮನೆ ತುಂಬೆಲ್ಲಾ ಕಸ ಹಾಕಿರೋ ಮಂಜುನಾಥ್

ಎಲ್ಲಾ ಸ್ಪರ್ಧಿಗಳು ಮಲಗಿದ್ದ ಸಂದರ್ಭದಲ್ಲಿ ಮಂಜುನಾಥ್ ಎಂಟ್ರಿ ಆಗಿದೆ. ಮಂಜುನಾಥ್ ಮನೆ ತುಂಬೆಲ್ಲಾ ಕಸ ಹಾಕಿರೋದನ್ನು ನೋಡಿ ಜಗದೀಶ್ ಶಾಕ್ ಆಗಿದ್ದಾರೆ. ಹಾಗೆಯೇ ಅಸಿಯಾ ಅಚ್ಚರಿಗೊಂಡಿರೋದನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ.

45
ನೋಡುಗರಿಗೆ ಮುಜುಗರವನ್ನುಂಟು ಮಾಡಿದ್ದ ಮಹಾಕವಿ ಮಂಜ

ಈ ಹಿಂದೆ ಯಶಸ್ ಕೃಷ್ಣ ಜೊತೆಗಿನ ಜಗಳದ ವೇಳೆ ಮಂಜುನಾಥ್, ಅವಾಚ್ಯಪದಗಳನ್ನು ಬಳಕೆ ಮಾಡಿದ್ದರು. ಹಾಗೆಯೇ ತಮ್ಮ ವರ್ತನೆಯಿಂದ ಇಡೀ ಮನೆಯ ಸದಸ್ಯರು ಮತ್ತು ನೋಡುಗರಿಗೆ ಮುಜುಗರವನ್ನುಂಟು ಮಾಡಿದ್ದರು. ಯಶಸ್ ಮನೆಯ ಕ್ಯಾಪ್ಟನ್ ಆಗಿರೋ ಸಂದರ್ಭದಲ್ಲಿ ಮಂಜುನಾಥ್ ಬಂದಿರೋದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

55
ಸ್ವಯಂಘೋಷಿತ ಮಹಾಕವಿ

ಸ್ವಯಂಘೋಷಿತ ಮಹಾಕವಿಯ ಆಗಮನದಿಂದ ಮಂಜುನಾಥ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ಮುಂದೆ ಬಿಗ್‌ಬಾಸ್ ನೋಡುತ್ತವೆ. ಇನ್ಮುಂದೆ ಫುಲ್ ಧಗ ಧಗ ಎಂದು ಕಮೆಂಟ್ ಮಾಡಿದ್ದಾರೆ. ಹಾಗೆಯೇ ಮಂಜುನಾತ್ ಆಗಮನಕ್ಕೆ ಬೇಸರ ಹೊರ ಹಾಕಿರೋ ಬಿಗ್‌ಬಾಸ್ ವೀಕ್ಷಕರು, ಇದು ಸೀಸನ್ 13ರ ಅಸಹ್ಯವಾದ ಘಟನೆ. ಕಳಿಸಿ, ಕರೆಸುತ್ತಿರೋದು ಯಾಕೆ? ಇಷ್ಟುದೊಡ್ಡ ರಿಯಾಲಿಟಿ ಶೋ ಇಂತಹ ಕೆಟ್ಟ ಪರಿಸ್ಥಿತಿ ಬರಬಾರದಿತ್ತು ಎಂದು ಮರುಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories