Mirai Movie OTT Release: ಭರ್ಜರಿ ಆಕ್ಷನ್‌, ದೈವತ್ವದ ನಡುವಿನ ಘರ್ಷಣೆಯ ಸಿನಿಮಾ ಒಟಿಟಿಗೆ ಬಂತು!

Published : Oct 09, 2025, 06:08 PM IST

ಫ್ಯಾಂಟಸಿ ಆಕ್ಷನ್ ಜಾನರ್‌ನ ಮಿರಾಯ್‌ ಸಿನಿಮಾವು ಜಿಯೋಹಾಟ್‌ಸ್ಟಾರ್‌ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾದಲ್ಲಿ ಏನು ವಿಶೇಷತೆಗಳು ಇವೆ? ಯಾರಿದ್ದಾರೆ? ಈ ಸಿನಿಮಾದ ಕಥೆ ಏನು? ಮುಂತಾದ ವಿಚಾರಗಳು ಇಲ್ಲಿವೆ.  

PREV
15
ಯೋಧನ ಕಥೆ ಈ ಸಿನಿಮಾದಲ್ಲಿದೆ

ವಿಧಿ ಮತ್ತು ದೈವತ್ವ ನಡುವಿನ ಘರ್ಷಣೆ ಇರುವ ಜಗತ್ತಿನಲ್ಲಿ, ಮಿರಾಯ್ ಸಿನಿಮಾವು ಮಾನವೀಯತೆಗೆ ಸಮತೋಲನ, ಭರವಸೆಯನ್ನು ಪುನಃಸ್ಥಾಪಿಸಲು ಎಲ್ಲ ಪ್ರತಿಕೂಲಗಳ ವಿರುದ್ಧ ಹೋರಾಡುವ ಯೋಧನ ಕಥೆ ಈ ಸಿನಿಮಾದಲ್ಲಿದೆ.

25
ಮಿರಾಯ್ ಸಿನಿಮಾದಲ್ಲಿ ಏನಿದೆ?

ಬೆರಗುಗೊಳಿಸುವ ದೃಶ್ಯಗಳು, ಸಿಕ್ಕಾಪಟ್ಟೆ ಫೈಟ್, ನಿಜಕ್ಕೂ ವೀಕ್ಷಕರನ್ನು ತಲ್ಲೀನಗೊಳಿಸುವ ನಿರೂಪಣೆ ಮಿರಾಯ್ ಸಿನಿಮಾದಲ್ಲಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಈ ವರ್ಷದ ಅತಿದೊಡ್ಡ ಪ್ಯಾನ್-ಸೌತ್ ಡಿಜಿಟಲ್ ಬಿಡುಗಡೆಗಳಲ್ಲಿ ಒಂದಾಗಿದೆ.

35
ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ

ವೈಭವದ ದೃಶ್ಯಗಳು, ತೀವ್ರವಾದ ಕಥೆ ಹೇಳುವಿಕೆ ಈ ಸಿನಿಮಾದಲ್ಲಿದೆ. ಹೀಗಾಗಿ ಇದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಒಟ್ಟಿನಲ್ಲಿ ಈ ಸಿನಿಮಾವನ್ನು ನೋಡಲು ವೀಕ್ಷಕರು ಕೂಡ ಕುತೂಹಲದಿಂದ ಇದ್ದಾರೆ.

45
U/A ಪ್ರಮಾಣಪತ್ರ

ಈ ಸಿನಿಮಾಕ್ಕೆ CBFC ದಿಂದ U/A ಪ್ರಮಾಣಪತ್ರ ಸಿಕ್ಕಿದೆ. “ಮಕ್ಕಳು, ಫ್ಯಾಮಿಲಿ ಮತ್ತು ಎಲ್ಲ ವಯೋಮಾನದವರು ಈ ಸಿನಿಮಾವನ್ನು ನೋಡಬಹುದು” ಎಂದು ತೇಜ್ ಸಜ್ಜಾ ಹೇಳಿದ್ದರು.

55
ಸಿನಿಮಾ ರಿಲೀಸ್‌ ಆಗೋದು ಯಾವಾಗ?

2025ರ ಸೆಪ್ಟೆಂಬರ್ 12 ರಂದು ಈ ಸಿನಿಮಾ ರಿಲೀಸ್‌ ಆಗಿದೆ. ಈ ಸಿನಿಮಾವನ್ನು ಕಾರ್ತಿಕ್ ಗಟ್ಟಮನೇನಿ ಅವರು ನಿರ್ದೇಶನ ಮಾಡಿದ್ದಾರೆ.

Read more Photos on
click me!

Recommended Stories