BBK 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಧ್ರುವಂತ್, ರಕ್ಷಿತಾ ಶೆಟ್ಟಿ ಮಧ್ಯೆ ಮೊದಲಿನಿಂದಲೂ ಜಗಳ ಆಗುತ್ತಲೇ ಇದೆ. ಈಗ ಸೀಕ್ರೆಟ್ ರೂಮ್‌ನಲ್ಲಿ ಇವರು ಕಿತ್ತಾಡುತ್ತಲೇ ಇದ್ದಾರೆ. ಇವರು ಸೀಕ್ರೆಟ್ ರೂಮ್‌ಗೆ ಹೋಗಿದ್ದು ಯಾಕೆ? ಇನ್ನು ಬಿಗ್ ಬಾಸ್‌ಗೆ ಧರ್ಮ ಸಂಕಟ ಆಗಿದ್ದು ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಎಲ್ಲರೂ ಒಂದು, ಧ್ರುವಂತ್ ಮಾತ್ರ ಒಂದು ಎನ್ನುವಂತೆ ಆಗಿತ್ತು. ಅಶ್ವಿನಿ ಗೌಡ ಅವರಿಂದ ಗಿಲ್ಲಿ ನಟ, ರಜತ್‌ವರೆಗೆ ಎಲ್ಲರ ಜೊತೆ ಧ್ರುವಂತ್ ಮನಸ್ತಾಪ ಇತ್ತು. ಇವರನ್ನು ಕಂಡರೆ ಯಾರಿಗೂ ಆಗುತ್ತಿರಲಿಲ್ಲ. ಧ್ರುವಂತ್ ಹೊರಗಡೆ ಹೋದ್ಮೇಲೆ ಅಲ್ಲಿದ್ದವರಿಗೆ ಯಾರಿಗೂ ವ್ಯತ್ಯಾಸವೇ ಆಗಿಲ್ಲ ಎಂದರೆ ಅವರು ದೊಡ್ಮನೆಯೊಳಗಡೆ ಹೇಗಿದ್ದರು ಎನ್ನೋದು ವ್ಯಕ್ತವಾಗಿದೆ.
26
ಮನೆಯವರಿಗೂ ಧ್ರುವಂತ್‌ಗೂ ಆಗೋದಿಲ್ಲ
ಅಶ್ವಿನಿ ಗೌಡ ಜೊತೆ ಧ್ರುವಂತ್ ಯಾವಾಗ ಚೆನ್ನಾಗಿ ಇರುತ್ತಾರೆ? ಇರೋದಿಲ್ಲ ಎಂದು ವೀಕ್ಷಕರಿಗೂ ಕೂಡ ಅರ್ಥವಾಗಿರಲಿಲ್ಲ. ಇದರ ಮಧ್ಯೆ ಎಲ್ಲರದ್ದು ನಾಟಕ, ನಾನು ಮಾತ್ರ ಸರಿ ಎಂದು ಧ್ರುವಂತ್ ಯಾವಾಗಲೂ ವಾದ ಮಾಡುತ್ತಾರೆ. ಇವರ ಮಧ್ಯೆ ನಾನು ಇರೋಕೆ ಆಗೋದಿಲ್ಲ, ನನ್ನ ಗೌರವ ಹಾಳು ಮಾಡಿಕೊಳ್ಳಲು ಇಷ್ಟಪಡೋದಿಲ್ಲ ಎಂದು ಹೇಳಿದ್ದರು.
36
ರಕ್ಷಿತಾ ಶೆಟ್ಟಿಯನ್ನು ಬೆಂಬಲಿಸುವವರಿದ್ದಾರೆ
ಇನ್ನು ರಕ್ಷಿತಾ ಶೆಟ್ಟಿ ಅವರು ಗಿಲ್ಲಿ ನಟ, ರಘು, ರಜತ್, ಮಾಳು ನಿಪನಾಳ ಜೊತೆ ಚೆನ್ನಾಗಿದ್ದರು, ಒಳ್ಳೆಯ ಬಾಂಧವ್ಯ ಸೃಷ್ಟಿ ಮಾಡಿಕೊಂಡಿದ್ದರು. ಅಂದಹಾಗೆ ಧನುಷ್ ಗೌಡ, ಸೂರಜ್ ಜೊತೆ ಕೂಡ ಆಗಾಗ ಸಮಯ ಕಳೆಯುತ್ತಿದ್ದರು. ಆದರೆ ಕಾವ್ಯ ಶೈವ, ಸ್ಪಂದನಾ ಸೋಮಣ್ಣಗೆ ರಕ್ಷಿತಾ ಅವರು ಫೇಕ್ ಎಂದು ಅನಿಸಿದ್ದುಂಟು.
