ರಾಜಮಾತೆ ಅಶ್ವಿನಿ ಗೌಡಗೆ ಮುಳುವಾಗುತ್ತಾ ಎರಡು ಪದ? ಕ್ಲಾಸ್ ತೆಗೆದುಕೊಳ್ತಾರಾ ಸುದೀಪ್?

Published : Oct 09, 2025, 08:07 PM IST

Ashwini Gowda controversial comments: ಬಿಗ್‌ಬಾಸ್ ಮನೆಯಲ್ಲಿ ಆಟ ರಂಗೇರಿದ್ದು, ಅಶ್ವಿನಿ ಗೌಡ ಅವರ ಬಳಸಿದ ಎರಡು ಪದ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ವೀಕೆಂಡ್ ಪಂಚಾಯ್ತಿಯಲ್ಲಿ ಚರ್ಚೆಯಾಗಬೇಕೆಂದು ವೀಕ್ಷಕರು ಬಯಸುತ್ತಿದ್ದಾರೆ.

PREV
16
ಅಶ್ವಿನಿ ಗೌಡಗೆ ಇಲ್ಲ ಇಮ್ಯುನಿಟಿ

ಮನೆಯಲ್ಲಿರೋರು ಒಂಟಿಗಳು ಅರಸ ಮತ್ತು ಅರಸಿಯರು ಎಂದು ಬಿಗ್‌ಬಾಸ್ ಹೇಳಿದ್ದು, ಇದರಲ್ಲಿ ಅಶ್ವಿನಿ ಗೌಡ ರಾಜಮಾತೆಯಾಗಿ ಆಟವಾಡುತ್ತಿದ್ದಾರೆ. ರಾಜಮಾತೆಯ ಸಖಿಯಾಗಿ ನಿರೂಪಕಿ ಜಾನ್ವಿ ಬಿಗ್‌ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದ್ದಾರೆ. ನೇರವಾಗಿ ನಾಮಿನೇಟ್ ಆಗಿದ್ದರಿಂದ ಎರಡನೇ ಫೈನಲಿಸ್ಟ್ ಆದರೂ ಮನೆಯಿಂದ ಹೊರಗೆ ಹೋಗುವ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಅಶ್ವಿನಿ ಗೌಡ ಇದ್ದಾರೆ.

26
ಸಪ್ಪೆಯಾದ ಅಸುರನ ಪಾತ್ರಧಾರಿ ಕಾಕ್ರೋಚ್ ಸುಧಿ

ಬಿಗ್‌ಬಾಸ್ ಶೋ ಆರಂಭವಾದ ಎರಡನೇ ವಾರಕ್ಕೆ ಹಲವು ಕಾರಣಗಳಿಂದ ಸ್ಪರ್ಧಿಗಳು ಹೊರಗೆ ಹೋಗಿ ಎರಡನೇ ಬಾರಿ ಮನೆಯೊಳಗೆ ಬಂದಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ಆಟವಾಡುತ್ತಿದ್ದಾರೆ. ಈ ನಡುವೆ ಮನೆಯೊಳಗೆ ಅಸುರನಾಗಿ ಕಾಕ್ರೋಚ್ ಸುಧಿ ಆಯ್ಕೆಯಾಗಿದ್ರೂ ಇವರ ನಟನೆ ಪ್ರೇಕ್ಷಕರಿಗೆ ಬೇಸರವನ್ನುಂಟು ಮಾಡುತ್ತಿದೆ. ಅಸುರ ಹೇಗಿರಬೇಕೆಂದು ಬಿಗ್‌ಬಾಸ್ ವಿವರಣೆ ನೀಡಿದರೂ ಕಾಕ್ರೋಚ್ ಸುಧಿಗೆ ಅರ್ಥವಾದಂತೆ ಕಾಣಿಸುತ್ತಿಲ್ಲ.

36
ಅಗ್ರೆಸ್ಸಿವ್ ಆಟ ಶುರು

ಮೊದಲ ವಾರ ವೀಕೆಂಡ್‌ ಪಂಚಾಯ್ತಿಯಲ್ಲಿ ಸುದೀಪ್ ಅವರ ಮಾತುಗಳಿಂದ ಬೂಸ್ಟ್ ಪಡೆದುಕೊಂಡಿರುವ ಸ್ಪರ್ಧಿಗಳು ಅಲರ್ಟ್ ಆಗಿದ್ದು, ತಮ್ಮದೇ ಪ್ರತ್ಯೇಕ ಆಟವನ್ನಾರಂಭಿಸಿದ್ದಾರೆ. ಸೋಮವಾರ ಸಂಚಿಕೆಯಿಂದ ಅಶ್ವಿನಿ ಗೌಡ, ಮಂಜು ಭಾಷಿಣಿ ಮತ್ತು ಜಾನ್ವಿ ತುಂಬಾನೇ ಅಗ್ರೆಸ್ಸಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಗಳದ ಸಂದರ್ಭದಲ್ಲಿ ಅಶ್ವಿನಿ ಗೌಡ ಬಳಕೆ ಮಾಡಿದ ಎರಡು ಪದಗಳ ಬಗ್ಗೆ ಚರ್ಚೆ ಶುರುವಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಟಾಕ್ ನಡೆಯುತ್ತಿದೆ.

