ಬಿಗ್ ಬಾಸ್ 12ರ ಫಿನಾಲೆ ಕುತೂಹಲ ಹೆಚ್ಚಾಗಿದೆ. ಈ ಬಾರಿ ಬಿಗ್ ಬಾಸ್ 12ರ ವಿನ್ನರ್‌ಗೆ ಸಿಗುವ ನಗದು ಹಾಗೂ ಇತರ ಬಹುಮಾನಗಳೇನು? ಸ್ಪರ್ಧಿಗಳಿಗೆ ಬಿಗ್ ಬಾಸ್ ಗೆಲುವು ಯಾಕೆ ಮುಖ್ಯ? ಬಹುಮಾನ ಮೊತ್ತಕ್ಕೆ ತೆರಿಗೆ ಕಟ್ಟಬೇಕಾ?
ಬಿಗ್ ಬಾಸ್ 12 ಕನ್ನಡ ಫಿನಾಲೆಯಲ್ಲಿ ಗೆಲ್ಲುವ ಸ್ಪರ್ಧಿಗೆ ಸಿಗುವ ಬಹುಮಾನಗಳ ಕುರಿತು ಚರ್ಚೆಯಾಗುತ್ತಿದೆ. ಈ ಬಾರಿ ಗಿಲ್ಲಿ ನಟ ಬಿಗ್ ಬಾಸ್ ಗೆಲ್ಲಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದ್ದ ಗಿಲ್ಲಿ ನಟನ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ದಾಖಲೆ ಪ್ರಮಾಣದಲ್ಲಿ ವೋಟಿಂಗ್ ನಡೆದಿದೆ. ಇದೀಗ ಗೆಲ್ಲುವ ಸ್ಪರ್ಧಿಗೆ ಸಿಗುವ ಬಹುಮಾನಗಳೇನು ಅನ್ನೋ ವಿವರ ಇಲ್ಲಿದೆ.
26
ಬಿಗ್ ಬಾಸ್ ವಿನ್ನರ್‌ಗೆ ಅರ್ಧ ಕೋಟಿ
ಬಿಗ್ ಬಾಸ್ 12ರ ವಿನ್ನರ್‌ಗೆ ಬರೋಬ್ಬರಿ 50 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ. 100 ದಿನಗಳ ಸ್ಪರ್ಧೆಯಲ್ಲಿ ಪ್ರತಿ ದಿನ ಸ್ಪರ್ಧಿಗಳ ಜನಪ್ರಿಯತೆ, ಬೇಡಿಕೆ, ಪ್ರಾಮುಖ್ಯತೆಗೆ ಅನುಸಾರವಾಗಿ ಪ್ರತಿ ಎಪಿಸೋಡ್ ಮೊತ್ತವನ್ನು ಪಡೆಯಲಿದ್ದಾರೆ. ಪ್ರಮುಖವಾಗಿ 50 ಲಕ್ಷ ರೂಪಾಯಿ ಬಹುಮಾನದ ಚೆಕ್ ಪ್ರಾಯೋಜಕರಿಂದ ಪಡೆಯಲಿದ್ದಾರೆ.
36
50 ಲಕ್ಷ ರೂ ಜೊತೆ ಕಾರು
ಬಿಗ್ ಬಾಸ್ 12ರ ವಿನ್ನರ್‌ಗೆ 50 ಲಕ್ಷ ರೂಪಾಯಿ ನಗದು ಬಹುಮಾನದ ಜೊತೆಗೆ ಹೊಚ್ಚ ಹೊಸ ಕಾರು ಪಡೆಯಲಿದ್ದಾರೆ. ಈ ಬಾರಿ ಮಾರುತಿ ಸುಜುಕಿ ವಿಕ್ಟೋರಿಸ್ ಎಸ್‌ಯುವಿ ಕಾರು ಪಡೆಯಲಿದ್ದಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 10.50 ಲಕ್ಷ ರೂಪಾಯಿಯಿಂದ 19.99 ಲಕ್ಷ ರೂಪಾಯಿ. ವಿನ್ನರ್‌ಗೆ ಟಾಪ್ ಮಾಡೆಲ್ ಕಾರನ್ನೇ ನೀಡಲಾಗುತ್ತದೆ.
ನಗದು ಬಹುಮಾನ, ಕಾರು ಸೇರಿದಂತೆ ಇತರ ಬಹುಮಾನಗಳಿಗಿಂತ ಪ್ರಮುಖವಾಗಿ ವಿನ್ನರ್‌ಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ. ಬಿಗ್ ಬಾಸ್ ಟ್ರೋಫಿ ಮನರಂಜನಾ ಕ್ಷೇತ್ರದಲ್ಲಿರುವ ಪ್ರತಿಯೊಬ್ಬ ಕಲಾವಿದನಿಗೂ ಅತ್ಯಂತ ಪ್ರಮುಖವಾಗಿದೆ. ಬಿಗ್ ಬಾಸ್ ವಿನ್ನರ್‌ಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ.
56
ಹಲವು ಪ್ರಾಯೋಜಕರಿಂದ ಗಿಫ್ಟ್ ಹ್ಯಾಂಪರ್ಸ್
ಇದೇ ವೇಳೆ ಬಿಗ್ ಬಾಸ್ ವಿನ್ನರ್‌ಗೆ ರಿಯಾಲಿಟಿ ಶೋ ಪ್ರಾಯೋಜಕರಿಂದ ಇತರ ಹಲವು ಬಹುಮಾನಗಳನ್ನು ಪಡೆಯಲಿದ್ದಾರೆ. ಗಿಫ್ಟ್ ಹ್ಯಾಂಪರ್ಸ್ ಸೇರಿದಂತೆ ಹಲವು ಬಹುಮಾನಗಳು ಕೈಸೇರಲಿದೆ. ಬಹುಮಾನವಾಗಿ ಪಡೆಯುವ ನಗದು ಮೊತ್ತಕ್ಕೆ ಸ್ಪರ್ಧಿಗಳು ತೆರಿಗೆ ಪಾವತಿ ಮಾಡಬೇಕು.
66
ಜಾಲಿವುಡ್ ಸ್ಟುಡಿಯೋ ಮುಂದೆ ಪೊಲೀಸರ ಹರಸಾಹಸ
ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಮುಂದೆ ಪೊಲೀಸರು ಅಭಿಮಾನಿಗಳ ನಿಯಂತ್ರಿಸಲು ಹರಸಹಾಸ ಪಡುತ್ತಿದ್ದರೆ. ಈಗಾಗಲೇ ಎರಡು ಬಾರಿ ಲಾಠಿ ಚಾರ್ಜ್ ಮಾಡಲಾಗಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿರುವ ಕಾರಣ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.
ಜಾಲಿವುಡ್ ಸ್ಟುಡಿಯೋ ಮುಂದೆ ಪೊಲೀಸರ ಹರಸಾಹಸ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.