ರಕ್ಷಿತಾ ಶೆಟ್ಟಿ ಹೇಳಿದ್ದು ಧ್ರುವಂತ್‌ಗೆ ಇಷ್ಟವೇ ಆಗೋದಿಲ್ಲ. ರಕ್ಷಿತಾಳನ್ನು ಬಿಗ್ ಬಾಸ್ ಮನೆಯ ಕೆಲವರು ಮಿಸ್ ಮಾಡಿಕೊಳ್ತಿರೋದು ಧ್ರುವಂತ್‌ಗೆ ಬೇಸರ ತಂದಿದೆ. ನಿನ್ನ ಜನರು, ನಿನ್ನಂಥವರೇ ನಿನ್ನನ್ನು ಮಿಸ್ ಮಾಡಿಕೊಳ್ತಿರೋದು ಎಂದು ಅವರು ಹೇಳಿದ್ದರು. ರಕ್ಷಿತಾ ಶೆಟ್ಟಿ ಫೇಕ್, ಕನ್ನಡ ಬಂದರೂ ಬರೋದಿಲ್ಲ ಎಂದು ನಾಟಕ ಮಾಡ್ತಾಳೆ ಎಂದು ಧ್ರುವಂತ್ ಸಾಕಷ್ಟು ಬಾರಿ ವಾದ ಮಾಡಿದ್ದುಂಟು. ಧ್ರುವಂತ್ ಕಂಡರೆ ರಕ್ಷಿತಾಗೆ ಇಷ್ಟ ಆಗೋದಿಲ್ಲ.
56
ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್, ರಕ್ಷಿತಾ ಶೆಟ್ಟಿ ಅವರು ಜಗಳ ಆಡಿಕೊಂಡಿದ್ದಾರೆ. ಧ್ರುವಂತ್ ಏನೇ ಹೇಳಿದರೂ ಕೂಡ ರಕ್ಷಿತಾ ಅವರು ಸಮಾಧಾನವಾಗಿ ಮಾತನಾಡಿರಲಿಲ್ಲ, ಅರ್ಥ ಮಾಡಿಕೊಳ್ಳದೆ, ಇನ್ನೇನೋ ಮಾತನಾಡಿದ್ದರು. ಮಾಳು, ರಜತ್, ಗಿಲ್ಲಿಗೆ ವರದಾನ ಆಗುವಂಥ ನಿರ್ಣಯಗಳನ್ನು ತಗೊಳ್ಳುತ್ತಿದ್ದರು. ಇದು ಧ್ರುವಂತ್‌ಗೆ ಇಷ್ಟವೇ ಆಗುತ್ತಿಲ್ಲ. ಇವರಿಬ್ಬರು ಸೀಕ್ರೆಟ್ ರೂಮ್‌ನೊಳಗಡೆ ಜಗಳ ಆಡುತ್ತಿದ್ದಾರೆ. ಆಮೇಲೆ ಧ್ರುವಂತ್ ಅವರೇ, “ನನಗೆ ಯಾಕೆ ನಮ್ಮಿಬ್ಬರನ್ನು ಸೀಕ್ರೆಟ್ ರೂಮ್‌ಗೆ ಹಾಕಿದ್ದೀರಿ ಎಂದು ಅರ್ಥವಾಯ್ತು” ಎಂದಿದ್ದಾರೆ.
66
ಬಿಗ್ ಬಾಸ್ ಪರದಾಟ
ಬಿಗ್ ಬಾಸ್ ಮನೆಯೊಳಗಡೆ ಇರುವ ಸ್ಪರ್ಧಿಗಳ ಟಾಸ್ಕ್ ಕೂಡ ನಡೆಯುವುದು. ಇನ್ನು ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್, ರಕ್ಷಿತಾ ಮಾತುಕತೆ ನಡೆಯುವುದು. ರಕ್ಷಿತಾ, ಧ್ರುವಂತ್ ಅವರೇ ಅತಿ ಹೆಚ್ಚು ಕಂಟೆಂಟ್ ಕೊಡುತ್ತಿದ್ದಾರೆ, ಅತ್ತ ಮನೆಯಲ್ಲಿರುವ ಸ್ಪರ್ಧಿಗಳೇ ಶಾಂತಿ ನಿವಾಸದಂತೆ ಇದ್ದಾರೆ. ಹೀಗಾಗಿ ನಿತ್ಯವೂ ಪ್ರಸಾರ ಆಗುವ 1.5 ಗಂಟೆ ಎಪಿಸೋಡ್‌ನಲ್ಲಿ ಯಾವುದನ್ನು ತೋರಿಸಬೇಕು? ಯಾವುದನ್ನು ತೋರಿಸಬಾರದು ಎಂದು ಬಿಗ್ ಬಾಸ್‌ಗೆ ತಲೆಬಿಸಿ ಆಗುವುದಂತೂ ಪಕ್ಕಾ!