Vaishnavi Koundinya traditional look: ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ವೈಷ್ಣವಿ ಅವರನ್ನು ನೋಡಿದ ಫ್ಯಾನ್ಸ್ ನಿಮ್ಮ ಲುಕ್ ಥೇಟ್ ಕನಕನವತಿ ಸ್ಟೈಲ್‌ನಂತೆಯೇ ಇದೆ ಅಂದಿದ್ದಾರೆ.
ನೀವೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರೆ ಕಳೆದ ಕೆಲವು ತಿಂಗಳುಗಳಿಂದ ಕಾಂತಾರ ಚಾಪ್ಟರ್ 1 ‘ಕನಕವತಿ’ಯ ಲುಕ್ ಎಲ್ಲೆಡೆ ಟ್ರೆಂಡ್ ಆಗಿರುವುದನ್ನ ಗಮನಿಸಿರುತ್ತೀರಿ.
28
ಆ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಬಯಕೆ
ಕಾಂತಾರ ಚಾಪ್ಟರ್ 1ನಲ್ಲಿ ಕನಕವತಿಯಾಗಿ ಕಾಣಿಸಿಕೊಂಡ ರುಕ್ಮಿಣಿ ವಸಂತ್ ಪಡ್ಡೆ ಹೈಕಳ ಮನಗೆದ್ದಿದ್ದರು. ಅಷ್ಟೇ ಏಕೆ ಆ ಚಿತ್ರದಿಂದ ನ್ಯಾಷನಲ್ ಕ್ರಶ್ ಆಗಿದ್ದರು. ಅಂದಿನಿಂದ ಪ್ರತಿಯೊಬ್ಬ ಹೆಣ್ಮಕ್ಕಳು ಆ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದಾರೆ.
38
ಕನಕವತಿಯಾಗಿ ಕಾಣಿಸಿಕೊಂಡಿದ್ದ ಸೋನು ಶ್ರೀನಿವಾಸ್ ಗೌಡ
ಬೇರೆ ರಾಜ್ಯಗಳಲ್ಲಿಯೂ ರಾಣಿ ಕನಕವತಿ ಗೆಟಪ್‌ನಲ್ಲಿ ಯುವತಿಯರು ಮಿಂಚಿದ್ದು, ಮೊನ್ನೆ ಮೊನ್ನೆಯಷ್ಟೇ ಸೋನು ಶ್ರೀನಿವಾಸ್ ಗೌಡ ಕೂಡ ಕನಕವತಿಯಾಗಿ ಕಾಣಿಸಿಕೊಂಡಿದ್ದರು.
ಇದೀಗ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ವೈಷ್ಣವಿ ಅವರನ್ನು ನೋಡಿದ ಫ್ಯಾನ್ಸ್ ನಿಮ್ಮ ಲುಕ್ ಥೇಟ್ ಕನಕನವತಿ ಸ್ಟೈಲ್‌ನಂತೆಯೇ ಇದೆ ಅಂದಿದ್ದಾರೆ. ವಿಡಿಯೋ ಕೂಡ ನೆಟ್ಟಿಗರ ಗಮನಸೆಳೆದಿದೆ.
58
‘ಕಾವ್ಯ’ ಆಗಿ ನಟನೆ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಮಿಥುನ ರಾಶಿ'ಯಲ್ಲಿ ನಾಯಕಿಯಾಗಿ ಮಿಂಚಿದ್ದ ವೈಷ್ಣವಿ ಕೌಂಡಿನ್ಯ, ಈಗ ‘ಕಾವ್ಯ’ ಆಗಿ ʻಪ್ರೇಮಕಾವ್ಯʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
68
ಸೋಶಿಯಲ್ ಮೀಡಿಯಾದಲ್ಲಿ ವೈರಲ್
'ಲವ್ ಯೂ ಮುದ್ದು' ಸಿನಿಮಾದ ಪ್ರೀಮಿಯರ್ ನಲ್ಲಿ ವೈಷ್ಣವಿ ಕೌಂಡಿನ್ಯ ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿ, ಹಾಟ್ ಆಗಿ ಕಾಣಿಸಿಕೊಂಡ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದೇ. ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
78
ವಿಡಿಯೋ ಸಿಕ್ಕಾಪಟ್ಟೆ ವೈರಲ್
ಯಾವಾಗಲೂ ಸಿಕ್ಕಾಪಟ್ಟೆ ಗ್ಲಾಮರ್ ಆಗಿ ಕಾಣಿಸುತ್ತಿದ್ದ ವೈಷ್ಣವಿ, ಈ ರೀತಿ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಂಡಿರುವುದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಜೊತೆಗೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
88
ಫ್ಯಾನ್ಸ್ ಕಾಮೆಂಟ್ಸ್ ಹೀಗಿದೆ...
*ಅಪ್ಸರೆ ನೀವು, ಲವ್ ಯು ಸೋ ಮಚ್.. *ನೀವು ನಿಜಕ್ಕೂ ಸುಂದರಿ. ನೆಗೆಟಿವ್ ಕಾಮೆಂಟ್ಸ್‌ಗೆ ತಲೆಕೆಡಿಸಿಕೊಳ್ಳಬೇಡಿ. *ಅಕ್ಕ ಬೇಗ ಮದ್ವೆ ಆಗಿಬಿಡಿ...ಅಂತೆಲ್ಲಾ ಕಾಮೆಂಟ್ಸ್ ಮಾಡಿದ್ದು, ಫೈಯರ್, ಹಾರ್ಟ್ ಇಮೋಜಿ ಹಾಕಿರುವುದು ಕಾಮೆಂಟ್ಸ್ ಸೆಕ್ಷನ್‌ನಲ್ಲಿ ನೋಡಬಹುದು.