ಕೊನೆ ದಿನ ಶೂಟಿಂಗ್ ಮುಗಿಸಿದ ಅಮೃತಧಾರೆ ಸೀರಿಯಲ್; ಕ್ಲಿಯರ್ ಆಗಬೇಕಿದೆ ಎರಡು ವಿಷಯ!

Published : Nov 07, 2026, 12:17 PM IST

ಜೀ ಕನ್ನಡದ ಜನಪ್ರಿಯ 'ಅಮೃತಧಾರೆ' ಧಾರಾವಾಹಿಯ ಚಿತ್ರೀಕರಣ ಮುಕ್ತಾಯಗೊಂಡಿದೆ. ಶಕುಂತಲಾ ಮತ್ತು ಜೈದೇವ್ ಅಂತ್ಯ ಹಾಗೂ ಭೂಮಿಕಾ-ದೀಪಿಕಾ ರಹಸ್ಯದ ಬಗ್ಗೆ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿದೆ. ಈ ಧಾರಾವಾಹಿಯ ಜಾಗಕ್ಕೆ ಹೊಸದಾಗಿ 'ಗೌರಿಪುತ್ರ' ಬರಲಿದ್ದಾನೆ.

PREV
15
ಅಮೃತಧಾರೆ

ಕಳೆದ ನಾಲ್ಕು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಅಮೃತಧಾರೆ ಸೀರಯಲ್ ಕೊನೆಯ ದಿನದ ಶೂಟಿಂಗ್ ಮುಗಿಸಿದೆ. ಕೊನೆ ದಿನದ ಚಿತ್ರೀಕರಣ ವೇಳೆ ಕಲಾವಿದರು ಮತ್ತು ತಂತ್ರಜ್ಞರೆಲ್ಲರೂ ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

25
ಸುಳಿವು ನೀಡಿದ್ದ ಛಾಯಾ ಸಿಂಗ್

ಕಳೆದ ಒಂದು ವರ್ಷದಿಂದ ಅಮೃತಧಾರೆ ಧಾರಾವಾಹಿ ಮುಗಿಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದ್ರೆ ನಿರ್ದೇಶಕರು ಹೊಸ ಪಾತ್ರಗಳ ಜೊತೆಯಲ್ಲಿ ಕಥೆಗೆ ಹೊಸ ತಿರುವುಗಳನ್ನು ನೀಡುವ ಮೂಲಕ ಸೀರಿಯಲ್ ಮುಂದುವರಿಸಿಕೊಂಡು ಬಂದಿದ್ದರು. ಅಂತಿಮವಾಗಿ ಸೀರಿಯಲ್ ಮುಕ್ತಾಯವಾಗುತ್ತಿದೆ. ಇತ್ತೀಚೆಗೆಷ್ಟೇ ಜೀ ಕನ್ನಡದ ಕುಟುಂಬ ಅವಾರ್ಡ್‌ನಲ್ಲಿ ಸೀರಿಯಲ್ ಮುಗಿಯುತ್ತಿರೋದರ ಬಗ್ಗೆ ನಟಿ ಛಾಯಾ ಸಿಂಗ್ (ಭೂಮಿಕಾ) ಮಾಹಿತಿ ನೀಡಿದ್ದರು.

35
ಸೀರಿಯಲ್ ಅಂತ್ಯದ ಬಗ್ಗೆ ಕುತೂಹಲ!

ಅಮೃತಧಾರೆ ಸೀರಿಯಲ್‌ನಲ್ಲಿ ಎರಡು ಪ್ರಮುಖ ಘಟ್ಟಗಳು ಬಾಕಿ ಉಳಿದುಕೊಂಡಿದೆ. ವಿಲನ್‌ಗಳಾದ ಶಕುಂತಲಾ ಮತ್ತು ಜೈದೇವ್ ಅಂತ್ಯ ಹೇಗೆ ಆಗುತ್ತೆ ಹಾಗೂ ಭೂಮಿಕಾ-ದೀಪಿಕಾ ಅವಳಿ ರಹಸ್ಯ ಹೇಗೆ ರಿವೀಲ್ ಆಗುತ್ತೆ ಅನ್ನೋದರ ಬಗ್ಗೆ ಕುತೂಹಲ ಮೂಡಿದೆ. ಬದಲಾಗಿದ್ದೇನೆ ಎಂದು ಹೇಳಿದ್ದ ಶಕುಂತಲಾ ಮುಖವಾಡ ಗೌತಮ್ ಮುಂದೆ ಬಯಲಾಗಿದೆ.

45
ಗೌತಮ್ ಚಕ್ರವ್ಯೂಹದಲ್ಲಿ ಜೈದೇವ್

ಗೌತಮ್ ರಚಿಸಿರೋ ಚಕ್ರವ್ಯೂಹದಲ್ಲಿ ಜೈದೇವ್ ಸಿಲುಕಿದ್ದಾನೆ. ಭೂಮಿಕಾ ಬದುಕಿರೋ ವಿಷಯ ತಿಳಿಯದ ಜೈದೇವ್ ಮತ್ತು ಶಕುಂತಲಾ ಮುಂದಿನ ಪ್ಲಾನ್ ಬಗ್ಗೆ ಚರ್ಚಿಸಲು ತಾಯಿ-ಮಗ ಒಂದೆಡೆ ಸೇರುತ್ತಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರನ್ನು ಹಿಡಿಯುವ ಯೋಚನೆಯನ್ನು ಗೌತಮ್ ಮತ್ತು ಪಾರ್ಥ್ ಮಾಡಿದ್ದಾರೆ

55
ನಾಲ್ಕು ವರ್ಷ ಪ್ರಸಾರವಾದ ಅಮೃತಧಾರೆ

ಕಳೆದ ನಾಲ್ಕು ವರ್ಷಗಳಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಅಮೃತಧಾರೆ ಸೀರಿಯಲ್ ಪ್ರಸಾರವಾಗುತ್ತಿತ್ತು. ಹಲವು ಬಾರಿ ಭಾನುವಾರದಂದು ಸಹ ಸೀರಿಯಲ್ ಪ್ರಸಾರವಾಗಿತ್ತು. ಹಾಗೆಯೇ ಕೆಲವು ವಿಷಯಗಳಿಂದ ಧಾರಾವಾಹಿ ಹಲವು ಬಾರಿ ಟ್ರೋಲ್ ಆಗಿತ್ತು. ಅಮೃತಧಾರೆ ಜಾಗಕ್ಕೆ ಅಮ್ಮನಿಗೆ ತವರು ಕೊಡಿಸಲು ಗೌರಿಪುತ್ರ ಬರುತ್ತಿದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories