ಬಿಗ್‌ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಡುವೆ ತೀವ್ರ ಜಗಳ ನಡೆದಿದೆ. ಆಟದ ವೇಳೆ ರಜತ್ 'ಸುಳ್ಳಿ' ಎಂದಿದ್ದಕ್ಕೆ ಕೆರಳಿದ ಚೈತ್ರಾ, ಅವರ ಕುಟುಂಬದ ಬಗ್ಗೆ ಮಾತನಾಡಿದ್ದು, ಇದು ದೊಡ್ಡ ಮಾತಿನ ಚಕಮಕಿಗೆ ಕಾರಣವಾಯಿತು.
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಡುವೆ ಜಗಳದ ಕಿಡಿ ಹೊತ್ತಿಕೊಂಡಿದೆ. ಸೋಮವಾರ ಎಪಿಸೋಡ್‌ನಲ್ಲಿ ಚೈತ್ರಾ ಮತ್ತು ರಜತ್ ಜೊತೆಯಾಗಿ ಆಟವಾಡಿ ಅಶ್ವಿನಿ ಗೌಡ ಮತ್ತು ಸೂರಜ್ ಎದುರು ಸೋತಿದ್ದರು. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಚೈತ್ರಾ ಮತ್ತು ರಜತ್ ನಡುವೆ ಮಾತಿನ ಚಕಮಕಿ ಉಂಟಾಗಿದೆ.
25
ಸುಳ್ಳಿ
ಇಂದಿನ ಆಟದಲ್ಲಿ ರಜತ್ ಮತ್ತು ಚೈತ್ರಾ ಬೇರೆ ಬೇರೆ ತಂಡಗಳಲ್ಲಿ ಆಟವಾಡಿದ್ದಾರೆ. ಎರಡು ತಂಡಗಳು ತಮಗೆ ಮೀಸಲಾಗಿರುವ ಡ್ರಮ್‌ನಲ್ಲಿರುವ ನೀರನ್ನು ಎದುರಾಳಿಗಳಿಂದ ಉಳಿಸಿಕೊಳ್ಳಬೇಕು.
ಈ ಆಟದ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರನ್ನು ಸುಳ್ಳಿ ಎಂದು ರಜತ್ ಕರೆದಿದ್ದಾರೆ. ಇದಕ್ಕೆ ಅಲ್ಲೇ ತಿರುಗೇಟು ನೀಡಿರುವ ಚೈತ್ರಾ ಕುಂದಾಪುರ, ಸುಳ್ಳು ಅವರ ಕುಟುಂಬದ ವಿಳಾಸ ಎಂದು ಟಾಂಗ್ ನೀಡಿದ್ದಾರೆ.
35
ಯೋಗ್ಯತೆ
ಆಟವಾಡಲು ಯೋಗ್ಯತೆ ನಿನಗಿಲ್ಲ. ಕುಟುಂಬದ ವಿಷಯಕ್ಕೆ ಬರಬೇಡ ಎಂದು ರಜತ್ ಹೇಳಿದಾಗ ನನ್ನ ತಂಟೆಗೆ ನೀನು ಬರಬೇಡ ಎಂದು ಚೈತ್ರಾ ಎಚ್ಚರಿಕೆ ನೀಡಿದ್ದಾರೆ. ಗೇಮ್ ಆಡೋಕೆ ಬನ್ನಿ ಅಂತ ಎಲ್ಲರನ್ನೂ ಕರೀತಾನೆ. ಆಟಕ್ಕೆ ಬಂದ್ರೆ ಮಕಾಡೆ ಮಲಗ್ತಾನೆ. ಬಂದಾಗಿನಿಂದ ಒಂದು ಗೇಮ್ ಗೆಲ್ಲದೇ ಎಲ್ಲದನ್ನೂ ಸೋತಿದ್ದಾನೆ.
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಯಾರೂ ಸಹ ದೀರ್ಘಕಾಲ ಸ್ನೇಹಿತರಾಗಿ ಉಳಿಯುಲು ಸಾಧ್ಯವಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಸೋಮವಾರದ ಆಟದಲ್ಲಿ ಚೈತ್ರಾ ಕುಂದಾಪುರ ಹಲವು ಬಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಆಟವನ್ನು ಸೋಲಬೇಕಾಗಿತ್ತು. ಆಟದ ವೇಳೆ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ಪರಸ್ಪರ ಪರಚಿಕೊಂಡಿದ್ದರು. ಮನೆಯ ಕ್ಯಾಪ್ಟನ್ ರಾಶಿಕಾ ಮತ್ತು ಮನೆಯ ಸದಸ್ಯರ ಪ್ರಕಾರ ಚೈತ್ರಾ ಅವರದ್ದು ತಪ್ಪು ಎಂದು ತೀರ್ಮನಿಸಲಾಗಿತ್ತು.
ಇನ್ನು ರಜತ್ ಮತ್ತು ಚೈತ್ರಾ ನಡುವಿನ ಜಗಳ ನೋಡಿದ ವೀಕ್ಷಕರು, ಒಂಥರ ಚನ್ನಾಗಿದೆ. ಗಿಲ್ಲಿ ತಂಟೆಗೆ ಯಾರೂ ಬರಬೇಡಿ. ಚೈತ್ರ ಬಾಯಿ ಅಲ್ಲ ಬೊಂಬಾಯಿ ಏನಿದು ಕಿರುಚಾಟ. ಕೆಲವೊಂದು ಸಲ ನೋಡಕ್ಕೆ ಬೇಜಾರು ಅನಿಸುತ್ತೆ ಜಗಳ ಹೂಗಾಟ ಹೊಡೆದಾಟ ಆಡಿ ಬಿಗ್ ಬಾಸ್ ಗೆಲುವಲ್ಲ. ಕಾವ್ಯ ಸ್ಪಂದನ ತೂಕದ ವ್ಯಕ್ತಿಗಳು ಎಂದು ಕಮೆಂಟ್ ಮಾಡಿದ್ದಾರೆ.