ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೂರಜ್ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಾಗಿನಿಂದ, ರಾಶಿಕಾ ಶೆಟ್ಟಿ ಅವರ ಜೊತೆಯೇ ಇದ್ದಾರೆ. ಇವರಿಬ್ಬರು ಒಟ್ಟಿಗೆ ಇರೋದು ನೋಡಿ, ಸ್ಪರ್ಧಿಗಳು ಕೂಡ ರೇಗಿಸುತ್ತಿದ್ದಾರೆ, ಇದರಿಂದ ಸೂರಜ್ ಆಟ ಹಾಳಾಗ್ತಿದೆ ಎಂದು ವೀಕ್ಷಕರು ಕೂಡ ಅಭಿಪ್ರಾಯ ಪಟ್ಟಿದ್ದಾರೆ.
ರಾಶಿಕಾ ಶೆಟ್ಟಿ ಹಾಗೂ ಸೂರಜ್ ಸಿಕ್ಕಾಪಟ್ಟೆ ಮಾತನಾಡಿರೋದರ ಬಗ್ಗೆಯೂ ಮನೆಯವರು ಮಾತನಾಡಿದ್ದರು. ಕೆಲ ಕಾಲ ಈ ಜೋಡಿ ಗೊಂದಲದಿಂದ ಸ್ವಲ್ಪ ದೂರ ಇತ್ತು. ಆಮೇಲೆ ರಾಶಿಕಾ ಶೆಟ್ಟಿ ಅವರೇ ಸೂರಜ್ ಬಳಿ ಬಂದು, “ಯಾರಾದರೂ ಏನಾದರೂ ಹೇಳ್ತಾರಾ ಅಂತ ತಲೆ ಕೆಡಿಸಿಕೊಳ್ಳಬೇಡ, ನೀನು ನನ್ನ ಜೊತೆ ಮಾತಾಡು, ನಾನು ಏನೂ ಅಂದುಕೊಳ್ಳಲ್ಲ” ಎಂದು ಹೇಳಿದ್ದಾರೆ. ಆಮೇಲೆ ಮತ್ತೆ ಇವರಿಬ್ಬರು ಮಾತನಾಡಿದ್ದಾರೆ.
25
ರಾಶಿಕಾ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರು ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಮಾತನಾಡಿ, “ರಾಶಿಕಾ ಶೆಟ್ಟಿ ಅವರು ಈ ವಾರ ಚೆನ್ನಾಗಿದ್ದಾರೆ ಅಂತ ಕಾಣಿಸ್ತಿದೆ” ಎಂದು ಹೇಳಿದ್ದಾರೆ. ರಾಶಿಕಾ ಶೆಟ್ಟಿ ಹಾಗೂ ಸೂರಜ್ ಅವರು ಒಟ್ಟಿಗೆ ಸಮಯ ಕಳೆದಿರೋದನ್ನು ಸುದೀಪ್ ಅವರು ಕಾಲೆಳೆದಿದ್ದರು.
35
ನೀವು ಬಂದ್ಮೇಲೆ ಇಬ್ಬರು ಆಟ ಆಡಿಲ್ಲ
“ಸೂರಜ್ ಅವರು ಸ್ವಿಮ್ಮಿಂಗ್ ಫೂಲ್‌ನಲ್ಲಿ ಶರ್ಟ್ ಬಿಚ್ಚಿದಕೂಡಲೇ ಇಬ್ಬರು ಆಟ ಆಡೋದನ್ನು ಬಿಟ್ಟಿದ್ದಾರೆ. ನಿಮ್ಮ ಬಾಡಿ ನೋಡಿದವರು ಇಡೀ ವಾರ ಆಟವನ್ನೇ ಆಡಿಲ್ಲ, ನಿಮ್ಮನ್ನು ನೋಡ್ತಿರೋದು ಕ್ಯಾಮರಾ ಮುಂದೆ ಸೆರೆಯಾಗಿದೆ. ನೀವು ಅಲ್ಲೇ ಇರ್ತೀರಾ, ಆದಷ್ಟು ಬೇಗ ಅವರು ಹೊರಗಡೆ ಹೋಗ್ತಾರೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಅಭಿಷೇಕ್ ಶ್ರೀಕಾಂತ್ ಅವರು ಶರ್ಟ್ ಬಿಚ್ಚಿದರೂ ಕೂಡ, ಯಾರು ಅವರನ್ನು ನೋಡಲಿಲ್ಲ. ಹಾಸಿಗೆ ಮೇಲೆ ಏನೇನು ಮಾತುಕತೆ ಆಗತ್ತೆ ಎಂದು ನಿಮಗೆ ಗೊತ್ತಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
55
ಕಳೆದು ಹೋಗಿರೋ ಸೂರಜ್
ಈ ಮೂಲಕ ಕಿಚ್ಚ ಸುದೀಪ್ ಅವರು ರಾಶಿಕಾ ಶೆಟ್ಟಿ ಆದಷ್ಟು ಬೇಗ ಹೊರಗಡೆ ಬರ್ತಾರೆ ಎಂದು ಸುಳಿವು ನೀಡಿದಂತಿದೆ. ಅಂದಹಾಗೆ ರಾಶಿಕಾ ಶೆಟ್ಟಿ ಜೊತೆಗೆ ಸೇರಿ ಸೂರಜ್ ಕಳೆದುಹೋಗಿದ್ದಾರೆ, ನೀವು ನಿಮ್ಮ ಆಟವನ್ನು ಮರೆತಿದ್ದೀರಾ ಎಂದು ಕಾದು ನೋಡಬೇಕಿದೆ.