ಚಿನ್ನವನ್ನು ಅಡ ಇಟ್ಟು Bigg Bossಗೆ ಬಟ್ಟೆ ಖರೀದಿಸಿದ್ದೆ: ಕರಿಬಸಪ್ಪ ಭಾವುಕ- ಹೇಳಿದ್ದೇನು ಕೇಳಿ

Published : Oct 09, 2025, 07:54 PM IST

ಬಿಗ್​ಬಾಸ್​ ಕನ್ನಡ ಸೀಸನ್​ 12 ರಿಂದ ಎಲಿಮಿನೇಟ್ ಆದ ಕರಿಬಸಪ್ಪ, ತಮ್ಮ ಎಲಿಮಿನೇಷನ್ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಂದರ್ಶನವೊಂದರಲ್ಲಿ, ಬಿಗ್ ಬಾಸ್ ಮನೆಗೆ ಹೋಗಲು ಬಟ್ಟೆ ಖರೀದಿಸಲು ತಮ್ಮ ಚಿನ್ನದ ಬ್ರೇಸ್ಲೆಟ್ ಅಡವಿಟ್ಟಿದ್ದ ಆಘಾತಕಾರಿ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.

PREV
16
ಬಿಗ್​ಬಾಸ್​​ ಕರಿಬಸಪ್ಪ ಹೇಳಿದ್ದೇನು?

ಸದ್ಯ ಬಿಗ್​ಬಾಸ್​ ಕನ್ನಡ ಸೀಸನ್​ 12 (Bigg Boss Kannada Season 12) ಮನೆಯನ್ನು ಮುಚ್ಚಿ ಮತ್ತೆ ಓಪನ್​ ಮಾಡಲಾಗಿದೆ. ಎಲ್ಲವೂ ಮೊದಲಿನಂತೆಯೇ ನಡೆಯುತ್ತಿದೆ. ಇದರ ನಡುವೆಯೇ, ಇದಾಗಲೇ ಇಬ್ಬರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದಾರೆ. R.J. Amith ಮತ್ತು ಕರಿಬಸಪ್ಪನವರು ಎಲಿಮಿನೇಟ್ ಆಗಿದ್ದಾರೆ. ಅಷ್ಟಕ್ಕೂ ಯಾವುದೇ ಕಾಂಟ್ರವರ್ಸಿ ಇಲ್ಲದ, ಸಾಫ್ಟ್​ ಆಗಿರುವ, ಗಲಾಟೆಗಳಿಗೆ ಹೋಗದ ಕೆಲವರನ್ನು ಬಿಗ್​ಬಾಸ್​ ಮನೆಗೆ ಕಳುಹಿಸುವುದೇ ಮೊದಲ ಕೆಲವು ವಾರಗಳಲ್ಲಿ ಎಲಿಮಿನೇಟ್​ ಮಾಡುವುದಕ್ಕಾಗಿ ಎನ್ನುವ ಮಾತು ಕೂಡ ಇದೆ. ಅದೇ ರೀತಿ ಪ್ರತಿ ಬಾರಿಯೂ ಮೊದಲ ಕೆಲ ವಾರ ಎಲಿಮಿನೇಟ್​ ಆಗುವವರನ್ನು ನೋಡಿದರೆ ಈ ಮಾತು ನಿಜ ಎಂದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುವುದು ಇದೆ.

26
ಒಪ್ಪಂದ ಏನೂ ಇರಲಿಲ್ಲ

ಅದರಲ್ಲಿಯೂ ಬಾಡಿ ಬಿಲ್ಡರ್​ ಆಗಿರುವ ಕರಿಬಸಪ್ಪನವರು, ಬಿಗ್ ಬಾಸ್ ಮನೆಗೆ ಹೋಗಿದ್ದೇ ಒಂದೆರಡು ವಾರಗಳ ಒಪ್ಪಂದದ ಮೇಲೆ ಎಂದು ಕೂಡ ಕೇಳಿಬಂದಿತ್ತು. ಬಾಡಿ ಬಿಲ್ಡಿಂಗ್​ಗೆ ಅವರಿಗೆ ತುಂಬಾ ಆಹಾರ ಸೇವನೆ ಮಾಡಬೇಕು. ಆದರೆ ಬಿಗ್​ಬಾಸ್​ ಮನೆಯಲ್ಲಿ ಅಷ್ಟು ಆಹಾರ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಮೊದಲೇ ಅವರಿಗೆ ಹೇಳಿ ಕಳುಹಿಸಲಾಗಿತ್ತು ಎಂದು ಚರ್ಚೆ ಕೂಡ ಆಗಿತ್ತು. ಆದರೆ ಅಂಥದ್ದೇನೂ ಒಪ್ಪಂದ ಆಗಲಿಲ್ಲ. ಇದು ಸುಖಾಸುಮ್ಮನೆ ಹರಡಿರುವ ಸುದ್ದಿ ಎಂದು ಮಾಧ್ಯಮಗಳಿಗೆ ಕರಿಬಸಪ್ಪ ಇದಾಗಲೇ ಮಾಹಿತಿ ನೀಡಿದ್ದಾರೆ.

