Amruthadhaare Kannada Tv Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಆ ಮಗುವನ್ನು ದತ್ತು ತಗೊಂಡಿರೋ ಸತ್ಯ ಭೂಮಿಗೆ ಗೊತ್ತಾಗಿದೆ. ರಾಜ ಎಲ್ಲಿದ್ದರೂ ರಾಜನೇ ಎಂದು ಗೌತಮ್‌ನನ್ನು ಮನಸಾರೆ ಹೊಗಳಿದ್ದಾಳೆ. ಈಗ ಅವಳು ಆ ಮಗುವನ್ನು ಕೇರ್ ಮಾಡುತ್ತಿದ್ದಾಳೆ.
ಮಗ ಆಕಾಶ್ ಬಳಿ, ಗೌತಮ್ ಮನೆಯಲ್ಲಿರುವ ಪುಟ್ಟ ಮಗುವನ್ನು ಕರೆದುಕೊಂಡು ಬಾ ಎಂದು ಭೂಮಿ ಹೇಳುತ್ತಾಳೆ. ಆಗ ಮಿಂಚು, ಭೂಮಿ ಮನೆಗೆ ಬರುತ್ತಾಳೆ. ಮಿಂಚುಗೆ ಭೂಮಿ ಒಂದಿಷ್ಟು ತಿಂಡಿ ಕೊಡುತ್ತಾಳೆ, ಮುದ್ದಾಗಿ ಮಾತನಾಡಿಸುತ್ತಾಳೆ. ಮಿಂಚು ಕೂಡ ಗೌತಮ್ ರೀತಿಗೆ ಹಣೆಗೆ ಬೊಟ್ಟು ಸರಿಯಾಗಿ ಇಟ್ಟುಕೋ ಎಂದು ಹೇಳುತ್ತಾಳೆ, ಗೌತಮ್ ಥರ ಹೈಜೀನ್ ಇರುತ್ತಾಳೆ, ಇದು ಭೂಮಿಗೆ ಗೌತಮ್ ನೆನಪು ತರಿಸುವುದು.
25
ನಿಮಗಿಬ್ಬರಿಗೂ ಪರಿಚಯ ಇದೆಯಾ?
ಅಷ್ಟೇ ಅಲ್ಲದೆ ಆಮೇಲೆ ಮನೆಗೆ ಬಂದ ಮಿಂಚುಗೆ ಗೌತಮ್ ಒಂದಿಷ್ಟು ಪ್ರಶ್ನೆಗಳನ್ನು ಕೂಡ ಕೇಳುತ್ತಾನೆ. ಆಗ ಅವಳು ಡೈರಿ ಬರೆಯೋ ಅಭ್ಯಾಸದ ಬಗ್ಗೆ ಮಾತನಾಡುತ್ತಾಳೆ. ಅವರು ಸೈಲೆಂಟ್ ಆದರು, ನೀವು ಸೈಲೆಂಟ್ ಆದಿರಿ, ನಿಮಗೆ ಮೊದಲಿನಿಂದಲೂ ಪರಿಚಯ ಇದೆಯಾ ಎಂದು ಪ್ರಶ್ನೆ ಮಾಡುತ್ತಾಳೆ.
35
ಇವಳು ನಿಜಕ್ಕೂ ಗೌತಮ್ ಮಗಳಾ?
ಗೌತಮ್ ಹೈಜೀನ್ ಇರೋಕೆ ಇಷ್ಟಪಡ್ತಾನೆ, ಈ ಗುಣ ಮಿಂಚುನಲ್ಲಿದೆ. ಭೂಮಿ ಥರ ಮಿಂಚು ಕೂಡ ಗ್ಲಾಸ್ ಹಾಕುತ್ತಾಳೆ. ಇವೆಲ್ಲದನ್ನು ನೋಡಿದರೆ ಮಿಂಚು, ಗೌತಮ್ ಮಗಳು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಆಗ ತಾನೇ ಭೂಮಿಗೆ ಮಗಳು ಹುಟ್ಟಿದ್ದಳು, ಆ ಮಗುವನ್ನು ಜಯದೇವ್ ಕಾಡಿನಲ್ಲಿ ಬಿಸಾಕಿದ್ದನು. ಮಕ್ಕಳ ಸಾಕಾಣಿಕೆಯಲ್ಲಿ, ಗೌತಮ್ ನಿಜವಾದ ಮಗಳು ಸಿಕ್ಕಿಹಾಕಿಕೊಂಡಿರಬಹುದು. ಆಮೇಲೆ ಅವಳೇ ಈಗ ಗೌತಮ್‌ಗೆ ಸಿಕ್ಕಿರಬಹುದು. ಈ ಸತ್ಯ ಯಾವಾಗ ಗೊತ್ತಾಗತ್ತೋ ಏನೋ!
ಗೌತಮ್ ಹಾಗೂ ಭೂಮಿಕಾ ದಿನದಿಂದ ದಿನಕ್ಕೆ ಹತ್ತಿರ ಆಗುತ್ತಿದ್ದಾರೆ. ಗೌತಮ್‌ನಿಂದ ಎಷ್ಟು ದೂರ ಇರಬೇಕೋ ಎಂದು ಭೂಮಿ ಅಂದುಕೊಂಡಿರುತ್ತಾಳೋ, ಅಷ್ಟು ಭೂಮಿ ಹತ್ತಿರ ಆಗುತ್ತಿದ್ದಾಳೆ. ಮಾನಸಿಕವಾಗಿ ಅವಳು ತನ್ನ ಕಂಟ್ರೋಲ್ ಕಳೆದುಕೊಳ್ಳುತ್ತಿದ್ದಾಳೆ.
55
ಮುಂದೆ ಏನಾಗುವುದು?
ಅಪ್ಪು, ಮಿಂಚು ಬಿಹೇವಿಯರ್ ನಿಜಕ್ಕೂ ಭೂಮಿ, ಗೌತಮ್‌ಗೆ ಖುಷಿ ಕೊಡುತ್ತಿದೆ. ಇದರಿಂದಲೇ ಇವರು ಹತ್ತಿರ ಆಗುವ ಸಾಧ್ಯತೆ ಜಾಸ್ತಿ ಇದೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಯಾವ ರೀತಿ ತಮ್ಮಿಬ್ಬರ ನಡುವಿನ ಗೊಂದಲವನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ ಎಂದು ಕಾದು ನೋಡಬೇಕಿದೆ.