ಬಿಗ್‌ಬಾಸ್ ಮನೆಯಿಂದ ಹೊರಹಾಕಲ್ಪಟ್ಟಿದ್ದ ಮಾಡರ್ನ್ ಮಹಾಕವಿ ಮಂಜುನಾಥ್ ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿರುವ ಅವರು, ಮನೆಯೊಳಗೆ ಪಟಾಕಿ ಸಿಡಿಸುವ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಅತಿರೇಕದ ವರ್ತನೆಯಿಂದ ಮನೆಯಿಂದ ಹೊರಗೆ ಹೋಗಿದ್ದ ಸ್ಪರ್ಧಿ ಮಾಡರ್ನ್ ಮಹಾಕವಿ ಮಂಜುನಾಥ್ ಬಿಗ್‌ಬಾಸ್‌ಗೆ ಮತ್ತೆ ಆಗಮಿಸಿದ್ದಾರೆ. ವೇದಿಕೆ ಮೇಲೆ ಮಂಜು ಅವರನ್ನು ಕರೆಸಿ ಮಂಜುನಾಥ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.
25
ಕಣ್ಣು ಸೀಸನ್ 13ರ ಕಪ್ ಮೇಲೆ
ವೇದಿಕೆ ಮೇಲೆ ಬರುತ್ತಿದ್ದಂತೆ ಮಾತನಾಡಿರುವ ಮಾಡರ್ನ್ ಮಹಾಕವಿ ಮಂಜು, ಮಾಡಿದ ತಪ್ಪಿಗೆ ಒಪ್ಪಿಗೆ ಇದೆ. ಈ ಕಣ್ಣು ಸೀಸನ್ 13ರ ಕಪ್ ಮೇಲಿದೆ. ದೀಪಾವಳಿ ಸಂದರ್ಭದಲ್ಲಿ ನನ್ನನ್ನು ಮನೆಯೊಳಗೆ ಕಳುಹಿಸುತ್ತಿದ್ದೀರಿ. ಪಟಾಕಿ ಎಲ್ಲಾ ರೆಡಿ ಮಾಡಿಟ್ಟುಕೊಂಡಿದ್ದಾರೆ. ಒಳಗೆ ಹೋಗುತ್ತಿದ್ದಂತೆ ಪಟಾಕಿ ಹಚ್ಚುತ್ತೇನೆ ಎಂದು ಹೇಳಿದ್ದಾರೆ.
35
ನನಗೇನು ಗೊತ್ತಿಲ್ಲಪ್ಪಾ
ಸುರಸುರ ಬತ್ತಿ ಆಡಿಸೋರಿಗೆಲ್ಲಾ ಸರ ಪಟಾಕಿ ಹಚ್ಚೋದಾಗಿ ಹೇಳಿರುವ ಮಾಡರ್ನ್ ಮಹಾಕವಿ ಮಂಜುನಾಥ್, ಮುಂದೆ ಎಲ್ಲವೂ ಸ್ಕೈಶಾಟ್ ರಾಕೆಟ್ ಪಟಾಕಿ ಹಚ್ಚೋದು ಎಂದು ಹೇಳಿದ್ದಾರೆ. ಈ ಮಾತುಗಳೆಲ್ಲವನ್ನು ಕೇಳಿಸಿಕೊಂಡ ಕಾರ್ಯಕ್ರಮದ ನಿರೂಪಕ ಸುದೀಪ್, ನನಗೇನು ಗೊತ್ತಿಲ್ಲಪ್ಪಾ ಎಂದು ನಕ್ಕಿದ್ದಾರೆ.
ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಬಿಗ್‌ಬಾಸ್ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮಂಜು ಹೋದ್ಮೇಲೆ ಯಶಸ್ ಕೃಷ್ಣ ಸೇರಿದಂತೆ ಬಹುತೇಕರು ಸಂಭ್ರಮಿಸಿದ್ದರು. ಸಿಹಿ ತಿಂದು ಸಂಭ್ರಮಿಸಿದ್ದ ಯಶಸ್‌ಗೆ ಇದು ಬಿಗ್ ಶಾಕ್. ಹಾಗೆಯೇ ಕಿರಣ್ ಶಾಸ್ತ್ರಿಗೂ ಶಾಕ್ ಆಗಲಿದ ಎಂದು ಕಮೆಂಟ್ ಮಾಡುತ್ತಿದ್ದಾರೆ.
55
ಎಂತ ಪರಿಸ್ಥಿತಿ ಬಂತು?
ಎಂತ ಪರಿಸ್ಥಿತಿ ಬಂತು ಮಾರಾಯ ಬಿಗ್ ಬಾಸ್‌ಗೆ. element ಆದ ಕಾಂಟೆಸ್ಟಂಟನ್ನ ವಾಪಸ್ ಎಂಟ್ರಿ ಮಾಡುತ್ತಿದ್ದಾರೆ. ಇದೊಂದು ಅತ್ಯಂತ ಕೆಟ್ಟ ಸೀಸನ್. ಕಳಿಸೋದು ಯಾಕೆ ಕರೆಸೋದು ಯಾಕೆ? ಇಸ್ಟೊಂದು ದರಿದ್ರ ಬಂತಾ ಬಿಗ್‌ಬಾಸ್‌ಗಾ ಎಂದು ಕೆಲವರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.