36
ಆಘಾತಕಾರಿ ವಿಷಯ ಬಹಿರಂಗ

ಇದೀಗ ಬಾಸ್​ ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕರಿಬಸಪ್ಪನವರು ಇನ್ನೊಂದು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ, ಅವರು ಬಿಗ್​ಬಾಸ್​ ಮನೆಯೊಳಕ್ಕೆ ಹೋಗಲು ಚಿನ್ನವನ್ನು ಅಡವು ಇಟ್ಟು ಬಟ್ಟೆ ಖರೀದಿ ಮಾಡಿದ್ದರು ಎನ್ನುವ ವಿಷಯ!

46
ಚಿನ್ನ ಅಡುವು ಇಟ್ಟೆ

ಬಾಡಿ ಬಿಲ್ಡರ್​ಗೆ ಬೇಕಾದ ಬಟ್ಟೆಗಳಷ್ಟೇ ಇದ್ದವು. ಬಿಗ್​ಬಾಸ್​ ಕೋಟ್ಯಂತರ ಮಂದಿ ನೋಡುವ ಕಾರಣ, ಅಲ್ಲಿ ಚೆನ್ನಾಗಿ ಬಟ್ಟೆ ಧರಿಸಬೇಕು ಎನ್ನುವ ಹಿನ್ನೆಲೆಯಲ್ಲಿ ನನ್ನ ಚಿನ್ನದ ಬ್ರೇಸ್​ಲೈಟ್​ ಅನ್ನು ಅಡವಿಟ್ಟು ಬಟ್ಟೆ ಕೊಂಡುಕೊಂಡಿದ್ದೆ ಎಂದು ಹೇಳಿದ್ದಾರೆ. ಇದಾಗಲೇ ಆರ್​.ಜೆ ಅಮಿತ್​ ಅವರು ಉದ್ಯೋಗಕಕ್ಕೆ ರಿಸೈನ್​ ಮಾಡಿ ಹೋಗಿರುವ ಕಾರಣ, ಈಗ ಕೆಲಸಕ್ಕಾಗಿ ಅಲೆದಾಡುವ ಸ್ಥಿತಿ ಉಂಟಾಗಿದೆ ಎಂದಿದ್ದರೆ, ಕರಿಬಸಪ್ಪ ಈ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

56
ಇದು ಮೆಂಟಲಿ ಆಡುವ ಆಟ

ಅಷ್ಟಕ್ಕೂ ಕರಿಬಸಪ್ಪ ಅವರಿಗೆ ಮೊದಲ ಎಲಿಮಿನೇಷನ್​ ಶಾಕ್​ ಕೊಟ್ಟಿದೆ. 'ನಾನು ಬಾಡಿ ಬಿಲ್ಡಿಂಗ್, ಫಿಸಿಕಲ್ ಟಾಸ್ಕ್ ಇರತ್ತೆ ಅಂದ್ಕೊಂಡಿದ್ದೆ. ಆದರೆ ಬಿಗ್​ಬಾಸ್​ ಎಂದರೆ ಮೆಂಟಲಿ ಆಡೋ ಆಟ. ಅದೇ ಇಲ್ಲಿ ತುಂಬಾ ಇಂಪಾರ್ಟೆಂಟ್ ಅಂತ ಗೊತ್ತಾಯ್ತು. ಊಟ, ನಿದ್ದೆ ಇಲ್ಲದೇ ಇರುವುದು ಹೇಗೆ ಎಂದು ಬಿಗ್ ಬಾಸ್ ಕಲಿಸಿಕೊಟ್ಟಿದೆ ಎಂದೂ ಹೇಳಿದ್ದಾರೆ.

66
ತುಂಬಾ ಖುಷಿ ಇದೆ

ನಾನು ಜೀವ ಇರೋ ತನಕ ಕಲರ್ಸ್ ಕನ್ನಡ ವಾಹಿನಿಯನ್ನು ಮರೆಯುವುದಿಲ್ಲ. ನನ್ನನ್ನು ಜನ ಗುರುತಿಸುತ್ತಿದ್ದಾರೆ. ಇದ್ದದ್ದು ಒಂದೇ ವಾರ ಆದರೂ, ಕೋಟಿ ಕೋಟಿ ಜನರಲ್ಲಿ ನನ್ನನ್ನು ಆಯ್ಕೆ ಮಾಡಿರುವ ಖುಷಿ ಇದೆ. ಇನ್ಮುಂದೆ ನಾನು 'ಬಿಗ್ ಬಾಸ್ ಕರಿಬಸಪ್ಪ' ಅಂತ ಕರೆಸಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತೇನೆ. ಈ ವೇದಿಕೆ ಮೇಲೆ ಮಾತನಾಡುತ್ತಿರುವುದೇ ನನ್ನ ಪುಣ್ಯ ಎಂದು ಕೂಡ ಕರಿಬಸಪ್ಪ ಹೇಳಿದ್ದಾರೆ.

Read more Photos on
click me!

Recommended Stories