ಕಾಕ್ರೋಚ್ ಸುಧಿ ಅವರು, “ಮಲ್ಲಮ್ಮ ಮುಗ್ಧೆ ಇರಬಹುದು, ಆದರೆ ಒಳ್ಳೆಯ ಆಟಗಾರ್ತಿ. ನಾನು ಟಿಫನ್ ಮಾಡಲು ಚಮಚ ಬೇಕು ಎಂದರೆ ಧ್ರುವಂತ್‌ಗೆ ಯಾರೋ ಚಮಚ ಎಂದು ಅನಿಸುತ್ತದೆ. ಮಲ್ಲಮ್ಮ ಇಲ್ಲಿ ಇಲ್ಲ ಅಂದ್ರೆ, ಮಲ್ಲಮ್ಮ ಇಲ್ಲ, ನಾನು ಆಟ ಆಡಲ್ಲ, ಹೊರಗಡೆ ಹೋಗ್ತೀನಿ ಅಂತ ಹೇಳ್ತಾರೆ, ಧ್ರುವಂತ್ ಎಮೋಶನಲ್ ಡ್ರಾಮಾ ಅನಿಸ್ತಿದೆ, ನಾಟಕ ಅನಿಸ್ತಿದೆ. ಆಚೆ ಮಲ್ಲಮ್ಮ, ಧ್ರುವಂತ್ ಸಿಕ್ಕಿದ್ರೆ ಈ ರೇಂಜ್‌ಗೆ ಆಡ್ತಿರಲಿಲ್ಲ ಅನಿಸುತ್ತದೆ” ಎಂದು ಹೇಳಿದ್ದಾರೆ.