46
ಅಶ್ವಿನಿ ಗೌಡ ಬಳಕೆ ಮಾಡಿದ ಎರಡು ಪದಗಳು

1.ಫ್ರೀ ಪ್ರೊಡಕ್ಟ್: ನಟಿ ಕಾವ್ಯ ಶೈಬ ಅವರನ್ನು ಉದ್ದೇಶಿಸಿ ಮಾತನಾಡುವಾಗ ಗಿಲ್ಲಿ ಜೊತೆ ಬಂದಿರುವ ಫ್ರೀ ಪ್ರೊಡಕ್ಟ್ ಎಂದು ಕರೆಯುತ್ತಾರೆ. ಈ ಪದ ಬಳಕೆಗೆ ಕಾವ್ಯ ಜೊತೆಯಲ್ಲಿ ಗಿಲ್ಲಿ ಸಹ ತೀವ್ರ ವ್ಯಕ್ತಪಡಿಸಿದ್ದರು.

2.ಕಾರ್ಟೂನ್: ಬಿಗ್‌ಬಾಸ್ ಮನೆಯ ಪುಟ್ಟ ಹುಡುಗಿ ರಕ್ಷಿತಾ ಶೆಟ್ಟಿ. ಸೀಕ್ರೆಟ್ ರೂಮ್‌ನಿಂದ ಬಂದಿರುವ ರಕ್ಷಿತಾ ಶೆಟ್ಟಿ ಸಹ ಒಂಟಿಯಾಗಿದ್ದಾರೆ. ಮನೆಯೊಳಗೆ ಬರುತ್ತಿದ್ದಂತೆ ದೊಡ್ಡಮಟ್ಟದ ಜಗಳ ನೋಡಿ ರಕ್ಷಿತಾ ಗೊಂದಲದಲ್ಲಿದ್ದರು. ಈ ವೇಳೆ ರಕ್ಷಿತಾಳನ್ನು ನೋಡಿ ಅಶ್ವಿನಿ ಗೌಡ, ಏಯ್ ಕಾರ್ಟೂನ್ ಎಂದು ಕರೆಯುತ್ತಾರೆ.

56
ಚರ್ಚೆಯಾಗುತ್ತಾ ಎರಡು ಪದ?

ಈ ಎರಡು ಪದಗಳ ಬಳಗೆ ಬಿಗ್‌ಬಾಸ್ ಕನ್ನಡ ಸೀಸನ್ 12ರ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಎರಡು ಪದಗಳ ಕುರಿತು ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಪ್ರಶ್ನೆ ಮಾಡಬೇಕೆಂದು ಪೋಸ್ಟ್ ಮಾಡುತ್ತಿದ್ದಾರೆ. ಈ ಎಲ್ಲದರ ನಡುವೆ ರಕ್ಷಿತಾ ಶೆಟ್ಟಿ ಸಹ ಆಕ್ರಮಣಕಾರಿಯಾಗಿ ಆಟವಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಉರಿಯೋ ಬೆಂಕಿಗೆ ತುಪ್ಪ ಸುರಿದು ಚೆನ್ನಾಗಿದೆ ಚೆನ್ನಾಗಿದೆ ಎಂದ ಜಾನ್ವಿ & ಅಶ್ವಿನಿ ಗೌಡ

66
ಜಾನ್ವಿ ಬಳಸಿದ್ರು 'ಗಾಂಚಾಲಿ' ಪದ

ಮಂಜು ಭಾಷಿಣಿ ಅವರೊಂದಿಗೆ ಜಗಳ ಮಾಡುತ್ತಿರುವ ಸಂದರ್ಭದಲ್ಲಿ ಜಾನ್ವಿ ಗಾಂಚಾಲಿ ಎಂಬ ಪದ ಬಳಕೆ ಮಾಡುತ್ತಾರೆ. ಇದರಿಂದ ಕೆರಳಿ ಕೆಂಡವಾದ ಮಂಜು ಭಾಷಿಣಿ ಬೇರೆ ಭಾಷೆಯಲ್ಲಿ ತಪ್ಪಾದ ಅರ್ಥ ನೀಡುತ್ತದೆ ಎಂದು ಹೇಳುತ್ತಾರೆ. ನಾವು ಹಳ್ಳಿಯವರು, ಅಹಂಕಾರ, ಧಿಮಾಕು ಎಂಬುದರ ಸಮಾನಾರ್ಥಕವಾಗಿ ಗಾಂಚಾಲಿ ಎಂದು ಬಳಸುತ್ತಾರೆ ಎಂದು ಜಾನ್ವಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅತಿದೊಡ್ಡ ರಿಯಾಲಿಟಿ ಶೋಗೆ ಬೀಗ: ಬಿಗ್‌ಬಾಸ್ ಕಣ್ಣಿಗೆ ಮಣ್ಣೆರಚಿತಾ ಜಾಲಿವುಡ್ ಸ್ಟುಡಿಯೋ?

Read more Photos on
click me!

Recommended Stories